ಪಿಂಚಣಿ ಸ್ಥಗಿತಕ್ಕೆ ಕೊಪ್ಪಳದಲ್ಲಿ ಬಡವರ ಆಕ್ರೋಶ: ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ!

H.Mallikarjun
H.Mallikarjun - Kalyanasiri
1 Min Read

Outrage among the poor in Koppal over the suspension of pensions: Protest held in front of the Deputy Commissioner's office!

ಪಿಂಚಣಿ ಸ್ಥಗಿತಕ್ಕೆ ಕೊಪ್ಪಳದಲ್ಲಿ ಬಡವರ ಆಕ್ರೋಶ: ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ!

ಜಾಹೀರಾತು


ವೃದ್ಧರು, ವಿಧವೆಯರು, ವಿಕಲಚೇತನರ ಬದುಕಿನ ಆಸರೆ ಕಸಿಯಬೇಡಿ: ಬಾಕಿ ಪಿಂಚಣಿ ಬಿಡುಗಡೆ, ಸ್ಥಗಿತಗೊಂಡ ಪಿಂಚಣಿ ಮರುಜಾರಿಗೆ ಎಸ್‌ಯುಸಿಐ(ಕಮ್ಯುನಿಸ್ಟ್) ಆಗ್ರಹ


ಕೊಪ್ಪಳ, ಸೆ.2: ಸಾಮಾಜಿಕ ಭದ್ರತಾ ಪಿಂಚಣಿ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಫಲಾನುಭವಿಗಳು ಪ್ರತಿಭಟನೆ ನಡೆಸಿದರು. ಅರ್ಹ ಫಲಾನುಭವಿಗಳ ಪಿಂಚಣಿಯನ್ನು ಕೂಡಲೇ ಮರುಜಾರಿಗೊಳಿಸಿ, ಹಲವು ತಿಂಗಳ ಬಾಕಿ ಹಣವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಶರಣು ಗಡ್ಡಿ: “ಪಿಂಚಣಿಯೇ ದುರ್ಬಲ ವರ್ಗದವರ ಬದುಕಿನ ಪ್ರಮುಖ ಆಸರೆ; ಪರಿಶೀಲನೆ ಹೆಸರಿನಲ್ಲಿ ಅರ್ಹರನ್ನು ಕಚೇರಿಗಳಿಗೆ ಅಲೆದಾಡಿಸುವುದು ನಿಲ್ಲಬೇಕು” ಎಂದು ಒತ್ತಾಯಿಸಿದರು.
ಪ್ರಮುಖ ಬೇಡಿಕೆಗಳು:
▪️ ಸ್ಥಗಿತಗೊಂಡಿರುವ ಅರ್ಹ ಫಲಾನುಭವಿಗಳ ಪಿಂಚಣಿ ಕೂಡಲೇ ಮರುಜಾರಿ
▪️ ಬಾಕಿ ಉಳಿದಿರುವ ಪಿಂಚಣಿ ಹಣ ಸಂಪೂರ್ಣ ಬಿಡುಗಡೆ
▪️ ಪರಿಶೀಲನೆ ಹೆಸರಿನಲ್ಲಿ ಅನಗತ್ಯ ತೊಂದರೆ ನೀಡದಂತೆ ಕ್ರಮ
▪️ ಯಾವುದೇ ಅರ್ಹ ಫಲಾನುಭವಿಯನ್ನು ಪಿಂಚಣಿ ಯೋಜನೆಯಿಂದ ಕೈಬಿಡದಂತೆ ಖಾತರಿ
▪️ ಬೆಲೆ ಏರಿಕೆಗೆ ಅನುಗುಣವಾಗಿ ಸಾಮಾಜಿಕ ಭದ್ರತಾ ಪಿಂಚಣಿ ಮೊತ್ತ ಹೆಚ್ಚಳ

Total Views: 0
ಜಾಹೀರಾತು
Share This Article