ರವೀಂದ್ರ ಕಲಾಕ್ಷೇತ್ರದಲ್ಲಿ “ಶ್ರೀರಾಘವೇಂದ್ರ ಮಹಿಮೆ” ಎಂಬ ಯಕ್ಷಗಾನ ಕಾರ್ಯಕ್ರಮ

H.Mallikarjun
H.Mallikarjun - Kalyanasiri
2 Min Read

Sri Raghavendra Mahime" Yakshagana program at Ravindra Kalakshetra.




ರವೀಂದ್ರ ಕಲಾಕ್ಷೇತ್ರದಲ್ಲಿ “ಶ್ರೀರಾಘವೇಂದ್ರ ಮಹಿಮೆ” ಎಂಬ ಯಕ್ಷಗಾನ ಕಾರ್ಯಕ್ರಮ

ಜಾಹೀರಾತು

ಶ್ರೀರಾಘವೇಂದ್ರ ಮಹಿಮೆ” ಯಕ್ಷಗಾನ ಕಾರ್ಯಕ್ರಮ – ( ಪ್ರವೇಶ ಉಚಿತ) – ದಿ. 09-08-2026 ರ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ

  ಬೆಂಗಳೂರು: ದಿ,09-08-2026 ರ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ “ಶ್ರೀರಾಘವೇಂದ್ರ ಮಹಿಮೆ” ಯಕ್ಷಗಾನ ಕಾರ್ಯಕ್ರಮವನ್ನು ತಮ್ಮ ಮಾಧ್ಯಮದಲ್ಲಿ ಪ್ರಕಟಿಸಲು ಮನವಿ.

ದಿ.09-08-2026 ರ ಭಾನುವಾರ ಮಧ್ಯಾಹ್ನ 2:00 ಗಂಟೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಂತ್ರಾಲಯ ಮಠಾಧೀಶರಾದ ಶ್ರೀಶ್ರೀಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ ಹೊಸಪಟ್ಟಣ ಯಕ್ಷ ಕಲಾ ಟ್ರಸ್ಟ್ ಹಾಗೂ ಅತಿಥಿ ಕಲಾವಿದರಿಂದ ನ೦ದ್ರೋಳ್ಳಿ ಶಾಂತಾರಾಮ ಶೆಟ್ಟಿ ವಿರಚಿತ “ಶ್ರೀರಾಘವೇಂದ್ರ ಮಹಿಮೆ” ಎಂಬ ಯಕ್ಷಗಾನ ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯಿಂದ ಆಯೋಜಿಸಲಾಗಿದೆ.

ಹಾಗೆಯೇ ವಿವಿಧ ಸಮಾಜ ಸೇವೆಯಲ್ಲಿ ಸಾಧನೆ ಮಾಡಿದ ಪೊಲೀಸ್ ಇನ್ಸ್ ಪೆಕ್ಟರ್ ಕೆ.ವೆಂಕಟೇಶ್ ಹಾಗೂ ಚೆಫ್ ಟಾಕ್ ಹಾಸ್ಪಿಟಾಲಿಟಿ ಸರ್ವೀಸಸ್ ನ ಆಡಳಿತ ನಿರ್ದೇಶಕರಾದ ಗೋವಿಂದ ಬಾಬು ಪೂಜಾರಿಯವರಿಗೆ ‘ಸಾಮಾಜಿಕ ಸ್ಪಂದನಾ ಸೇವಾ ಸ್ಪಂದನಾ-2026” ಪ್ರಶಸ್ತಿ ಹಾಗೂ ಪ್ರಸಿದ್ಧ ಸ್ತ್ರೀವೇಷಧಾರಿಗಳಾದ ಶ್ರೀ ವಿಜಯ ಗಾಣಿಗ ಬೀಜಮಕ್ಕಿ ಮತ್ತು ಸುಮಾರು 25 ವರ್ಷಗಳಿಂದ ಬೆಂಗಳೂರಿನಲ್ಲಿ ಯಕ್ಷಗಾನದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಅರ್ಪಿತಾ ಹೆಗಡೆಯವರಿಗೆ “ಯಕ್ಷಸೇವಾ ಕಲಾ ಪ್ರಶಸ್ತಿ-2026’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಹಾಗೆಯೇ ಜಿಬಿಎ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಶೇ.97ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ “ಶೈಕ್ಷಣಿಕ ಸ್ಪಂದನಾ ಪುರಸ್ಕಾರ-2026” ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀವಿ.ಶ್ರೀಶಾನಂದ, ನ್ಯಾ. ರಾಜೇಶ್ ರೈ, ಮಲ್ಲೇಶ್ವರಂ ಶಾಸಕರಾದ ಡಾ.ಸಿ.ಎನ್. ಅಶ್ವಥ್ ನಾರಾಯಣ್, ಯಶವಂತಪುರ ಶಾಸಕರಾದ ಎಸ್‌.ಟಿ.ಸೋಮಶೇಖರ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಎಂ.ಆ‌ರ್.ಜಿ ಗ್ರೂಪ್ ಆಡಳಿತ ನಿರ್ದೇಶಕರಾದ ಕೆ.ಪ್ರಕಾಶ್ ಶೆಟ್ಟಿ, ಮೈಸೂರಿನ ಖ್ಯಾತ ಉದ್ಯಮಿಗಳಾದ ಶ್ರೀ ಜಗನ್ನಾಥ್ ಶೆಣೈ, ಎಸ್.ಈ.ಎಸ್.ಐ.ಪಿ.ಎಲ್, ಸಂಸ್ಥೆಯ ಸಂಸ್ಥಾಪಕರು ಹಾಗೂ ಆಡಳಿತ ನಿರ್ದೇಶಕರಾದ ಶ್ರೀರಾಜೇಶ್ ಶೆಟ್ಟಿರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಗಳನ್ನು ತಮ್ಮ ಮಾಧ್ಯಮದಲ್ಲಿ ಪ್ರಕಟಿಸಿ ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ.

Total Views: 0
Share This Article