MLA M.R. Manjunath advises ensuring no untoward incidents occur during Independence Day celebrations.

ಸ್ವಾತಂತ್ರ್ಯ ದಿನಾಚರಣೆ ಅಹಿತಕರ ಘಟನೆಗಳು ನಡೆಯದಂತೆ ಶಾಸಕ ಎಂ ಆರ್ ಮಂಜುನಾಥ್ ಸಲಹೆ .

ವರದಿ: ಬಂಗಾರಪ್ಪ .ಸಿ
ಹನೂರು : ನಮ್ಮ ಹಿರಿಯರು ನಮಗೆ ನೀಡಿದ ಅತ್ಯಮೂಲ್ಯ ಕೊಡುಗೆಗಳಲ್ಲಿ ಸ್ವಾತಂತ್ರೊತ್ಸವವು ಸಹ ಒಂದು ಹಾಗಾಗಿ ಈ ಸಲ ಪಟ್ಟಣ ಶ್ರೀ ಮಹದೇಶ್ವರ ಕ್ರಿಡಾಂಗಣದಲ್ಲಿ ಆಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯೊತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷ ಆಗದಂತೆ ಅಚ್ಚುಕಟ್ಟಾಗಿ ಆಯಾ ಇಲಾಖೆ ಅಧಿಕಾರಿಗಳಿಗೆ ವಹಿಸಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಕರೆದಿದ್ದ ಸ್ವಾತಂತ್ರೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದ ಅವರು
ಆಗಸ್ಟ್ 15ರಂದು ದ್ವಜಾರೋಹಣ ವೇಳೆ ಯಾವುದೇ ರೀತಿ ಅಡಚಣೆ ಆಗಬಾರದು. ಹಾಜರಾಗುವ ಪ್ರತಿಯೋಬ್ಬರಿಗೂ ನೆರಳು, ಸ್ವಚ್ಛತೆ, ನೀರಿನ ವ್ಯವಸ್ಥೆ ಅಚ್ಚುಕಟ್ಟಾಗಿರಲಿ. ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು ಇದಲ್ಲದೆ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳುವ ಮೂಲಕ ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡಬೇಕು. ಸ್ವಾತಂತ್ರ್ಯ ದಿನಾಚರಣೆಯು ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ. ಇದು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರನ್ನು ನೆನಪಿಸಿಕೊಳ್ಳುವ ದಿನ. ಆದ್ದರಿಂದ ಪ್ರತಿ ಶಾಲಾ-ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರಧ್ವಜ ಹಾರಿಸುವುದರೊಂದಿಗೆ ದೇಶಭಕ್ತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಭೆಯಲ್ಲಿ ಸ್ವಾತಂತ್ರ ದಿನಾಚರಣೆ ಆಚರಣೆ ಸಂಬಂಧ ಕೆಲವು ಅಧಿಕಾರಿಗಳು ಕೊಳ್ಳೇಗಾಲ ಚಾರ್ಜ್ ಇದೆ ಎಂದು ಕಡೆಗಣೆ ಸರಿಯಲ್ಲ ಈ ಭಾರಿ ಎಲ್ಲರು ಭಾವಹಿಸುವಿಕೆ ಮುಖ್ಯ. ಭಾರತ್ ಜೋಡೋ ಗೀತೆ ನೃತ್ಯ ಆಗಬೇಕಿದೆ. ಪಥ ಸಂಚಲನ, 10ನಿಮಿಷಕ್ಕೆ 7ಗೀತೆಗೆ ಸೀಮಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಹನೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಳ್ಯ ರಾಚಪ್ಪ, ತಹಶೀಲ್ದಾರ್ ಚೈತ್ರ, ಬಿಇಒ ಪ್ರತಿಭಾ, ಸಿಡಿಪಿಓ ಅಂಬಿಕಾ,
ನೀರಾವರಿ ಇಲಾಖೆ ಎಇಇ ಕರುಣಾಮಯಿ, ನರೇಗಾ ಸಹಾಯಕ ನಿರ್ದೇಶಕ ರವೀಂದ್ರ, ಚೆಸ್ಕಾಂ ಎಇಇ ರಂಗಸ್ವಾಮಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರೇಖಾ, ನಿರ್ಮಿತಿ ಕೇಂದ್ರ ಜೆ ಇ ರವಿಕುಮಾರ್,ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಂಗಸ್ವಾಮಿ, ಜೆಜೆಎಂ ಪೂರ್ಣಿಮಾ, ತೋಟಗಾರಿಕೆ ಇಲಾಖೆ ಸೇರಿದಂತೆ ಇನ್ನಿತರರು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
