ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆಗೆ ಡಾ. ಶಶಿಕಾಂತ ಪಟ್ಟಣ ಆಕ್ಷೇಪ“ಧರ್ಮದ ಕುರಿತು ಗೊಂದಲ ಮೂಡಿಸುವ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸಲಿ” ಎಂದು ಆಗ್ರಹ

H.Mallikarjun
H.Mallikarjun - Kalyanasiri
1 Min Read





Dr. Shashikant Patan objects to Minister Basavaraj Rayareddy's statement
Demands withdrawal of the statement causing confusion about religion and an apology

ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆಗೆ ಡಾ. ಶಶಿಕಾಂತ ಪಟ್ಟಣ ಆಕ್ಷೇಪ
“ಧರ್ಮದ ಕುರಿತು ಗೊಂದಲ ಮೂಡಿಸುವ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸಲಿಎಂದು ಆಗ್ರಹ

ಜಾಹೀರಾತು


ರಾಮದುರ್ಗ/ಪುಣೆ, ಆ.31: ಕುಕನೂರಿನಲ್ಲಿ ಮೊಹಮ್ಮದ್ ಪೈಗಂಬರ್ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಅವರು ಇಸ್ಲಾಂ ಧರ್ಮದ ಕುರಿತು ನೀಡಿರುವ ಹೇಳಿಕೆಗೆ ಡಾ. ಶಶಿಕಾಂತ ಪಟ್ಟಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಡಾ. ಶಶಿಕಾಂತ ಪಟ್ಟಣ, ಸಚಿವರು ಇತ್ತೀಚೆಗೆ ಕುಕನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ “ಇಸ್ಲಾಂ ಧರ್ಮ ಸರ್ವಶ್ರೇಷ್ಠ ಧರ್ಮ” ಹಾಗೂ ಹಜ್ ಯಾತ್ರೆಯಲ್ಲಿ ಪಾಲ್ಗೊಳ್ಳುವ ಇಚ್ಛೆ ವ್ಯಕ್ತಪಡಿಸಿರುವುದು ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗುವಂತಹ ಹೇಳಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


“ಸಮಾಜವಾದಿ ಹಿನ್ನೆಲೆಯಿಂದ ಬಂದಿರುವ ಬಸವರಾಜ ರಾಯರೆಡ್ಡಿಯವರು ಇಂತಹ ಧಾರ್ಮಿಕ ವಿಚಾರಗಳ ಕುರಿತು ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬೇಕು. ಮತ ರಾಜಕಾರಣಕ್ಕಾಗಿ ಯಾವುದೇ ಸಮುದಾಯದ ಓಲೈಕೆಗೆ ಮುಂದಾಗಬಾರದು” ಎಂದು ಅವರು ಆಗ್ರಹಿಸಿದ್ದಾರೆ.
ಬಸವ ತತ್ವ ಮತ್ತು ಶರಣರ ಚಿಂತನೆಗಳನ್ನು

ಉಲ್ಲೇಖಿಸಿರುವ ಅವರು, ಹನ್ನೆರಡನೇ ಶತಮಾನದ ಕಲ್ಯಾಣ ನಾಡಿನ ಬಸವಾದಿ ಶರಣರು ಸಮತೆ, ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ಸಮ ಸಮಾಜದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಬಸವಣ್ಣನವರ ಚಿಂತನೆಗಳಲ್ಲಿ ವರ್ಗ, ವರ್ಣ, ಲಿಂಗ ಹಾಗೂ ಆಶ್ರಮದ ಭೇದವಿಲ್ಲದ ಸಮ ಸಮಾಜದ ಆಶಯವಿದೆ. ಇಂತಹ ಮಹತ್ವದ ಬಸವ ತತ್ವಗಳನ್ನು ಪ್ರತಿಪಾದಿಸಿದ ವ್ಯಕ್ತಿಯೊಬ್ಬರು ಧಾರ್ಮಿಕ ವಿಚಾರಗಳಲ್ಲಿ ಹೇಳಿಕೆ ನೀಡುವಾಗ ತಮ್ಮ ಮಾತುಗಳಿಂದ ಯಾವುದೇ ಸಮುದಾಯದಲ್ಲಿ ತಪ್ಪು ಸಂದೇಶ ಅಥವಾ ಗೊಂದಲ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಡಾ. ಪಟ್ಟಣ ತಿಳಿಸಿದ್ದಾರೆ.

Total Views: 1
ಜಾಹೀರಾತು
Share This Article