ಭ‌ಕ್ತರ ಕಾಣಿಕೆ ಹಣದಿಂದ ಕೋಟಿ ಒಡೆಯನಾದ ಮಾದಪ್ಪ‌

H.Mallikarjun
H.Mallikarjun - Kalyanasiri
1 Min Read
Madappa became a multi-millionaire through devotees' offerings.




ಭ‌ಕ್ತರ ಕಾಣಿಕೆ ಹಣದಿಂದ ಕೋಟಿ ಒಡೆಯನಾದ ಮಾದಪ್ಪ‌

ಜಾಹೀರಾತು
ಜಾಹೀರಾತು

ವರದಿ: ಬಂಗಾರಪ್ಪ .ಸಿ‌.
ಹನೂರು: ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತರ ಕಾಣಿಕೆ ಹಣವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಮತ್ತೆ ಮತ್ತೆ ಕೋಟಿಯತ್ತ ಹಣ ದಾಟುತ್ತಿದ್ದು.
ದಿನಾಂಕ 19.8.2026 ರಂದು ಪ್ರಾಧಿಕಾರದ ಹುಂಡಿ ಎಣಿಕೆ ಕಾರ್ಯವನ್ನು ಡಾ|| ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ವರು ಪೀಠಾಧ್ಯಕ್ಷರು ಸಾಲೂರು ಬೃಹನ್ಮಠ ಇವರ ದಿವ್ಯ ಸಾನಿಧ್ಯ ದೊಂದಿಗೆ ಮಾನ್ಯ ಕಾರ್ಯದರ್ಶಿಗಳಾದ ಜಿ. ಪುರುಷೋತ್ತಮ ಇವರ ನೇತೃತ್ವದಲ್ಲಿ ಬೆಳಿಗ್ಗೆ 7:00 ಯಿಂದ ಎಣಿಕೆ ಕಾರ್ಯ ಕೈಗೊಂಡಿದ್ದು ಒಟ್ಟು ಮೊತ್ತ ರೂ. 1,81,26,588/- ಗಳು, ಚಿನ್ನ:: 14 ಗ್ರಾಂ ಬೆಳ್ಳಿ:: 600 ಗ್ರಾಂ ದೊರೆತಿರುತ್ತದೆ.
ಈ ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರುಗಳಾದ ಶ್ರೀ ಮರಿಸ್ವಾಮಿ ಕಾಗಲವಾಡಿ, ಶ್ರೀ ಗಂಗನ ತಿಮ್ಮಯ್ಯ ಮೆಲ್ಲಹಳ್ಳಿ, ಹಣಕಾಸು ಲೆಕ್ಕಪತ್ರ ಸಲಹೆಗಾರರು ಮಹದೇವ ಸಿ, ಉಪಕಾರ್ಯದರ್ಶಿ ಜಿ.ಎಲ್ ಚಂದ್ರಶೇಖರ್, ಮಾನ್ಯ ಜಿಲ್ಲಾಧಿಕಾರಿಗಳು ಚಾಮರಾಜನಗರ ಜಿಲ್ಲೆ ರವರ ಕಚೇರಿಯ ವಿಷಯ ನಿರ್ವಾಹಕರಾದ ಸುಮಂತ್, ಬ್ಯಾಂಕ್ ಆಫ್ ಬರೋಡ ಕೊಳ್ಳೇಗಾಲ ಶಾಖೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿ, ಮಹದೇಶ್ವರ ಬೆಟ್ಟ ಪೊಲೀಸ್ ಸ್ಟೇಷನ್ ಸಿಬ್ಬಂದಿ,ಪ್ರಾಧಿಕಾರದ ಸಿಬ್ಬಂದಿಗಳಾದ ಇಂದ್ರೇಶ್, ಸರಗೂರು ಮಹದೇವಸ್ವಾಮಿ, ಜನಾರ್ಧನ್, ವೆಂಕಟಾಚಾರಿ, ಪಾರುಪತ್ತೆದಾರ್ ಮಾದೇಶ್, ಸೂಪರ್ವೈಸರ್ ಮಾದೇಶ್ ಹಾಗೂ ಪ್ರಾಧಿಕಾರದ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿರುತ್ತಾರೆ.

Total Views: 0
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Share This Article