Kannada Sena protests massively against the release of Tungabhadra water from Kaveri to Andhra Pradesh to Tamil Nadu
ಗಂಗಾವತಿ ಕನ್ನಡ ಸೇನೆ ಕರ್ನಾಟಕ ನೇತೃತ್ವದಲ್ಲಿ ಶುಕ್ರವಾರದಂದು ಜೀವನದಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಹಾಗೂ ತುಂಗಭದ್ರಯ್ಯ ನೀರನ್ನು ಆಂಧ್ರಪ್ರದೇಶಕ್ಕೆ ಬಿಡುವುದನ್ನು ವಿರೋಧಿಸಿ ಶುಕ್ರವಾರದಂದು ತಹಸೀಲ್ದಾರ್ ಕಾರ್ಯಾಲಯದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರ್ಯಕರ್ತ ಈ ಸಂದರ್ಭದಲ್ಲಿ ಸಂಘದ ತಾಲೂಕ ಅಧ್ಯಕ್ಷ ಮಂಜುನಾಥ ಪತ್ತಾರ್ ಮಾತನಾಡಿ ಮಳೆ ಅಪಾಯದಿಂದ ಕಾವೇರಿ ಹಾಗೂ ತುಂಗಭದ್ರ ಮಡಿಲು ಬರಿದಾಗಿದ್ದು ಇಂತಹ ಸಂದರ್ಭದಲ್ಲಿ ತಮಿಳುನಾಡು ಹಾಗೂ ಆಂಧ್ರಕ್ಕೆ ನೀರು ಹರಿಸುವುದು ಕರ್ನಾಟಕ ರಾಜ್ಯದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ತಿಳಿಸಿದರು ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜಲ ಸಮಸ್ಯೆ ನಿವಾರಣೆಗಾಗಿ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಹೇಳಿದರು ದಿನನಿತ್ಯ ತಮಿಳುನಾಡಿಗೆ 5000 ಕ್ಯೂ ಸೆಕ್ಸ್ ನೀರನ್ನು ಹರಿಸುವುದನ್ನು ನಿಲ್ಲಿಸಬೇಕು ಇದರಿಂದ ಮಂಡ್ಯ ಬೆಂಗಳೂರು ಹಾಗೂ ಮೈಸೂರು ರೈತರಿಗೆ ಹಾಗೂ ಕುಡಿಯುವ ನೀರಿಗೆ ಆಹಾಕಾರ ಆಗುವುದನ್ನು ತಪ್ಪಿಸಬೇಕೆಂದು ಹೇಳಿದರು ಈ ಸಂದರ್ಭದಲ್ಲಿ ಕನ್ನಡ ಸೇನೆ ಕಾರ್ಯಕರ್ತರಾದ ವಿರುಪಾಕ್ಷಿ ಗಂಗಣ್ಣ ಮಲ್ಲಿಕಾರ್ಜುನ ನಾಗರಾಜ್ ಲಕ್ಷ್ಮಣ ಸೈಯದ್ ಬಸವರಾಜ್ ಕೆ ಅಮರೇಶ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು ಬಳಿಕ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು