ಚಾತುರ್ಮಾಸದ ಅಂಗವಾಗಿ ರಾಜ್ಯಾದ್ಯಂತ ನಾಲ್ಕು ತಿಂಗಳ ಸತ್ಸಂಗ ಭಜನಾ ಕಮ್ಮಟ

H.Mallikarjun
H.Mallikarjun - Kalyanasiri
1 Min Read

A four-month Satsang and Bhajan workshop across the state as part of Chaturmasya.




ಚಾತುರ್ಮಾಸದ ಅಂಗವಾಗಿ ರಾಜ್ಯಾದ್ಯಂತ ನಾಲ್ಕು ತಿಂಗಳ ಸತ್ಸಂಗ ಭಜನಾ ಕಮ್ಮಟ

ಜಾಹೀರಾತು

ಗಂಗಾವತಿ, ಆ.12: ಚಾತುರ್ಮಾಸದ ಅಂಗವಾಗಿ ಆಗಸ್ಟ್ 10, 2026ರಿಂದ ನಾಲ್ಕು ತಿಂಗಳ ಕಾಲ ಕರ್ನಾಟಕ ರಾಜ್ಯದ ವಿವಿಧ ಗ್ರಾಮಗಳಲ್ಲಿ ಮಹಿಳಾ ಮಂಡಳಿಗಳ ಮಾತೆಯರಿಗಾಗಿ ಸತ್ಸಂಗ ಭಜನಾ ಕಮ್ಮಟವನ್ನು ಆಯೋಜಿಸಲಾಗುತ್ತಿದೆ ಎಂದು ರಾಜ್ಯ ಸತ್ಸಂಗದ ಭಜನಾ ಪ್ರಮುಖ ಹಾಗೂ ಕೊಪ್ಪಳ ಜಿಲ್ಲೆಯ ರಾಜ್ಯ ಸತ್ಸಂಗ ಭಜನಾ ಪ್ರಮುಖರಾದ ಶ್ರೀ ಶರಣಪ್ಪ ಕಮ್ಮಾರ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಸ್ಥಳಗಳಲ್ಲಿ ನಡೆಯಲಿರುವ ಈ ಭಜನಾ ಕಮ್ಮಟದಲ್ಲಿ ದೇವರ ಭಕ್ತಿಗೀತೆಗಳು, ಭಜನೆಗಳು ಹಾಗೂ ಆಧ್ಯಾತ್ಮಿಕ ವಿಚಾರಗಳನ್ನು ಕಲಿಸಿಕೊಡಲಾಗುವುದು. ಪ್ರತಿಯೊಬ್ಬ ಮಾನವನಿಗೂ ಸುಖ, ಶಾಂತಿ ಮತ್ತು ನೆಮ್ಮದಿಯ ಜೀವನದ ಆಶೆಯಿರುತ್ತದೆ. ಅದನ್ನು ಸಾಕಾರಗೊಳಿಸಲು ಸತ್ಸಂಗದ ಮಾರ್ಗ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

360 ಕೋಟಿ ಜೀವಿಗಳಲ್ಲಿ ಮಾನವ ಜನ್ಮವೇ ಶ್ರೇಷ್ಠವಾದುದು. ಇಂತಹ ಅಮೂಲ್ಯ ಜನ್ಮವನ್ನು ಪಡೆಯಲು ದೇವರ ಅನುಗ್ರಹ ಬೇಕು. ಮಾನವ ಜನ್ಮ ದೊರೆತ ನಂತರ ಅದನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ದೇವರ ಅನುಗ್ರಹ ಪಡೆಯಬೇಕಾದರೆ ಸತ್ಸಂಗದಲ್ಲಿ ಭಾಗವಹಿಸಿ ದೇವರ ಧ್ಯಾನ, ಭಜನೆ, ದಾನ-ಧರ್ಮ ಸೇರಿದಂತೆ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಚಾತುರ್ಮಾಸದ ಅಂಗವಾಗಿ ರಾಜ್ಯದ ವಿವಿಧ ಗ್ರಾಮಗಳ ದೇವಸ್ಥಾನ ಸಮಿತಿಗಳು ಧರ್ಮಜಾಗೃತಿಗಾಗಿ ಭಜನಾ ಕಮ್ಮಟಗಳನ್ನು ಹಮ್ಮಿಕೊಳ್ಳಬೇಕು. ಈ ಜ್ಞಾನಯಜ್ಞ ಕಾರ್ಯಕ್ರಮವನ್ನು ತಮ್ಮ ತಂದೆ-ತಾಯಿಯರ ಸ್ಮರಣಾರ್ಥ ಹಾಗೂ ಗುರು-ಹಿರಿಯರ ಆಶೀರ್ವಾದದೊಂದಿಗೆ ಆಯೋಜಿಸಲು ಆಸಕ್ತ ಭಕ್ತರು ಸಂಪರ್ಕಿಸಬಹುದು ಎಂದು ಅವರು ಮನವಿ ಮಾಡಿದ್ದಾರೆ.

Total Views: 0
Share This Article