ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಶಿಕ್ಷಕರ ಮೇಲಿದೆ: ವೂಡೇ ಕೃಷ್ಣ ಅಭಿಮತ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

The responsibility of nation-building will be on teachers: Woody Krishna’s opinion

ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಶಿಕ್ಷಕರ ಮೇಲಿದೆ: ವೂಡೇ ಕೃಷ್ಣ ಅಭಿಮತ

ಜಾಹೀರಾತು

 

ಬೆಂಗಳೂರು: ಅ.09: ರಾಷ್ಟ್ರ ನಿರ್ಮಾಣ ಎಂಬ ಘನ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಹಿರಿದಾದುದು ಎಂದು ನಾಡೋಜ ವೂಡೇ ಕೃಷ್ಣ ಅವರು ಅಭಿಮತ ವ್ಯಕ್ತಪಡಿಸಿದರು. ಅವರು ರಾಜಾಜಿನಗರದ ಎಎಸ್ಸಿ ಕಾಲೇಜಿನಲ್ಲಿ ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ (ಕುಪ್ಮಾ) ಸಂಘಟಿಸಿದ್ದ ಬೆಂಗಳೂರು ಜಿಲ್ಲಾ ಕುಪ್ಮಾ ಉತ್ತಮ ಉಪನ್ಯಾಸಕ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ರಾಷ್ಟ್ರದ ಪ್ರತಿಯೊಂದು ಪ್ರಮುಖ ಹುದ್ದೆಗಳಿಗೂ ಉತ್ತಮ ವ್ಯಕ್ತಿಗಳನ್ನು ತಯಾರು ಮಾಡಿ ಕಳಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ ಹೀಗಾಗಿ ಒಂದರ್ಥದಲ್ಲಿ ಸಮಾಜದ ನಿರ್ಮಾಣ ಶಿಕ್ಷಕರ ಮೇಲೆ ನಿಂತಿದೆ, ಹೀಗಾಗಿ ಶಿಕ್ಷಕ ವೃತ್ತಿ ಪ್ರಪಂಚದ ಅತ್ಯಂತ ಶ್ರೇಷ್ಠ ವೃತ್ತಿ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಉಷಾ ಪ್ರಭಾ ನಾಯಕ್ ಅವರು ಮಾತನಾಡಿ, ಕಲಿಸುವಿಕೆ ಎಂಬುದು ಒಂದು ಕಲೆ, ಶಿಕ್ಷಕರು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು, ಪ್ರತಿ ತರಗತಿಯೂ ಪ್ರಮುಖವಾಗಿರುತ್ತದೆ.
ಶಿಕ್ಷಕರಾದವರನ್ನು ಅವರ ಶಿಷ್ಯರೂ ಎಂದಿಗೂ ನೆನಪಿನಲ್ಲಿಟ್ಟುಕೊಂಡು ಗೌರವಿಸುತ್ತಾರೆ. ಇಂತಹ ಅದೃಷ್ಟ ಬೇರೆ ಯಾವ ವೃತ್ತಿಗೂ ಸಿಗಲಾರದು ಎಂದರು.

ಈ ಸಂದರ್ಭದಲ್ಲಿ ಅನೇಕ ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಡಾ. ಲಕ್ಷ್ಮೀ ಪ್ರಸನ್ನ, ರೂಪಾ ಪೈ, ಕೃತ್ತಿಕಾ, ನರೇಂದ್ರ, ಶ್ರೀ ಪ್ರಿಯ, ಮಂಜುನಾಥ್, ಉಷಾರಾಣಿ, ನೇತ್ರಾ, ಡಾ. ವೇದಾವತಿ, ಡಾ. ಪದ್ಮಾವತಿ ಎನ್ ಇವರುಗಳಿಗೆ ಉತ್ತಮ‌ ಉಪನ್ಯಾಸಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ವೇಳೆಯಲ್ಲಿ ಕುಪ್ಮಾ ಬೆಂಗಳೂರಿನ ಉತ್ತರ ಜಿಲ್ಲೆಯ ಅಧ್ಯಕ್ಷರಾದ ಕೀರ್ತನ್ ಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷರಾದ ಡಾ. ಜಯರಾಮ ಶೆಟ್ಟಿ, ಕುಪ್ಮಾ ಬೆಂಗಳೂರು ಜಿಲ್ಲೆಯ ಕಾರ್ಯದರ್ಶಿ ಡಾ.ಬಿ.ಕೆ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article