ಅಕ್ಟೋಬರ್ 11ರಂದು ಕೊಪ್ಪಳದಲ್ಲಿ ಯು-16 ರಾಪಿಡ್ ಚೆಸ್ ಪಂದ್ಯಾವಳಿ ಆಯೋಜನೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

U-16 Rapid Chess tournament to be organized in Koppal on October 11

ಅಕ್ಟೋಬರ್ 11ರಂದು ಕೊಪ್ಪಳದಲ್ಲಿ ಯು-16 ರಾಪಿಡ್ ಚೆಸ್ ಪಂದ್ಯಾವಳಿ ಆಯೋಜನೆ

ಕೊಪ್ಪಳ ಅಕ್ಟೋಬರ್ 07 (ಕರ್ನಾಟಕ ವಾರ್ತೆ): ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಜಿಲ್ಲಾ ಚೆಸ್ ಅಮೆಚೂರ್ ಅಸೋಶಿಯೇಷನ್ (ಕೆಡಿಸಿಎಎ) ಹಾಗೂ ಗದಗ ಚೆಸ್ ಅಕಾಡೆಮಿ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ ಯು-16 ರಾಪಿಡ್ ಚೆಸ್ ಟೂರ್ನಾಮೆಂಟ್‌ನ್ನು ಅಕ್ಟೋಬರ್ 11ರ ಭಾನುವಾರದಂದು ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಚೆಸ್ ಟೂರ್ನಾಮೆಂಟ್‌ ಪಂದ್ಯಾವಳಿಯಲ್ಲಿ ಯು-09, ಯು-11, ಯು-13 ಹಾಗೂ ಯು-16 ವಯೋಮಾನದ ವಿಭಾಗಗಳಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿವೆ.
*ನಿಯಮಗಳು ಹಾಗೂ ಸಮಯ:* ಫಿಡೆ (ಎಫ್ಐಡಿಇ) ರಾಪಿಡ್ ನಿಯಮಗಳ ಅನ್ವಯ ಸ್ವಿಸ್ ಲೀಗ್ ಪದ್ಧತಿಯಲ್ಲಿ ಪಂದ್ಯಾವಳಿ ಜರುಗಲಿದ್ದು, ಪ್ರತಿ ಆಟಕ್ಕೆ 20 ನಿಮಿಷಗಳ ಮೂಲ ಸಮಯ ಮತ್ತು ಪ್ರತಿ ನಡೆಗೆ 5 ಸೆಕೆಂಡುಗಳ ಇನ್‌ಕ್ರಿಮೆಂಟ್ ನೀಡಲಾಗುವುದು. ಭಾಗವಹಿಸುವ ಎಲ್ಲಾ ಸ್ಪರ್ಧಿಗಳು ಅಕ್ಟೋಬರ್ 11ರಂದು ಬೆಳಿಗ್ಗೆ 9 ಗಂಟೆಗೆ ಕ್ರೀಡಾಂಗಣದಲ್ಲಿ ಹಾಜರಿದ್ದು ವರದಿ ಮಾಡಿಕೊಳ್ಳಬೇಕು. ಮೊದಲ ಸುತ್ತಿನ ಪಂದ್ಯವು ಅಂದು ಬೆಳಿಗ್ಗೆ 9:30ಕ್ಕೆ ಪ್ರಾರಂಭವಾಗಲಿದೆ.
*ಬಹುಮಾನಗಳು:* ಪ್ರತಿ ವಿಭಾಗದಲ್ಲೂ ಬಾಲಕರ ವಿಭಾಗದಲ್ಲಿ ಟಾಪ್-5 ಹಾಗೂ 6 ರಿಂದ 10ನೇ ಸ್ಥಾನ ಮತ್ತು ಬಾಲಕಿಯರ ವಿಭಾಗದಲ್ಲಿ ಟಾಪ್-3 ಹಾಗೂ 4 ಮತ್ತು 5ನೇ ಸ್ಥಾನ ಪಡೆಯುವವರಿಗೆ ಟ್ರೋಫಿ ಮತ್ತು ಪದಕಗಳನ್ನು ವಿತರಿಸಲಾಗುವುದು. ಒಟ್ಟಾರೆಯಾಗಿ ವಿವಿಧ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ 60 ಬಹುಮಾನಗಳನ್ನು ನೀಡಲಾಗುತ್ತದೆ.
ಪ್ರವೇಶ ಶುಲ್ಕ ಪ್ರತಿ ಆಟಗಾರರಿಗೆ 500 ರೂ. ಆಗಿದ್ದು, ಸೀಮಿತ ಪ್ರವೇಶಗಳಿಗೆ ಮಾತ್ರ ಅವಕಾಶವಿರುತ್ತದೆ. ಆಸಕ್ತ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಹಾಗೂ ಪಾವತಿಗಾಗಿ ಪ್ರಜ್ವಲೇಶ್ ಹರ್ತಿ ಮೊ.ಸಂ: 9535027184, ಇವರನ್ನು ಅಥವಾ ಹೆಚ್ಚಿನ ವಿವರಗಳಿಗಾಗಿ ಮೊ.ಸಂ: 7338022730, 7019506442 ನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
Total Views: 0
ಜಾಹೀರಾತು
Share This Article