
KRS sounds the battle cry for a corruption-free Karnataka: 21 irregularities exposed at the Kanakagiri Tahsildar's office!

ಲಂಚ ಮುಕ್ತ ಕರ್ನಾಟಕಕ್ಕೆ KRS ಸಮರಶಂಖ: ಕನಕಗಿರಿ ತಹಶೀಲ್ದಾರ್ ಕಚೇರಿಯಲ್ಲಿ 21 ಅವ್ಯವಸ್ಥೆ ಬಯಲು!
ಕನಕಗಿರಿ/ಕಾರಟಗಿ/ಗಂಗಾವತಿ:
ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ವತಿಯಿಂದ ಕನಕಗಿರಿ ತಹಶೀಲ್ದಾರ್ ಕಚೇರಿಯಲ್ಲಿ ‘ಲಂಚ ಮುಕ್ತ ಕರ್ನಾಟಕ’ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಕಚೇರಿಯಲ್ಲಿ ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳು ಹಾಗೂ ಆಡಳಿತಾತ್ಮಕ ಅವ್ಯವಸ್ಥೆಗಳ ಕುರಿತು 21 ಪ್ರಮುಖ ಅಂಶಗಳನ್ನು ಗುರುತಿಸಿ, ಅವುಗಳನ್ನು ತಕ್ಷಣ ಸರಿಪಡಿಸುವಂತೆ ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಅಭಿಯಾನದ ಸಂದರ್ಭದಲ್ಲಿ ಕಚೇರಿಯಲ್ಲಿರುವ ಕೆಲವು ಉತ್ತಮ ವ್ಯವಸ್ಥೆಗಳನ್ನು ಗುರುತಿಸಿರುವ KRS ಕಾರ್ಯಕರ್ತರು, ಸಾರ್ವಜನಿಕರಿಗೆ ಇನ್ನಷ್ಟು ಪರಿಣಾಮಕಾರಿ ಹಾಗೂ ಪಾರದರ್ಶಕ ಸೇವೆ ಒದಗಿಸಲು ಹಲವು ಸುಧಾರಣೆಗಳ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಕಚೇರಿಯಲ್ಲಿರುವ ಉತ್ತಮ ವ್ಯವಸ್ಥೆಗಳು
- ಸಾರ್ವಜನಿಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಇದೆ.
- ಕುಡಿಯುವ ನೀರಿನ ವ್ಯವಸ್ಥೆ ಇದೆ.
- ಪಹಣಿ ಹಾಗೂ ಆರ್ಟಿಸಿ ಪಡೆಯಲು ಸೇವಾ ಕೇಂದ್ರವಿದೆ.


ಅವ್ಯವಸ್ಥೆ ಸರಿಪಡಿಸಲು KRS ಆಗ್ರಹ
- ಯಾವ ಸೇವೆಗೆ ಎಷ್ಟು ಶುಲ್ಕ ಮತ್ತು ಎಷ್ಟು ದಿನಗಳಲ್ಲಿ ಸೇವೆ ದೊರೆಯಲಿದೆ ಎಂಬ ಮಾಹಿತಿ ಫಲಕವಿಲ್ಲ.
- ಅಧಿಕಾರಿಗಳ ಹೆಸರು, ಕೊಠಡಿ ಸಂಖ್ಯೆ ಹಾಗೂ ಅವರು ಲಭ್ಯವಿರುವ ಸಮಯದ ಮಾಹಿತಿ ಪ್ರದರ್ಶಿಸಿಲ್ಲ.
- ಟೋಕನ್ ಅಥವಾ ಸರದಿ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.
- ಅರ್ಜಿ ನಮೂನೆಗಳು ಕನ್ನಡದಲ್ಲಿ ಸ್ಪಷ್ಟವಾಗಿ ಲಭ್ಯವಾಗುತ್ತಿಲ್ಲ.
- ದಲ್ಲಾಳಿಗಳ ಹಾವಳಿ ಇದ್ದು, ಅನಕ್ಷರಸ್ಥ ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
- ಆರ್ಟಿಸಿ ಹಾಗೂ ಪಹಣಿ ತಿದ್ದುಪಡಿ ಕಾರ್ಯಗಳಲ್ಲಿ ತಿಂಗಳುಗಟ್ಟಲೆ ವಿಳಂಬವಾಗುತ್ತಿದೆ ಎಂಬ ದೂರು ಇದೆ.
- ಆನ್ಲೈನ್ ಅರ್ಜಿಗಳ ಸ್ಥಿತಿ ಪರಿಶೀಲಿಸಲು ಸಹಾಯ ಕೇಂದ್ರವಿಲ್ಲ.
- ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ಪ್ರತ್ಯೇಕ ಸರದಿ ವ್ಯವಸ್ಥೆ ಕಲ್ಪಿಸಿಲ್ಲ.
- ಶೌಚಾಲಯದ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕಿದೆ.
- ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಸಾರ್ವಜನಿಕರ ದೂರುಗಳಿವೆ.
- ಲಂಚ ಕೇಳಿದಲ್ಲಿ ದೂರು ನೀಡಲು ದೂರು ಪೆಟ್ಟಿಗೆ ಅಥವಾ ಸಹಾಯವಾಣಿ ಸಂಖ್ಯೆ ಪ್ರದರ್ಶಿಸಿಲ್ಲ.
- ಮಧ್ಯವರ್ತಿಗಳಿಲ್ಲದೆ ನೇರವಾಗಿ ಕೆಲಸ ಮಾಡಿಸಿಕೊಳ್ಳುವ ವ್ಯವಸ್ಥೆಯ ಬಗ್ಗೆ ಸ್ಪಷ್ಟ ಭರವಸೆ ಇಲ್ಲ.
- ಜಾತಿ ಹಾಗೂ ಆದಾಯ ಪ್ರಮಾಣಪತ್ರಗಳಿಗೆ ಅನಗತ್ಯ ದಾಖಲೆಗಳನ್ನು ಕೇಳಲಾಗುತ್ತಿದೆ ಎಂಬ ಆರೋಪವಿದೆ.
- ಕಂದಾಯ ಅದಾಲತ್ ಹಾಗೂ ಸಭೆಗಳ ಮಾಹಿತಿಯನ್ನು ಮುಂಚಿತವಾಗಿ ಸಾರ್ವಜನಿಕರಿಗೆ ತಿಳಿಸಲಾಗುತ್ತಿಲ್ಲ.
- ಕಡತಗಳ ವಿಲೇವಾರಿ ಕುರಿತು ಮಾಹಿತಿ ನೋಟಿಸ್ ಬೋರ್ಡ್ನಲ್ಲಿ ಪ್ರಕಟಿಸಲಾಗುತ್ತಿಲ್ಲ.
- ಸಿಬ್ಬಂದಿ ಸಾರ್ವಜನಿಕರೊಂದಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿವೆ.
- ಎಲ್ಲಾ ಸರ್ಕಾರಿ ಶುಲ್ಕಗಳ ವಿವರಗಳನ್ನು ಡಿಜಿಟಲ್ ಫಲಕದಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು.
- ‘ಲಂಚ ಮುಕ್ತ ಕಚೇರಿ’ ಎಂಬ ಘೋಷಣೆಯೊಂದಿಗೆ ಭ್ರಷ್ಟಾಚಾರ ನಿಗ್ರಹ ದಳದ ಸಂಪರ್ಕ ಸಂಖ್ಯೆಯನ್ನು ಕಚೇರಿಯಲ್ಲಿ ಪ್ರಮುಖವಾಗಿ ಪ್ರದರ್ಶಿಸಬೇಕು.
ಮಾದರಿ ಲಂಚ ಮುಕ್ತ ಕಚೇರಿಯಾಗಲಿ
ಕನಕಗಿರಿ ತಹಶೀಲ್ದಾರ್ ಕಚೇರಿಯಲ್ಲಿ ಗುರುತಿಸಿರುವ ಈ 21 ಅಂಶಗಳನ್ನು ತಕ್ಷಣ ಪರಿಶೀಲಿಸಿ, ಅಗತ್ಯ ಸುಧಾರಣೆ ಕೈಗೊಂಡು ಸಾರ್ವಜನಿಕರಿಗೆ ಪಾರದರ್ಶಕ ಹಾಗೂ ಭ್ರಷ್ಟಾಚಾರ ಮುಕ್ತ ಸೇವೆ ಒದಗಿಸಬೇಕು. ಕಚೇರಿಯನ್ನು ಜಿಲ್ಲೆಯಲ್ಲೇ ಮಾದರಿ ಲಂಚ ಮುಕ್ತ ಕಚೇರಿಯಾಗಿ ರೂಪಿಸಬೇಕು ಎಂದು KRS ಪಕ್ಷದ ಕಾರ್ಯಕರ್ತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ KRS ಪಕ್ಷದ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಸೈನಿಕರು ಉಪಸ್ಥಿತರಿದ್ದು, ಮಾನ್ಯ ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ವರದಿ: ಶರಣಯ್ಯ ಹಿರೇಮಠ, ಕನಕಗಿರಿ
ಕಲ್ಯಾಣಸಿರಿ ವೆಬ್ ನ್ಯೂಸ್
.




