ದುರಸ್ತಿಗೆ ಯೋಗ್ಯವಿರುವ ಪೀಠೋಪಕರಣಗಳ ರಿಪೇರಿಗೆ ದರಪಟ್ಟಿ ಆಹ್ವಾನ

H.Mallikarjun
H.Mallikarjun - Kalyanasiri
1 Min Read

Invitation for quotations for the repair of furniture suitable for repair.

ದುರಸ್ತಿಗೆ ಯೋಗ್ಯವಿರುವ ಪೀಠೋಪಕರಣಗಳ ರಿಪೇರಿಗೆ ದರಪಟ್ಟಿ ಆಹ್ವಾನ

ಜಾಹೀರಾತು


ಕೊಪ್ಪಳ ಆಗಸ್ಟ್ 06 (ಕರ್ನಾಟಕ ವಾರ್ತೆ): ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿರುವ ದುರಸ್ತಿ ಮಾಡಿಸಿದರೆ ಬಳಕೆಗೆ ಯೋಗ್ಯವಾಗುವ ಪೀಠೋಪಕರಣಗಳ ರಿಪೇರಿಗಾಗಿ ಆಸಕ್ತರಿಂದ ದರಪಟ್ಟಿ ಆಹ್ವಾನಿಸಲಾಗಿದೆ.
 ನ್ಯಾಯಾಲಯದಲ್ಲಿ 1 ಕಟ್ಟಿಗೆಯ ಕುರ್ಚಿ, 16 ವೈರ್ ಹೆಣೆದಿರುವ ಕಟ್ಟಿಗೆಯ ಕುರ್ಚಿಗಳು, 7 ಕಬ್ಬಿಣದ ಅಲ್ಮೆರಾಗಳು, 2 ಕುಷನ್ ಚೇರ್‌ಗಳು ಹಾಗೂ 1 ಕಟ್ಟಿಗೆಯ ಪುಸ್ತಕಗಳ ಸ್ಟ್ಯಾಂಡ್ ಸೇರಿದಂತೆ ಒಟ್ಟು 27 ಪೀಠೋಪಕರಣಗಳು ದುರಸ್ತಿಗೆ ಒಳಪಡಬೇಕಿದ್ದು, ಅವುಗಳ ರಿಪೇರಿಗೆ ಸೂಕ್ತ ದರವನ್ನು ಸೂಚಿಸಿದವರಿಗೆ ದುರಸ್ತಿ ಕೆಲಸವನ್ನು ನೀಡಲಾಗುವುದು.
 ಆಸಕ್ತರು ನ್ಯಾಯಾಲಯಕ್ಕೆ ಭೇಟಿ ನೀಡಿ ಪೀಠೋಪಕರಣಗಳನ್ನು ಪರಿಶೀಲಿಸಿ, ತಾವು ಸೂಚಿಸುವ ದರವನ್ನು ಮುಚ್ಚಿದ ಲಕೋಟೆಯಲ್ಲಿ ಆಗಸ್ಟ್ 18 ರೊಳಗಾಗಿ ಕಚೇರಿ ಅವಧಿಯೊಳಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಪ್ಪಳ ಇಲ್ಲಿಗೆ ಸಲ್ಲಿಸಬೇಕು.
 ಸ್ವೀಕರಿಸಲಾದ ಮುಚ್ಚಿದ ಲಕೋಟೆಗಳನ್ನು ಆಗಸ್ಟ್ 20 ರಂದು ಸಂಜೆ 5 ಗಂಟೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕೊಠಡಿಯಲ್ಲಿ ತೆರೆಯಲಾಗುವುದು ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಲತಾಕುಮಾರಿ ಎಂ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article