ಗ್ಯಾರಂಟಿ ಯೋಜನೆಗಳು ಬಡವರಿಗೆ ವರದಾನ: ರೆಡ್ಡಿ ಶ್ರೀನಿವಾಸ

H.Mallikarjun
H.Mallikarjun - Kalyanasiri
5 Min Read

Guarantee schemes are a boon for the poor: Reddy Srinivas

ಗ್ಯಾರಂಟಿ ಯೋಜನೆಗಳು ಬಡವರಿಗೆ ವರದಾನ: ರೆಡ್ಡಿ ಶ್ರೀನಿವಾಸ
ಕೊಪ್ಪಳ ಆಗಸ್ಟ್ 31 (ಕರ್ನಾಟಕ ವಾರ್ತೆ): ‘ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು’ ಎಂಬ ಆಶಯದಡಿ ರಾಜ್ಯ ಸರ್ಕಾರವು ಜಾರಿ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ವರದಾನವಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಎಲ್ಲ ಯೋಜನೆಗಳು ಉತ್ತಮವಾಗಿ ಅನುಷ್ಠಾನವಾಗುತ್ತಿವೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಅವರು ಹೇಳಿದರು.
ಜಿಲ್ಲಾ ಪಂಚಾಯತಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಗಸ್ಟ್ 31ರಂದು ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೃಹಜ್ಯೋತಿ ಸೇರಿದಂತೆ ಬೇರೆ ಬೇರೆ ಪಂಚ ಗ್ಯಾರಂಟಿ ಯೋಜನೆಗಳ ದಾಖಲಾತಿಗಳ ಬಗ್ಗೆ ಮರು ಪರಿಶೀಲನಾ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ಗ್ಯಾರಂಟಿ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ ಎಂದು ಅವರು ತಿಳಿಸಿದರು.
ಗೃಹಲಕ್ಷಿö್ಮÃ ಯೋಜನೆಯಡಿ ಫಲಾನುಭವಿ ಮರಣ ಹೊಂದಿದ ಮೇಲೂ ಅವರ ವಾರಸುದಾರರು ಅಥವಾ ಮನೆಯವರು ಆ ಹಣವನ್ನು ಬಳಕೆ ಮಾಡಿದ್ದು, ಅದನ್ನು ಮರಳಿ ನೀಡಲು ಈ ಹಿಂದೆ ಮೃತರಿಗೆ ತಿಳುವಳಿಕೆ ನೀಡಿದ್ದಾಗ್ಯೂ ನಿರೀಕ್ಷಿತ ಪ್ರಮಾಣದಲ್ಲಿ ಅಂತಹ ಹಣವನ್ನು ಸರ್ಕಾರಕ್ಕೆ ಮರಳಿ ಪಾವತಿಸಿಲ್ಲ. ಆದರಿಂದ ಇನ್ನು ಮುಂದೆ ಇಂತಹ ಪ್ರಕರಣಗಳಲ್ಲಿ ಮೃತರ ವಾರಸುದಾರರಿಗೆ ಅಥವಾ ಮನೆಯವರಿಗೆ ಹಣ ಮರುಪಾವತಿಸುವಂತೆ ಸೂಕ್ತ ನೋಟಿಸ್ ನೀಡಿ, ಭವಿಷ್ಯದಲ್ಲಿ ಇದು ಮರುಕಳಿಸದಂತೆ ಎಚ್ಚರ ವಹಿಸಬೇಕು.
