`Samskruthika Sourabha` by the Kannada and Culture Department at Bahaddur Bandi
ಬಹದ್ದೂರ್ ಬಂಡಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ `ಸಾಂಸ್ಕೃತಿಕ ಸೌರಭ’
ಕೊಪ್ಪಳ ಆಗಸ್ಟ್ 01 (ಕರ್ನಾಟಕ ವಾರ್ತೆ): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ವತಿಯಿಂದ 2026-27ನೇ ಸಾಲಿನ ಸಾಮಾನ್ಯ ಯೋಜನೆಯಡಿ `ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮವು ಶುಕ್ರವಾರ (ಜುಲೈ 31ರಂದು) ತಾಲ್ಲೂಕಿನ ಬಹದ್ದೂರ್ ಬಂಡಿ ಗ್ರಾಮದಲ್ಲಿ ನಡೆಯಿತು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಚಾಂದಪಾಷಾ ಕಿಲ್ಲೇದಾರ್ ಅವರು ಮಾತನಾಡಿ, 58 ವರ್ಷ ಮೇಲ್ಪಟ್ಟ ಕಲಾವಿದರಿಗೆ ಗೌರವಧನವಾಗಿ ಅಥವಾ ಮಾಸಾಶನ ಎಂದು ಸರ್ಕಾರವು ರೂ. 2500 ಗಳ ಗೌರವಧನ ನೀಡುತ್ತದೆ. ಕೊಪ್ಪಳ ಜಿಲ್ಲೆಯ ಎಲ್ಲ ಹಿರಿಯ ಕಲಾವಿದರು ಅಗತ್ಯ ಕಾಗದ ಪತ್ರಗಳನ್ನು ಸರಿಯಾಗಿಟ್ಟುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದರು.
ಸಮಾಜ ಸೇವಕರಾದ ತೋಟಪ್ಪ ಕಾಮನೂರು ಅವರು ಮಾತನಾಡಿ, ಡೊಳ್ಳಿನ ಪದ, ಗೀಗೀ ಪದ, ಚೌಡ್ಕಿ ಪದ ಸೇರಿದಂತೆ ಬೇರೆ ಬೇರೆ ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯ ಶ್ಲ್ಯಾಘನೀಯವಾಗಿದೆ ಎಂದರು.
ಗ್ರಾ.ಪಂ ಮಾಜಿ ಅಧ್ಯಕ್ಷರಾದ ಯೋಗಾನಂದ ಲೇಬಗೇರಿ ಅವರು ಮಾತನಾಡಿ, ಗ್ರಾಮೀಣ ಸೊಗಡು ಬೆಳೆಯಬೇಕು. ಹಿರಿಯ ಕಲಾವಿದರ ಹೊಟ್ಟೆ ತುಂಬಬೇಕು ಮತ್ತು ಅವರಿಗೆ ಸಹಾಯ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಹೇಬೂಬ ಮುದ್ದಾಬಳ್ಳಿ, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಮಂಜುನಾಥ ನಡುಲಮನಿ, ಮಾಜಿ ಸದಸ್ಯರಾದ ಮಹಮ್ಮದ್ ರಫಿ ಹಿರೇಮಸೂತಿ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಪಿಡಿಓ ಬಸವರಾಜ ಕೀರ್ತಿ, ಮುಖಂಡರಾದ ಅಲಬಣ್ಣ ಕಣವಿ, ದಾವಲಸಾಬ ಚಿಕ್ಕಮಸೂತಿ, ಅಬ್ದುಲ್ ರೆಹಮಾನ ಹಿರೇಮಸೂತಿ, ಶಿವಪ್ಪ ಗ್ಯಾನಪ್ಪನವರ, ಮೇಹಬೂಬ ಮಣ್ಣೂರ, ಯಮನೂರಸಾಬ ಹಿರೇಮಸೂತಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಮೆಹಬೂಬ್ ಕಿಲ್ಲೇದಾರ್ ಅವರು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಅವರು ಸ್ವಾಗತಿಸಿದರು.
*ಜನ ಮನ ಸೆಳೆದ ಸಾಂಸ್ಕೃತಿಕ ಸೌರಭ:* ಕುಷ್ಟಗಿಯ ಸಿದ್ಧಲಿಂಗಯ್ಯ ಹಿರೇಮಠ ಹಾಗೂ ಸಂಗಡಿಗರಿಂದ ಶಾಸ್ತ್ರೀಯ ಸಂಗೀತ, ಭಾಗ್ಯನಗರದ ರಾಮಚಂದ್ರಪ್ಪ ಉಪ್ಪಾರ ಹಾಗೂ ಸಂಗಡಿಗರಿಂದ ಸುಗಮ ಸಂಗೀತ, ಹಾಲಬಕಟ್ಟಿಯ ದಾವಲಸಾಬ ಅತ್ತಾರ್ ಹಾಗೂ ಸಂಗಡಿಗರಿಂದ ಜಾನಪದ ಸಂಗೀತ, ಕಲಿಕೇರಿಯ ಹನುಮವ್ವ ರಾಥೋಡ್ ಹಾಗೂ ಸಂಗಡಿಗರಿಂದ ಲಂಬಾಣಿ ನೃತ್ಯ, ಕಾರಟಗಿಯ ರಾಚಯ್ಯ ಹಿರೇಮಠ ಹಾಗೂ ಸಂಗಡಿಗರಿಂದ ಗಮಕ/ ಕಥಾ ಕೀರ್ತನ, ಗಂಗಾವತಿಯ ಕಲ್ಯಾಣ ನಾಗರಾಜ ಹಾಗೂ ಸಂಗಡಿಗರಿಂದ ಹಗಲುವೇಷ ಕುಣಿತ, ಬಹದ್ದೂರು ಬಂಡಿಯ ಮೆಹಬೂಬ ಜಾಗೀರದಾರ್ ಹಾಗೂ ಸಂಗಡಿಗರಿಂದ ಕೋಲಾಟ, ಕಿನ್ನಾಳದ ಚಿದಾನಂದಪ್ಪ ಹೆಚ್ ಹಾಗೂ ಸಂಗಡಿಗರಿಂದ ಕರಡಿ ಮಜಲು ಕಾರ್ಯಕ್ರಮ, ಈ ಎಲ್ಲ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು ಜನ ಮನ ಸೆಳೆದವು.
ಕವಲೂರಿನ ಬಸವರಾಜ ಹೊಸರೂರು ಹಾಗೂ ಸಂಗಡಿಗರಿಂದ ಕಾಳಘಟಕಿ (ನಾಟಕ) ಪ್ರದರ್ಶನ ನಡೆಯಿತು. ಬಸವರಾಜ ಹೆಸರೂರು ಕವಲೂರು ಮತ್ತು ತಂಡ ಗ್ರಾಮ-ಪಟ್ಟಣಗಳ ಸಂಸ್ಕೃತಿ ಹಾಗೂ ಇಂದಿನ ಕಾಲಘಟ್ಟದ ಕುರಿತು ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳ ಸಂಬಂಧಗಳ ಬೆಸುಗೆಯ ಕುರಿತು ಕಾಲಘಟ್ಟ ನಾಟಕದ ಪ್ರಸಂಗಗಳು ಪ್ರೇಕ್ಷಕರ ಕಂಬನಿ ಮಿಡಿಯುವಂತೆ ಮಾಡಿದವು.

Total Views:
0