ಮಾಹಿತಿ ನೀಡದ, ವಿಚಾರಣೆಗೆ ಹಾಜರಾಗದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠದಿಂದ ದಂಡ ವಿಧಿಸಿ ಆದೇಶ*

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Order from the Karnataka Information Commission Kalaburagi Bench imposing a fine on public information officers who do not provide information or appear for inquiry

ಮಾಹಿತಿ ನೀಡದ, ವಿಚಾರಣೆಗೆ ಹಾಜರಾಗದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠದಿಂದ ದಂಡ ವಿಧಿಸಿ ಆದೇಶ*
ಕೊಪ್ಪಳ ಅಕ್ಟೋಬರ್ 09 (ಕರ್ನಾಟಕ ವಾರ್ತೆ): ಸಕಾಲಕ್ಕೆ ಮಾಹಿತಿ ನೀಡಲು ಹಾಗೂ ವಿಚಾರಣೆಗೆ ಹಾಜರಾಗದೆ ನಿರ್ಲಕ್ಷ್ಯ ವಹಿಸಿದ ವಿವಿಧ ಸಾರ್ವಜನಿಕ ಪ್ರಾಧಿಕಾರದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ. ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠ ದಂಡ ವಿಧಿಸಿ ಆದೇಶ ಮಾಡಿದೆ.
ಮೇಲ್ಮನವಿದಾರರು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದು, ಅವರಿಗೆ ಪ್ರತಿವಾದಿಗಳು ಸಕಾಲಕ್ಕೆ ಮಾಹಿತಿ ನೀಡದ ಕಾರಣ ಮೇಲ್ಮನವಿದಾರ ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠದ ಮುಂದೆ ಸಲ್ಲಿಸಿದ ದ್ವಿತೀಯ ಮೇಲ್ಮನವಿಯ ವಿಚಾರಣೆ ನಡೆಸಿದ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಬಿ.ವೆಂಕಟ ಸಿಂಗ್ ಐವರು ಅಧಿಕಾರಿಗಳಿಗೆ ತಲಾ 10 ಸಾವಿರದಂತೆ ಒಟ್ಟು 50 ಸಾವಿರ ದಂಡ ವಿಧಿಸಿ ಆದೇಶ ಮಾಡಿದ್ದಾರೆ.
 ರಾಯಚೂರು ತಾಲೂಕಿನ ಮೇಲ್ಮನವಿದಾರರಿಗೆ ಮಾಹಿತಿ ನೀಡಿ, ಅವರಿಗೆ ನೀಡಿದ ಮಾಹಿತಿ ಮತ್ತು ಸ್ವೀಕೃತಿ ಪತ್ರಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಆಯೋಗ ಮಾಡಿದ ಆದೇಶ ಪಾಲನೆ ಮಾಡದೆ ನಿರ್ಲಕ್ಷ್ಯ ಮಾಡಿದ ಕಾರಣ ಈ ಹಿಂದೆ ಬಸವಕಲ್ಯಾಣ ನಗರಸಭೆ ಪ್ರಥಮ ದರ್ಜೆ ಸಹಾಯಕರಾಗಿದ್ದ ಸೂರ್ಯಕಾಂತಗೆ ಬೋಳಮಾನದೊಡ್ಡಿ ಗ್ರಾಮಪಂಚಾಯತ ಕಾರ್ಯದರ್ಶಿ ಮಲ್ಲಿಕಾರ್ಜುನಗೆ 10 ಸಾವಿರ, ಕಲಬುರಗಿ ಪಾಲಿಕೆ ಪರಿಸರ ಅಭಿಯಂತ ಅಭಯಕುಮಾರಗೆ 10 ಸಾವಿರ, ಕುಷ್ಟಗಿ ತಾಲೂಕಿನ ಜುಮ್ಮಾಪೂರ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗುರಪ್ಪ ನಾಯಕಗೆ 10 ಸಾವಿರ ಹಾಗೂ ಹೊಸಪೇಟೆ ತಾಲೂಕಿನ ನಾಗಲಾಪುರ ಗ್ರಾಮ ಪಂಚಾಯತ್ ಕಾರ್ಯದರ್ಶಿ ರವಿಕುಮಾರಗೆ 10 ಸಾವಿರ ದಂಡ ವಿಧಿಸಿ ಆದೇಶ ಮಾಡಲಾಗಿದೆ.
ಪ್ರತಿವಾದಿ ಅಧಿಕಾರಿಗಳಿಗೆ ವಿಧಿಸಿದ ದಂಡ ಅವರ ಬರುವ ತಿಂಗಳ ವೇತನದಲ್ಲಿ ಕಡಿತಗೊಳಿಸಿ ಆಯೋಗ ಸೂಚಿಸಿದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಿ ರಶೀದಿ ಆಯೋಗಕ್ಕೆ ಸಲ್ಲಿಸಲು ಅನುಕ್ರಮವಾಗಿ ದಂಡನೆಗೊಳಪಟ್ಟ ಮೇಲಾಧಿಕಾರಿಗಳಿಗೆ ಆಯೋಗ ಆದೇಶ ಮಾಡಿದೆ.
ಆಯೋಗದ ಆದೇಶದಂತೆ ದಂಡ ಪಾವತಿ ಮಾಡಬೇಕು ಹಾಗೂ ಆಯೋಗದ ಆದೇಶ ತಲುಪಿದ ತಕ್ಷಣವೇ ಮೇಲ್ಮನವಿದಾರರಿಗೆ ಮಾಹಿತಿ ನೀಡಿ ಅದರ ಪ್ರತಿ ಮತ್ತು ಸ್ವೀಕೃತಿ ಪತ್ರ ಆಯೋಗಕ್ಕೆ ಸಲ್ಲಿಸಿ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಪ್ರತಿವಾದಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಅಧಿನಿಯಮ 2005 ರ 18 (3) ರಡಿ ಆದೇಶಿಸಿ, ತಪ್ಪಿದಲ್ಲಿ ಮಾಹಿತಿ ಹಕ್ಕು ಅಧಿನಿಯಮ 2005 ರ 20 (2) ರಡಿ ಎಚ್ಚರಿಕೆ ನೀಡಿದೆ. ಹಾಗೂ ಪ್ರತಿವಾದಿಗಳ ಪ್ರಥಮ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳು ಈ ಕುರಿತು ಕ್ರಮ ವಹಿಸಲು ಸೂಚನೆ ನೀಡಿ ತಪ್ಪಿದಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದೆ.
Total Views: 0
ಜಾಹೀರಾತು
Share This Article