ಕಳೆದ ಹಲವಾರು ತಿಂಗಳಿಂದ ಪಿಂಚಣಿ ಪಲಾನುಭವಿಗಳಿಗೆ ಪಿಂಚಣಿ ಹಣ ಸ್ಥಗಿತವಾಗಿರುವುದನ್ನು ಖಂಡಿಸಿ AIMSS ನಿಂದ ಪತ್ರಿಕಾ ಹೇಳಿಕೆ.
Press release from AIMSS confirming that pension payments have been on hold for pension recipients for the past several months.
ಕೊಪ್ಪಳ :ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ರಾಜ್ಯದ ಸುಮಾರು 18 ಲಕ್ಷ ಪಿಂಚಣಿ ಪಲಾನುಭವಿಗಳಿಗೆ ಕಳೆದ 4-5 ತಿಂಗಳಿಂದ ಪಿಂಚಣಿ ಹಣ ತಲುಪಿಲ್ಲ. ಬಡ ವಿಧವೆಯರು, ವೃದ್ಧರು, ಅಂಗವಿಕಲರು ಪಿಂಚಣಿ ಹಣದ ಮೇಲೆಯೇ ಅವಲಂಬಿತರಾಗಿದ್ದಾರೆ. ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಬಡ ಪಿಂಚಣಿದಾರರು ಪಡೆಯುತ್ತಿರುವ ಪುಡಿಗಾಸು ಪಿಂಚಣಿ ಹಣಕ್ಕೂ ಒಂದಲ್ಲ ಒಂದು ನೆಪವೊಡ್ಡಿ ಸರ್ಕಾರ ಕತ್ತರಿ ಹಾಕುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಇವತ್ತಿನ ಬೆಲೆ ಏರಿಕೆಯ ಸಂಧರ್ಭದಲ್ಲಿ ಸರ್ಕಾರ ಕೊಡುವ ಪಿಂಚಣಿ ಹಣ ಅತ್ಯಲ್ಪ. ಅದನ್ನು ಕೂಡ ಸ್ಥಗಿತಗೊಳಿಸಿರುವ ಸರ್ಕಾರ ಬಡ ವೃದ್ಧರ, ಅಂಗವಿಕಲರ ಮತ್ತು ವಿಧವೆಯರ ಬದುಕನ್ನು ಬೀದಿಗೆ ತಳ್ಳುತ್ತಿದೆ. ಇದನ್ನು AIMSS ರಾಜ್ಯ ಸಮಿತಿ ಸಂಪೂರ್ಣವಾಗಿ ಖಂಡಿಸುತ್ತಿದೆ ಹಾಗೂ ಈ ಕೂಡಲೇ ಪಿಂಚಣಿ ಹಣವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತೇವೆ.
Total Views:
0