ರಾಜ್ಯಾದ್ಯಂತ ಗೃಹಲಕ್ಷಿö್ಮÃ ಯೋಜನೆಯ ಫಲಾನುಭವಿಗಳ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಅದರಂತೆ ನಮ್ಮ ಜಿಲ್ಲೆಯಲ್ಲಿ 7,086 ಫಲಾನುಭವಿಗಳು ಮೃತಪಟ್ಟಿದ್ದು, ಅದರಲ್ಲಿ 2,664 ಫಲಾನುಭವಿಗಳ ಖಾತೆಗೆ ಮರಣ ಹೊಂದಿದ ನಂತರ 13,709 ಕಂತುಗಳಲ್ಲಿ ಒಟ್ಟು ರೂ.2,74,18,000/- ಮೊತ್ತವು ಮರಣ ಹೊಂದಿದ ನಂತರ ಜಮೆಯಾದ ಧನಸಹಾಯವಾಗಿರುತ್ತದೆ. ಇದರಲ್ಲಿ ರೂ.87,64,608/- ಗಳನ್ನು ಸರ್ಕಾರಕ್ಕೆ ಮರುಪಾವತಿಸಲಾಗಿದೆ. ರೂ.1,86,53,392/- ಮೊತ್ತ ಮರುಪಾವತಿ ಬಾಕಿ ಇದೆ. ರೂ.1,96,000/- ಗಳನ್ನು ಬ್ಯಾಂಕ್ ಖಾತೆಗಳಲ್ಲಿಯೇ ಫ್ರೀಜ್ ಮಾಡಲಾಗಿದೆ. ಮರಣ ಹೊಂದಿದ ಫಲಾನುಭವಿಗಳ ಕುಟುಂಬದ ಸದಸ್ಯರು ಮೃತರ ಖಾತೆಯಿಂದ ಡ್ರಾ ಮಾಡಿಕೊಂಡಿರುವ ಮೊತ್ತ ರೂ.2,64,147/- ಆಗಿದ್ದು, ಸರ್ಕಾರಕ್ಕೆ ಮರುಪಾವತಿಸುವಂತೆ ಕುಟುಂಬ ಸದಸ್ಯರಿಗೆ ಸೂಕ್ತ ತಿಳುವಳಿಕೆ ನೀಡಿ, ಚಲನ್‌ಗಳನ್ನು ಸೃಜಿಸಿ ವಿತರಿಸಲಾಗಿದೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಇದುವರೆಗೂ ಸರ್ಕಾರಕ್ಕೆ ಹಣ ಪಾವತಿಸಿರುವುದಿಲ್ಲ. ಆದ್ದರಿಂದ ಇನ್ನುಮುಂದೆ ನಿಯಮಾನುಸಾರ ಗಡುವು ನಿಗದಿಪಡಿಸಿ ಹೆಚ್ಚುವರಿ ಸೆಳೆದ ಹಣವನ್ನು ಮರುಪಾವತಿಸುವಂತೆ ಸೂಕ್ತ ನೋಟಿಸ್ ನೀಡಿ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ಶಕ್ತಿ ಯೋಜನೆಯಡಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದಲ್ಲಿ ಜೂನ್ 2023 ರಿಂದ ಜುಲೈ 2026 ರವರೆಗೆ 12,23,60,828 ವಯಸ್ಕರು ಹಾಗೂ 48,37,871 ಮಕ್ಕಳು ಸೇರಿದಂತೆ ಒಟ್ಟು 12,71,98,699 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇದಕ್ಕಾಗಿ ವಿಭಾಗದಿಂದ ರೂ.4,76,38,79,212/- ಗಳನ್ನು ವೆಚ್ಚ ಮಾಡಲಾಗಿದೆ. ಮಹಿಳಾ ಪ್ರಯಾಣಿಕರಿಗೆ ಶೀಘ್ರದಲ್ಲಿಯೇ ಮೆಟ್ರೋ ಕಾರ್ಡಗಳ ರೀತಿ ಸ್ಮಾರ್ಟ್ ಐಡಿ ಕಾರ್ಡ್ ಗಳನ್ನು ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಅಧ್ಯಕ್ಷರು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಜೆಸ್ಕಾಂ ಕೊಪ್ಪಳ ವಿಭಾಗದಲ್ಲಿ 1,39,966 ಹಾಗೂ ಗಂಗಾವತಿ ವಿಭಾಗದಲ್ಲಿ 1,46,764 ಫಲಾನುಭವಿಗಳು ಸೇರಿದಂತೆ ಒಟ್ಟು 2,86,730 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಶೇ.98.92 ರಷ್ಟು ಫಲಾನುಭವಿಗಳ ನೋಂದಣಿ ಪೂರ್ಣಗೊಂಡಿದ್ದು, ಆಗಸ್ಟ್ 2023 ರಿಂದ ಜುಲೈ 2026 ರವರೆಗೆ ಒಟ್ಟು ರೂ.430.06 