MLA M.R. Manjunath highlighted the development of the Hanur constituency during the Independence Day program.

ಸ್ವಾತಂತ್ರ್ಯೊತ್ಸವದ ಕಾರ್ಯಕ್ರಮದಲ್ಲಿ ಹನೂರು ಕ್ಷೇತ್ರದ ಅಭಿವೃದ್ಧಿ ಪಠಿಸಿದ ಶಾಸಕ ಎಂ ಆರ್ ಮಂಜುನಾಥ್ .


ವರದಿ : ಬಂಗಾರಪ್ಪ .ಸಿ.
ಹನೂರು : ತಾಲೂಕು ಆಡಳಿತದ ವತಿಯಿಂದ ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 80 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಎಂ. ಆರ್ ಮಂಜುನಾಥ್ ರವರು ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರ ನೆನೆಪಿಸಿ ನಂತರ ನೆರೆದವರಿಗೆ ಸ್ವಾತಂತ್ರ್ಯತೊತ್ಸವದ ಸಂದೇಶವನ್ನು ಸಾರಿದರು..
ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಭಾಷಣ ಮಾಡಿದ ಅವರು ನಮ್ಮ ಕ್ಷೇತದ ಯುವಕರು ಅತಿ ಹೆಚ್ಚು ಕ್ರೀಡೆಯಲ್ಲಿ ಆಸಕ್ತಿ ವಹಿಸಿದ್ದು . ನಮ್ಮ ಭಾಗವು ಸಾಂಸ್ಕೃತಿಕ . ಕಲೆಗಳಿಗೆ ಹೆಸರುವಾಸಿಯಾಗಿದೆ .
ಜಲಮೂಲಗಳು ಬತ್ತಿಹೊಗಿದೆ . ಅಂತರ್ಜಲ ಸಂಪೂರ್ಣವಾಗಿ ಕುಸಿದಿದೆ ಮುಂದಿನ ದಿನಗಳಲ್ಲಿ ನೀರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದೆನೆ, ನಮ್ಮಲ್ಲಿರುವ 291 ಗ್ರಾಮ ಗಳಿಗೂ ಶಾಸ್ವತ ನೀರಿನ ಪರಿಹಾರ ನೀಡಲಾಗುವುದು. ಪ್ರತಿಯೊಂದು ಮನೆಗೂ ನಲ್ಲಿ ಮುಖಾಂತರ ನೀರನ್ನು ಕೊಡಲಾಗುವುದು. ಪ್ರಮುಖ ಜಲಾಶಯಗಳಾದ ಉಡುತೊರೆಹಳ್ಳ ಸೇರಿದಂತೆ ಇನ್ನಿತರ ಜಲಾಶಯಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು .ಕೆರೆಗಳ ಅಭಿವೃದ್ಧಿಗೆ ಈಗಾಗಲೇ ಕ್ರಮವಹಿಸಲಾಗಿದೆ, ರಾಮನ ಗುಡ್ಡೆ ಕೆರೆ ಅಭಿವೃದ್ಧಿ ಹೊಂದುತ್ತಿರುವುದು ನಿಮ್ಮ ಕಣ್ಣಮುಂದೆನೆ ಕಾಣುತ್ತದೆ , ಇನ್ನೂಳಿದ ಕೆರೆಗಳಿಗೆ ಕಾಯಕಲ್ಪ ನೀಡಲಾಗುವುದು ಎಂದು ಹನೂರು ಕ್ಷೇತ್ರದ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮೆಲುಕು ಹಾಕಿದ್ದರು.
ಇದೇ ಸಮಯದಲ್ಲಿ ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ರಾಚಪ್ಪ ತಾಲೂಕು ದಂಡಧಿಕಾರಿ ಚೈತ್ರಾ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರತಿಭಾ, ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರೇಖಾ, ತಾಲೂಕು ವೈದ್ಯಧಿಕಾರಿ ಪ್ರಕಾಶ್, ಮುಖ್ಯ ಭಾಷಣ ಕಾರರಾದ ಮಲ್ಲೇಶ್,ಹಾಗೂ ಇನ್ನಿತರರು ಹಾಜರಿದ್ದರು.





