ಕೊಲೆ ಪ್ರಕರಣ: ಅಪರಾಧಿಗೆ ದಂಡ ಸಹಿತ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ

H.Mallikarjun
H.Mallikarjun - Kalyanasiri
3 Min Read

 

Murder case: Criminal sentenced to 10 years rigorous imprisonment along with a fine

 

 

ಕೊಲೆ ಪ್ರಕರಣ: ಅಪರಾಧಿಗೆ ದಂಡ ಸಹಿತ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ

ಕೊಪ್ಪಳ ಜುಲೈ 28 (ಕರ್ನಾಟಕ ವಾರ್ತೆ): ಕೊಪ್ಪಳ ಪೊಲೀಸ್ ಉಪ ವಿಭಾಗ ವ್ಯಾಪ್ತಿಗೆ ಒಳಪಡುವ ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬಳೂಟಗಿ ಗ್ರಾಮದ ಅಪರಾಧಿ ಮಂಜುನಾಥ ತಂದೆ ಶರಣಪ್ಪ ಪುರ್ತಗೇರಿ ಇತನು ತನ್ನ ಹೆಂಡತಿಯಾದ ನಿರ್ಮಲಾಳನ್ನು (ನಿಂಗಮ್ಮ) ಕೊಲೆ ಮಾಡಿದ ಅಪರಾಧ ಸಾಬೀತಾದ ಹಿನ್ನಲೆಯಲ್ಲಿ ಗೌರವಾನ್ವಿತ ಕೊಪ್ಪಳ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಸಿ. ಅವರು, ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ. 30,000 ದಂಡ ವಿಧಿಸಿ ಜುಲೈ 25 ರಂದು ತೀರ್ಪು ಹೊರಡಿಸಿದ್ದಾರೆ.
ಬಳೂಟಗಿ ಗ್ರಾಮದ ನಿವಾಸಿಯಾದ ಮಂಜುನಾಥ ತಂದೆ ಶರಣಪ್ಪ ಪುರ್ತಗೇರಿ ಈತನಿಗೆ ಮೃತಳ ಅಣ್ಣ ಬಸವರಾಜ ಈತನು ತನ್ನ ತಂಗಿಯಾದ ನಿರ್ಮಲಾ @ ನಿಂಗಮ್ಮಳನ್ನು 2018ರ ಮಾರ್ಚ 6 ರಂದು ಮಂಜುನಾಥನಿಗೆ ಗುರು ಹಿರಿಯರ ಸಮಕ್ಷಮ 4 ತೊಲೆ ಬಂಗಾರ, 31 ಸಾವಿರ ನಗದು ಹಣ ಮತ್ತು 60 ಸಾವಿರ ಬಾಂಡೆ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ಮದುವೆಯಾಗಿ 4 ತಿಂಗಳುಗಳ ಕಾಲ ಹೆಂಡತಿಯನ್ನು ಚೆನ್ನಾಗಿ ನೋಡಿಕೊಂಡು ನಂತರ ದಿನಗಳಿಂದ ತನ್ನ ಹೆಂಡತಿಗೆ ಹಾಗೂ ಅವರ ತವರು ಮನೆಯವರಿಗೆ ಇನ್ನೂ ಹೆಚ್ಚಿನ ವರದಕ್ಷಿಣೆಯಾಗಿ 5 ತೊಲೆ ಬಂಗಾರ ತರುವಂತೆ ನಿರ್ಮಲಾ @ ನಿಂಗಮ್ಮಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಾ ಹೆಚ್ಚಿನ ವರದಕ್ಷಿಣೆ ತರದಿದ್ದರೆ ಕೊಲೆ ಮಾಡಿ ಬೆರೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹೇಳಿದ್ದರಿಂದ ನಿರ್ಮಲಾ @ ನಿಂಗಮ್ಮ ಈಕೆಯ ಅಣ್ಣ ಬಸವರಾಜ ಮನೆಯವರೂ ಹಾಗೂ ಹಿರಿಯರು ಅಪರಾಧಿ ಮನೆಯವರು ಕೂಡಿ ಬುದ್ದಿವಾದ ಹೇಳಿದರೂ ಕೂಡ ಅಪರಾಧಿ ಮಂಜುನಾಥ ಯಾರ ಮಾತನ್ನು ಕೇಳದೆ ಹೆಚ್ಚಿನ ವರದಕ್ಷಿಣೆಯಾಗಿ ಬಂಗಾರವನ್ನು ಕೊಡದ ಕಾರಣ 2021ರ ಅಕ್ಟೋಬರ್ 29 ರಂದು ಬೆಳಿಗ್ಗೆ 8-30 ರಿಂದ ಬೆಳಿಗ್ಗೆ 9-30 ಗಂಟೆಯ ಮಧ್ಯದ ಅವದಿಯಲ್ಲಿ ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ ಹೆಂಡತಿಯೊಂದಿಗೆ ಜಗಳ ಮಾಡಿ ಅವಳನ್ನು ಕೊಲೆ ಮಾಡುವ ಉದ್ದೇಶದಿಂದ ಆಕೆಯನ್ನು ನೆಲಕ್ಕೆ ಕೆಡವಿ ತನ್ನ ಮನೆಯಲ್ಲಿದ್ದ ಎರಡು ಕುಡುಗೋಲುಗಳಿಂದ ಅವಳ ಕುತ್ತಿಗೆ ಹಾಗೂ ಬಲಗೈಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದರಿಂದ ಅವಳಿಗೆ ಭಾರಿ ಸ್ವರೂಪದ ರಕ್ತಗಾಯಗಳಾಗಿ ರಕ್ತದ ಮಡುವಿನಲ್ಲಿಯೇ ಬಿದ್ದು ಮೃತಪಟ್ಟಿದ್ದು,
ಈ ಬಗ್ಗೆ ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 112/2021, ಕಲಂ: 498[ಎ], 302, 304[ಬಿ] ಐಪಿಸಿ ಮತ್ತು ಕಲಂ: 3, 4 ಡಿ.ಪಿ ಕಾಯ್ದೆ ಅಡಿಯಲ್ಲಿ ತನಿಖಾಧಿಕಾರಿಗಳಾದ ಗೀತಾ ಬೆನಾಳ ಪೊಲೀಸ್ ಉಪ-ಅಧೀಕ್ಷಕರು ಕೊಪ್ಪಳ ಇವರು ತನಿಖೆಯಲ್ಲಿ ಅಪರಾಧಿಯ ಮೇಲೆ ಆರೋಪ ಸಾಭಿತಾಗಿದ್ದರಿಂದ ಆಪಾಧಿತನ ಮೇಲೆ ದೋಷಾರೋಪಣೆ ಪಟ್ಟಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
ಈ ಪ್ರಕರಣದಲ್ಲಿ ವಿಚಾರಣೆ ನಡೆದು ಅಪರಾಧಿ ಮಂಜುನಾಥ ತಂದೆ ಶರಣಪ್ಪ ಪುರ್ತಗೇರಿ ಇತನ ಮೇಲಿರುವ ಆರೋಪಗಳು ಸಾಭೀತಾಗಿವೆ ಎಂದು ಗೌರವಾನ್ವಿತ ಕೊಪ್ಪಳ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಸಿ. ಅವರು, ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ. 30,000 ದಂಡ ವಿಧಿಸಿ ಜುಲೈ 25 ರಂದು ತೀರ್ಪು ಹೊರಡಿಸುತ್ತಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಬಂಡಿ ಅಪರ್ಣಾ ಎಂ ಕೊಪ್ಪಳ ಇವರು ಸರ್ಕಾರದ ಪರವಾಗಿ ಪ್ರಕರಣ ನಡೆಸಿ ವಾದ ಮಂಡಿಸಿರುತ್ತಾರೆ. ಈ ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ ಶಿವಕುಮಾರ ಸಿಹೆಚ್‌ಸಿ-83 ಮತ್ತು ನ್ಯಾಯಾಲಯಕ್ಕೆ ಸರಿಯಾದ ಸಮಯಕ್ಕೆ ಸಾಕ್ಷಿದಾರರನ್ನು ಹಾಜರುಪಡಿಸಿದ ಯಲಬುರ್ಗಾ ಪೊಲೀಸ್ ಠಾಣೆಯ ಸಿಬ್ಬಂದಿಯಾದ ವಿಜಯಲಕ್ಷ್ಮೀ ಮಹಿಳಾ ಸಿಹೆಚ್ ಸಿ-57 ಇವರು ಸಾಕ್ಷಿದಾರರನ್ನು ಹಾಜರುಪಡಿಸಿರುತ್ತಾರೆ ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆವರಣದ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
Total Views: 3
Share This Article