ಕೋಟಿ ಗಳ ಸಬ್ಸಿಡಿಯನ್ನು ಬಿಡುಗಡೆ ಮಾಡಲಾಗಿದೆ. ಬಾಕಿ ಇರುವ ಫಲಾನುಭವಿಗಳ ಸರ್ವೇ ಕಾರ್ಯವನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಯುವನಿಧಿ ಯೋಜನೆಯಡಿ ಡಿಸೆಂಬರ್ 2023 ರಿಂದ ಆಗಸ್ಟ್ 29, 2026 ರವರೆಗೆ 15,764 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಒಟ್ಟು ರೂ.43,41,42,000/- ಗಳ ಮೊತ್ತವನ್ನು ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಜಮೆ ಮಾಡಲಾಗಿದೆ. ಇದರೊಂದಿಗೆ ಯುವನಿಧಿ ಪ್ಲಸ್ ತರಬೇತಿ ಕಾರ್ಯಕ್ರಮದಡಿ ಸಿಡಾಕ್ ನಿಂದ 34 ಅಭ್ಯರ್ಥಿಗಳು ಹಾಗೂ ಕೊಪ್ಪಳ ಸರ್ಕಾರಿ ಐಟಿಐ ಸಂಸ್ಥೆಯಿAದ 30 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಯೋಜನೆಯ ಲಾಭ ಪಡೆದ ಫಲಾನುಭವಿಗಳಲ್ಲಿ ಯೋಜನೆಯ ಮಾನದಂಡಗಳನ್ನು ಪೂರ್ಣಗೊಳಿಸಿದ ಹಾಗೂ ಉನ್ನತ ಶಿಕ್ಷಣ ಅಥವಾ ಉದ್ಯೋಗ ದೊರೆತ ಅಭ್ಯರ್ಥಿಗಳ ಪಟ್ಟಿಯನ್ನು ಪರಿಶೀಲಿಸಿ, ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಿ, ಅರ್ಹರಿಗೆ ಯೋಜನೆಯ ಲಾಭ ಒದಗಿಸಿ. ತರಬೇತಿ ಹಾಗೂ ಯೋಜನೆಯ ಕುರಿತು ಕಾಲೇಜು, ಯುವ ಸಮುದಾಯಗಳ ಕಾರ್ಯಕ್ರಮಗಳಲ್ಲಿ ಜಾಗೃತಿ ಮೂಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜುಲೈ 2026 ರವರೆಗೆ ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ ಅನ್ನಭಾಗ್ಯ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ 4,10,53,652.80/- ರೂ. ಗಳನ್ನು ಪಾವತಿಸಲಾಗಿದೆ. ಅರ್ಹ ಪಡಿತರ ಚೀಟಿದಾರರಿಗೆ ನಿಯಮಾನುಸಾರ ಪಡಿತರ ವಿತರಣೆಗೆ ಕ್ರಮ ವಹಿಸಿ. ಇತ್ತೀಚೆಗೆ ಗಂಗಾವತಿಯಲ್ಲಿ ಪತ್ತೆಯಾದ ಅಕ್ರಮ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಜಪ್ತಿ ಮಾಡಿ ನಿಯಮಾನುಸಾರ ಅರ್ಹರಿಗೆ ವಿತರಿಸಿ. ತಪ್ಪಿತಸ್ಥ ನ್ಯಾಯಬೆಲೆ ಅಂಗಡಿಯ ಪರವಾನಿಗೆಯನ್ನು ಅಮಾನತ್ತು ಮಾಡಲಾಗಿದ್ದು, ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ವಹಿಸಿ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಮಾತನಾಡಿ, ಗೃಹಲಕ್ಷಿö್ಮÃ ಬಾಕಿ ಸರ್ವೇ ಕಾರ್ಯದಲ್ಲಿ ತಾಂತ್ರಿಕ ತೊಂದರೆಗಳು ಇದ್ದು, ಅವುಗಳನ್ನು ಪರಿಹರಿಸಿ ನಿಗದಿತ ಅವಧಿಯೊಳಗೆ ಸರ್ವೇ ಕಾರ್ಯ ಪೂರ್ಣಗೊಳಿಸಿ. ಪ್ರತಿ ಯೋಜನೆಯಲ್ಲೂ ಫಲಾನುಭವಿಗಳ ಯಶೋಗಾಥೆಯನ್ನು ತಯಾರಿಸಿ ಸಲ್ಲಿಸಿ ಎಂದು ಸಂಬAಧಿಸಿದ ಅನುಷ್ಠಾನ ಅಧಿಕಾರಿಗಳಿಗೆ ಸೂಚಿಸಿದರು.
