ರೋಟರಿ ರೈಸ್ ಬಾಲ್ ಮಹಿಳಾ ಸಂಸ್ಥೆಯಿಂದ ನಾಲ್ಕು ವ್ಹೀಲ್‌ಚೇರ್‌ಗಳ ವಿತರಣೆ

H.Mallikarjun
H.Mallikarjun - Kalyanasiri
1 Min Read

Distribution of four wheelchairs by the Rotary Rice Ball Women's Organization

ರೋಟರಿ ರೈಸ್ ಬಾಲ್ ಮಹಿಳಾ ಸಂಸ್ಥೆಯಿಂದ ನಾಲ್ಕು ವ್ಹೀಲ್‌ಚೇರ್‌ಗಳ ವಿತರಣೆ

ಹೊಲಿಗೆ ತರಬೇತಿಗೆ ನೆರವಾಗುವ ನಿಟ್ಟಿನಲ್ಲಿ ಎರಡು ಹೊಲಿಗೆ ಯಂತ್ರಗಳೂ ವಿತರಣೆ

ಜಾಹೀರಾತು

ಗಂಗಾವತಿ, ಸೆ.16: ನಗರದ ಹೆಚ್.ಆರ್.ಎಸ್. ಕಾಲೋನಿಯಲ್ಲಿರುವ ರೋಟರಿ ಸಂಸ್ಥೆಯ ಕಾರ್ಯಾಲಯದಲ್ಲಿ ರೋಟರಿ ರೈಸ್ ಬಾಲ್ ವುಮೆನ್ಸ್ ಕ್ಲಬ್ ವತಿಯಿಂದ ನಾಲ್ಕು ವ್ಹೀಲ್‌ಚೇರ್‌ಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಗಂಗಾವತಿ ತಹಶೀಲ್ದಾರರಾದ ಯು. ವಸಂತಕುಮಾರಿ ಅವರಿಂದ ಎರಡು ಹೊಲಿಗೆ ಯಂತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಬಸಮ್ಮ, ಕಾರ್ಯದರ್ಶಿ ಶ್ರೀಮತಿ ಗೀತಾ ಚೌದ್ರಿ, ಖಜಾಂಚಿ ಸೋಫಿಯಾ ರಾಣಿ, ಮಾರ್ಗದರ್ಶಕಿ ಶಾಹಿನ್ ಕೌಸರ್, ಫಂಡ್ ರೈಸರ್ ಲಲಿತ ನಾಗರಾಜ್, ಸದಸ್ಯರಾದ ಶ್ರೀದೇವಿ, ನಾಗರತ್ನ, ರಾಜೇಶ್ವರಿ, ಸಾಯಿ ಕೀರ್ತಿ, ಚಂದುಶ್ರೀ ಹಾಗೂ ಅಂಬಿಕಾ ಚೌದರಿ ಸೇರಿದಂತೆ ಫಲಾನುಭವಿಗಳು ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article