ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ 250 ವಿವಿಧ ಜಾತಿಯ ಹಣ್ಣಿನ ಗಿಡ ನಾಟಿ

H.Mallikarjun
H.Mallikarjun - Kalyanasiri
1 Min Read

At the campus of Kittur Rani Channamma Residential School, the Shri Kshetra Dharmasthala Rural Development Trust planted 250 saplings of different fruit varieties.

 

ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ 250 ವಿವಿಧ ಜಾತಿಯ ಹಣ್ಣಿನ ಗಿಡ ನಾಟಿ

ಗಂಗಾವತಿ ತಾಲೂಕಿನ ಮಲಕನಮರಡಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಸಾಮಾಜಿಕ ಅರಣ್ಣಿಕರಣ ಕಾರ್ಯಕ್ರಮ ನಡೆಸಿ 250 ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನಾಟಿ ಮಾಡಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ವಿಠಲ್ ಪೂಜಾರಿ ಯವರು ಪೂಜ್ಯ ವೀರೇಂದ್ರ ಹೆಗ್ಗಡೆಯವರು ಯೋಜನೆ ಮೂಲಕ ಪರಿಸರ ರಕ್ಷಣೆಯ ಉದ್ದೇಶದಿಂದ ಲಕ್ಷ ವೃಕ್ಷ ಕಾರ್ಯಕ್ರಮ, ಬೀಜದ ಉಂಡೆ ಬಿತ್ತನೆ ಕಾರ್ಯಕ್ರಮದಂತ ಕಾರ್ಯಗಳನ್ನು ಮಾಡಿಸುತ್ತಿದ್ದು.. ಅವರ ಮಾರ್ಗದರ್ಶನದಲ್ಲಿ ಸಾಮಾಜಿಕ ಅರಣ್ಣಿಕರಣ ಕಾರ್ಯಕ್ರಮ ನಡೆಸುತ್ತಿದ್ದು… ಶಾಲೆಯ ಆವರಣದಲ್ಲಿ ಗಿಡಗಳನ್ನು ನಾಟಿ ಮಾಡಲಾಗುತ್ತಿದೆ ಈ ಗಿಡಗಳನ್ನು ರಕ್ಷಣೆ ಮಾಡಿ ಬೆಳೆಸುವಂತ ಜವಾಬ್ದಾರಿ ಮಕ್ಕಳದಾಗಬೇಕು. ಇದರ ಜೊತೆಗೆ ಮನೆಯ ಸುತ್ತಲಿನ ಪರಿಸರ. ಶಾಲೆಯ ಪರಿಸರವನ್ನ ಶುಚಿಯಾಗಿ ಇಟ್ಟುಕೊಳ್ಳುವ ಕೆಲಸ ಆಗಬೇಕು.ಪ್ರತಿಯೊಬ್ಬರ ಮನದಲ್ಲೂ ಪರಿಸರದ ರಕ್ಷಣೆಯ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಪಾಟೀಲ್ ವಹಿಸಿಕೊಂಡಿದ್ದರು, ತಾಲೂಕು ಯೋಜನಾಧಿಕಾರಿ ಶಾಂತಾ ನಾಯಕ್ ಮೇಡಂ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಚನ್ನಾವಿರಾಗೌಡರು, ಮಲಕನಮರಡಿ ಗ್ರಾಮದ ಮುಖಂಡರಾದ ಡಾ.ಮೌನೇಶ್. ಕೃಷಿ ಮೇಲ್ವಿಚಾರಕ ಲೋಕೇಶ. ಮೇಲ್ವಿಚಾರಕ ಈಶ್ವರಗೌಡ, ಶಾಲಾ ಶಿಕ್ಷಕ ನಾಗಪ್ಪ ಸೇರಿದಂತೆ ಶಿಕ್ಷಕ ವೃಂದದವರು, ಸೇವಾಪ್ರತಿನಿಧಿಗಳು, ವಿದ್ಯಾರ್ಥಿಳು ಭಾಗವಹಿಸಿದ್ದರು.

ಜಾಹೀರಾತು
Total Views: 1
Share This Article