Congratulations to Senior Advocate Mr. Manohar.

ಹಿರಿಯ ವಕೀಲ ಶ್ರೀ ಮನೋಹರ್ ಅವರಿಗೆ ಅಭಿನಂದನೆ
ಜಾಹೀರಾತು

ಬೆಂಗಳೂರು: ಹಿರಿಯ ವಕೀಲರು ಹಾಗೂ ಇತ್ತೀಚೆಗೆ ನಡೆದ ರಾಜ್ಯ ಬಾರ್ ಕೌನ್ಸಿಲ್ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿರುವ ಆತ್ಮೀಯರಾದ ಶ್ರೀ ಮನೋಹರ್ ಅವರನ್ನು ಬೆಂಗಳೂರಿನ ಗಾಂಧಿನಗರದಲ್ಲಿರುವ ಅವರ ಕಚೇರಿಯಲ್ಲಿ ಭೇಟಿಯಾಗಿ ಆತ್ಮೀಯವಾಗಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗೆಳೆಯರು ಹಾಗೂ ನಮ್ಮ ಎನ್‌ಜಿಒದ ಸಿಇಒಗಳಾದ ಎಚ್.ಎಂ. ದಿನೇಶ್ ಮತ್ತು ಶ್ರೀಕಾಂತ್ ಉಪಸ್ಥಿತರಿದ್ದರು. ಸದಾ ಅತ್ಯಂತ ಬ್ಯುಸಿಯಾಗಿರುವ ತಮ್ಮ ಕಾರ್ಯಭಾರದ ನಡುವೆಯೂ ಶ್ರೀ ಮನೋಹರ್ ಅವರು ನಮ್ಮೊಂದಿಗೆ ಸಾಕಷ್ಟು ಸಮಯ ಕಳೆಯುತ್ತಾ ಆತ್ಮೀಯ ಹರಟೆ ಮತ್ತು ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಈ ಆತ್ಮೀಯ ಭೇಟಿ ಹಾಗೂ ಸಂತಸದ ಕ್ಷಣಗಳು ಎಲ್ಲರಿಗೂ ವಿಶೇಷ ಖುಷಿ ನೀಡಿದವು.
Total Views:
2
ಜಾಹೀರಾತು