ಮಾತನಾಡಿ,
ಉಪಾಧ್ಯಕ್ಷರಿಂದ ಸಲಹೆ: ಐಟಿ, ಜಿಎಸ್‌ಟಿ ಕಾರಣಗಳಿಂದ ಗೃಹಲಕ್ಷ್ಮೀ ನಿಂತಿದ್ದರೆ ಅದಕ್ಕೆ ಸೂಕ್ತ ಕಾರಣಗಳನ್ನು ಫಲಾನುಭವಿಗಳಿಗೆ ಕೊಡಬೇಕು. ಗೃಹಲಕ್ಷ್ಮೀ ಹಣ ಯಾವುದೇ ಕಾರಣಕ್ಕೂ ಗೋಲ್ ಮಾಲ್ ಆಗಲು ಸಾಧ್ಯವಿಲ್ಲ, ಅದು ಡಿಬಿಟಿ ಮೂಲಕ ಹೋಗುತ್ತಿದೆ ಎಂಬ ವಿಷಯವನ್ನು ಇಲಾಖೆ ಮೂಲಕ ಮಾಧ್ಯಮಗಳಿಗೆ ಮಾಹಿತಿ ಕೊಡಬೇಕು. ಜಿಎಸ್‌ಟಿ ಮತ್ತು ಐಟಿ ಇಲ್ಲ ಎಂದು ಇಲಾಖೆಯವರೇ ಹೇಳಿದರೂ ತಪ್ಪಾಗಿ ಫಲಾನುಭವಿಗಳ ಹಣ ಜಮೆ ಆಗದಿದ್ದರೆ ಅದನ್ನು ಸರಿ ಮಾಡುವ ಕೆಲಸ ಆಗಬೇಕಿದೆ. ಜಿಎಸ್ಟಿ ಮಾಡದೇ ಇದ್ದರೂ ತಾಂತ್ರಿಕ ದೋಷದಿಂದ ಅರ್ಹ ಫಲಾನುಭವಿಗೆ ಯೋಜನೆ ದೊರೆಯದಿರುವದನ್ನು ಹೆಚ್ಚಿನ ಮುತುವರ್ಜಿಯಿಂದ ಸರಿಮಾಡಬೇಕು. ಮರುಪರಿಶೀಲನೆ ಸಮಯದಲ್ಲಿ 15 ರೂ. ಮಾತ್ರ ಪಡೆಯಬೇಕು ಅದಕ್ಕೆ ಪ್ರತಿಯೊಂದು ಆನ್‌ಲೈನ್ ಕೇಂದ್ರದ ಹೊರಗೆ ಬೋರ್ಡ್ ಹಾಕಬೇಕು. ಗೃಹಲಕ್ಷ್ಮೀ ಹಣ ತಲುಪಿದ ಮಾಹಿತಿಯನ್ನು ಗ್ರಾಮ ಪಂಚಾಯತಿ ವಾರು ಜನರಿಗೆ ತಿಳಿಸುವ ಕೆಲಸ ಆಗಬೇಕು. ಬಸ್ ನಿಲ್ದಾಣದಲ್ಲಿ ಆಡಿಯೋ ವಿಡಿಯೋ ಜಾಹೀರಾತು ಬೋರ್ಡಗಳಲ್ಲಿ ಶಕ್ತಿ ಯೋಜನೆಯ ಕುರಿತು ಪ್ರಚಾರ ಮಾಡಬೇಕು. ಕೊಪ್ಪಳದಲ್ಲಿ ಶಕ್ತಿ ಯೋಜನೆಯ ಪ್ರಯಾಣ 500 ಕೋಟಿ ರೂ. ತಲುಪಿದ ಕಾರಣ ಬಸ್ ಹಿಂದೆ ದೊಡ್ಡಮಟ್ಟದ ಪ್ರಚಾರ ಮಾಡಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷರಾದ ಮಂಜುನಾಥ ಜಿ. ಗೊಂಡಬಾಳ, ಎಸ್.ಬಿ.ಖಾದ್ರಿ, ಅಮರೇಶಪ್ಪ ಶರಣಪ್ಪ ಗಾಂಜಿ ಅವರು ಸಭೆಗೆ ಸಲಹೆ ಮಾಡಿದರು.
ಎಲ್ಲ ಸದಸ್ಯರಿಂದ ಮಹತ್ವದ ಸಲಹೆ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಪೀರ್‌ಸಾಬ್ ರಾಜಾ ಸಾಬ್ ಗೋದಿಹೊಸಳ್ಳಿ, ಬಾಲಚಂದ್ರ ಸ್ಯಾಮುವೆಲ್, ಶಕುಂತಲಾ ಬಿ.ಎಮ್., ಶಾರದಾ ಕಟ್ಟಿಮನಿ, ಹಜರತ್ ಹುಸೇನ, ಆನಂದ ಹಾಸಲಕರ, ದೇವಪ್ಪ ಭಾವಿಕಟ್ಟಿ, ವೆಂಕಟೇಶ ಬಾಬು, ಫಾರೂಕ್ ದಲಾಯತ್ ಸೇರಿದಂತೆ ಇತರರು ಮಾತನಾಡಿ, ತಮ್ಮ ತಮ್ಮ ವ್ಯಾಪ್ತಿಯ ಫಲಾನುಭವಿಗಳ ಸಮಸ್ಯೆಗಳು, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಗೆ ಮಹತ್ವದ ಸಲಹೆಗಳನ್ನು ನೀಡಿದರು. ಸಭೆಯಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.
Total Views: 0
ಜಾಹೀರಾತು
Share This Article