On the 6th, Minister Basavaraj Rayareddi’s visit to Koppal district
ಆ. 06 ರಂದು ಸಚಿವರಾದ ಬಸವರಾಜ ರಾಯರಡ್ಡಿ ಅವರಿಂದ ಕೊಪ್ಪಳ ಜಿಲ್ಲಾ ಪ್ರವಾಸ
ಕೊಪ್ಪಳ ಆಗಸ್ಟ್ 05, (ಕರ್ನಾಟಕ ವಾರ್ತೆ): ಸಂಪುಟ ದರ್ಜೆ ಸಚಿವರಾದ ಬಸವರಾಜ ರಾಯರಡ್ಡಿ ಅವರು ಆಗಸ್ಟ್ 06 ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಸಚಿವರು ಆ.06 ರಂದು ಬೆಳಿಗ್ಗೆ 10.15 ಕ್ಕೆ ಕೊಪ್ಪಳಕ್ಕೆ ಆಗಮಿಸಿ, ನಗರದ ನಿರೀಕ್ಷಣಾ ಮಂದಿರದಲ್ಲಿ ಜಿಲ್ಲಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ 11.15 ಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲಿದ್ದು, ಮಧ್ಯಾಹ್ನ 12.30 ಗಂಟೆಗೆ ಕೊಪ್ಪಳದಿಂದ ನಿರ್ಗಮಿಸಿ ರಾಜೂರು ಕಡೆ ಪ್ರಯಾಣ ಬೆಳೆಸುವರು. ಮಧ್ಯಾಹ್ನ 01 ಗಂಟೆಗೆ ರಾಜೂರು ಗ್ರಾಮದ ಶರಣ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬರಪೀಡಿತ ಪ್ರದೇಶದ ರೈತರು, ಅಧಿಕಾರಿಗಳು ಹಾಗೂ ಸಚಿವರಾದ ಶಿವರಾಜ ತಂಗಡಗಿ ಅವರೊಂದಿಗೆ ಸಮಾಲೋಚನಾ ಸಭೆ ನಡೆಸುವರು. ಮಧ್ಯಾಹ್ನ 2 ಗಂಟೆಗೆ ಕುಕನೂರಿನಲ್ಲಿ ಅಧಿಕಾರಿಗಳ ಸಭೆ ನಡೆಸುವರು. ಮಧ್ಯಾಹ್ನ 3.45ಕ್ಕೆ ರಾಜೂರಿನಿಂದ ನಿರ್ಗಮಿಸಿ ಸಂಜೆ 04 ಗಂಟೆಗೆ ಯಲಬುರ್ಗಾಕ್ಕೆ ಆಗಮಿಸಿ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಕಾರ್ಯಕ್ರಮದ ನಂತರ ಯಲಬುರ್ಗಾದಲ್ಲಿಯೇ ವಾಸ್ತವ್ಯ ಮಾಡುವರು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಟಿ.ಎನ್.ರವಿಪ್ರಕಾಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Total Views:
1

