ಎಲ್ಲರೂ ಒಗ್ಗೂಡಿ ಸರ್ಕಾರದ ಕಾರ್ಯಕ್ರಮಗಳ ಜಾರಿ ಮಾಡುತ್ತೇವೆ: ಸಚಿವರಾದ ಬಸವರಾಜ ರಾಯರಡ್ಡಿ

H.Mallikarjun
H.Mallikarjun - Kalyanasiri
2 Min Read
We will all work together to implement government programs: Minister Basavaraj Rayareddy

ಎಲ್ಲರೂ ಒಗ್ಗೂಡಿ ಸರ್ಕಾರದ ಕಾರ್ಯಕ್ರಮಗಳ ಜಾರಿ ಮಾಡುತ್ತೇವೆ: ಸಚಿವರಾದ ಬಸವರಾಜ ರಾಯರಡ್ಡಿ

ಕೊಪ್ಪಳ ಆಗಸ್ಟ್ 06 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಸಚಿವರಾದ ಶಿವರಾಜ ತಂಗಡಗಿ, ಶಾಸಕರಾದ ರಾಘವೆಂದ್ರ ಹಿಟ್ನಾಳ ಹಾಗೂ ಇನ್ನುಳಿದ ಎಲ್ಲ ಶಾಸಕರು ಮತ್ತು ಪಕ್ಷದ ಎಲ್ಲ ಹಿರಿಯ-ಕಿರಿಯ ಮುಖಂಡರ ಜೊತೆಗೂಡಿ ಪರಸ್ಪರ ಸಹಕಾರದೊಂದಿಗೆ ಎಲ್ಲರೂ ಸೇರಿ ಒಗ್ಗೂಡಿ ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತೇವೆ ಎಂದು ಕರ್ನಾಟಕ ವಿಧಾನಸಭೆಯ ಸಂಪುಟ ದರ್ಜೆಯ ಸಚಿವರಾದ ಬಸವರಾಜ ರಾಯರೆಡ್ಡಿ ಅವರು ಹೇಳಿದರು.
ಕೊಪ್ಪಳ ನಿರೀಕ್ಷಣಾ ಮಂದಿರದಲ್ಲಿ ಆಗಸ್ಟ್ 6ರಂದು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯ ಜನರು ನಮ್ಮ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟಿದ್ದಾರೆ. ಅದನ್ನು ಅರಿತು ತಾವು ಎಲ್ಲರೊಡಗೂಡಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವುದಾಗಿ ಸಚಿವರು ತಿಳಿಸಿದರು.
ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾದ ಸಚಿವರಿಗೆ ಈಗಾಗಲೆ ವಿಧಾನಸೌಧ ಮತ್ತು ವಿಕಾಸಸೌಧಗಳಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ನಾನು ಸೇರಿದಂತೆ ಎಲ್ಲ ಸಚಿವರು ಸೋಮವಾರದೊಳಗೆ ಕೊಠಡಿಗಳಿಗೆ ಹಾಜರಾಗುತ್ತೇವೆ. ಬರುವ  ಸೋಮವಾರದಿಂದಲೇ ಸರ್ಕಾರವು ಪೂರ್ಣಪ್ರಮಾಣದ ಸಚಿವ ಸಂಪುಟದ ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
*ಎಲ್ಲರಿಗೂ ಅಭಿನಂದನೆ*
ಪಕ್ಷದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಎಲ್ಲ  ವರಿಷ್ಠರಿಗೆ, ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿಗಳಾದ  ಸಿದ್ಧರಾಮಯ್ಯ ಅವರ ಸಹಕಾರದಿಂದ ತಾವು ಸಂಪುಟ ದರ್ಜೆಯ ಸಚಿವರಾಗಲು ಸಾಧ್ಯವಾಗಿದ್ದು, ಎಲ್ಲರಿಗೂ ಹೃದಯ ಪೂರ್ವಕ ಅಭಿನಂದನೆಗಳನ್ನು ತಿಳಿಸುವೆ ಎಂದರು.
*ಆಗಸ್ಟ್ 7ರಿಂದ ಗದಗ ಪ್ರವಾಸ*: ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ನಾನು ಮೊದಲ ಬಾರಿಗೆ ಭಾಗಿಯಾಗಿದ್ದೇನೆ. ಮುಖ್ಯಮಂತ್ರಿಗಳ‌ ನಿರ್ದೇಶನದಂತೆ ಎಲ್ಲ ಸಚಿವರ ಬರ ವೀಕ್ಷಣೆಗಾಗಿ ಆಯಾ ಜಿಲ್ಲೆಗಳಿಗೆ ತೆರಳಿದ್ದಾರೆ. ತಮಗೆ ಸದ್ಯ ಗದಗ ಜಿಲ್ಲಾ ಉಸ್ತುವಾರಿ ವಹಿಸಿದ್ದು, ಆಗಸ್ಟ್ 7ರಿಂದ ಮೂರು ದಿನಗಳ ಕಾಲ ಗದಗ ಜಿಲ್ಲೆಯಲ್ಲಿ ಬೆಳೆಹಾನಿ ಬರ ಪರಿವೀಕ್ಷನೆ ನಡೆಸುವುದಾಗಿ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಅಮರೇಗೌಡ ಪಾಟೀಲ ಬಯ್ಯಾಪುರ ಹಾಗೂ ಇನ್ನೀತರ ಮುಖಂಡರು ಇದ್ದರು

ಜಾಹೀರಾತು
Total Views: 0
Share This Article