ಆರ್‌ಎಸ್‌ಎಸ್ ಸಿದ್ಧಾಂತಿ ಪಿ.ಜಿ. ಮೋಹನ್‌ದಾಸ್ ರ ಚಳುವಳಿ ವಿರೋಧಿ- ಮಹಿಳಾ ವಿರೋಧಿ ಮಾತುಗಳ ನ್ನು ಎಐಎಂಎಸ್‌ಎಸ್ (AIMSS) ನ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಛಬಿ ಮೊಹಂತಿ ಅವರು ಖಂಡಿಸಿದರು

H.Mallikarjun
H.Mallikarjun - Kalyanasiri
2 Min Read

Ms. Chhabi Mohanty, General Secretary of AIMSS, condemned the anti-movement and anti-women remarks made by RSS ideologue P.G. Mohandas.





 

ಆರ್‌ಎಸ್‌ಎಸ್ ಸಿದ್ಧಾಂತಿ ಪಿ.ಜಿ. ಮೋಹನ್‌ದಾಸ್ ರ ಚಳುವಳಿ ವಿರೋಧಿ- ಮಹಿಳಾ ವಿರೋಧಿ ಮಾತುಗಳ ನ್ನು ಎಐಎಂಎಸ್‌ಎಸ್ (AIMSS) ನ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಛಬಿ ಮೊಹಂತಿ ಅವರು ಖಂಡಿಸಿದರು.

ಕೊಪ್ಪಳ: ದೇಶದ ವಿದ್ಯಾರ್ಥಿಗಳು ಮತ್ತು ಯುವಜನರು ನಡೆಸಿದ ಅಭೂತಪೂರ್ವ, ಧೈರ್ಯಶಾಲಿ ಮತ್ತು ಯಶಸ್ವಿ ಹೋರಾಟದ ಕುರಿತು ಕೇರಳದ ಆರ್‌ಎಸ್‌ಎಸ್ ಸಿದ್ಧಾಂತಿ ಹಾಗೂ ಬಿಜೆಪಿ ನಾಯಕರಾದ ಪಿ.ಜಿ. ಮೋಹನ್‌ದಾಸ್ ನೀಡಿರುವ ಹೇಳಿಕೆಯನ್ನು ಎಐಎಂಎಸ್‌ಎಸ್‌ನ ಅಖಿಲ ಭಾರತ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಕುಖ್ಯಾತ ನೀಟ್ (NEET) ಹಗರಣವು 22 ವಿದ್ಯಾರ್ಥಿಗಳ ಜೀವ ಬಲಿ ಪಡೆದಿದೆ.
ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತದ ಸಂವೇದನಾಶೀಲ ಜನರು ವಿದ್ಯಾರ್ಥಿಗಳ ಈ ನ್ಯಾಯಯುತ ಹೋರಾಟವನ್ನು ಬೆಂಬಲಿಸಿದರು; ಅನೇಕ ಗಣ್ಯರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು ಮತ್ತು ಖ್ಯಾತ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ 26 ದಿನಗಳು ಉಪವಾಸ ಸತ್ಯಾಗ್ರಹ ನಡೆಸಿದರು. ನ್ಯಾಯಯುತವಾಗಿ NEET ಪರೀಕ್ಷೆಯನ್ನು ನಡೆಸುವಲ್ಲಿ ಪದೇ ಪದೇ ವಿಫಲವಾಗಿರುವ ಎನ್‌ಟಿಎ (NTA) ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದರು. ಆದರೆ ಸರ್ಕಾರ ಈ ಬೇಡಿಕೆಗಳಿಗೆ ಸ್ಪಂದಿಸಲಿಲ್ಲ. ಅಂತಿಮವಾಗಿ, ಜುಲೈ 20, 2026 ರಂದು ಹೋರಾಟನಿರತ ವಿದ್ಯಾರ್ಥಿಗಳು ಮತ್ತು ಯುವಜನರು ಸಂಸತ್ ಭವನದತ್ತ ಮೆರವಣಿಗೆಯನ್ನು (ಸಂಸದ್ ಮಾರ್ಚ್) ನಡೆಸಿದರು.
ಈ ಸಂದರ್ಭದಲ್ಲಿ, ಶ್ರೀ ಮೋಹನ್‌ದಾಸ್ ಅವರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಕೊಲ್ಲುವುದಾಗಿ ಅಸಂವೇದನಾಶೀಲವಾಗಿ ಹೇಳಿದ್ದಾರೆ. ಅವರು ವಿದ್ಯಾರ್ಥಿಗಳ ಸಾವಿನ ಬಗ್ಗೆ ಅಣಕವಾಡಿದ್ದಾರೆ; ಅಷ್ಟೇ ಅಲ್ಲದೆ, ಮಹಿಳಾ ಪ್ರತಿಭಟನಾಕಾರರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತದೆ ಮತ್ತು ಅದನ್ನು ಅವರು ಆನಂದಿಸುತ್ತಾರೆ ಎಂಬ ನೀಚ ಹೇಳಿಕೆಯನ್ನೂ ನೀಡಿದ್ದಾರೆ! ಇವು ಮಹಿಳಾ ವಿರೋಧಿ ಹೇಳಿಕೆಗಳಿಗಿಂತಲೂ ಮಿಗಿಲಾದವು.
ಪಿ.ಜಿ. ಮೋಹನ್‌ದಾಸ್ ರನ್ನು ತಕ್ಷಣವೇ ಬಂಧಿಸಬೇಕು ಮತ್ತು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಶಿಕ್ಷಣ ಮತ್ತು ಸಮಾಜವನ್ನು ಅವನತಿಯಿಂದ ರಕ್ಷಿಸಲು ಈ ಹೋರಾಟದಲ್ಲಿ ಪಾಲ್ಗೊಂಡ ಸಾವಿರಾರು ಯುವತಿಯರು ಹಾಗೂ ಅನೇಕ ತಾಯಂದಿರು ಮತ್ತು ಸಹೋದರಿಯರ ಧ್ವನಿಯಾಗಿ ಎಐಎಂಎಸ್ಎಸ್ ನಿಂದ ಒತ್ತಾಯಿಸುತ್ತೇವೆ. ಜೊತೆಗೆ, ಅವರ ಈ ಅಸಭ್ಯ ಹೇಳಿಕೆಗಳ ವಿರುದ್ಧ ಪ್ರತಿಭಟಿಸುವಂತೆ ಸಮಾಜದ ಎಲ್ಲಾ ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು ಮತ್ತು ಸದಾಶಯದ ಜನರಿಗೆ ನಾವು ಕರೆ ನೀಡುತ್ತೇವೆ ಎಂದುಜಿಲ್ಲಾ ಕಾರ್ಯದರ್ಶಿ ಶಾರದಾ ಗಡ್ಡಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Total Views: 0
Share This Article