Progress review meeting of Minister Shivraj S. Tangadagi on August 6
ಆಗಸ್ಟ್ 6 ರಂದು ಸಚಿವ ಶಿವರಾಜ್ ಎಸ್.ತಂಗಡಗಿಯವರಿAದ ಪ್ರಗತಿ ಪರಿಶೀಲನಾ ಸಭೆ
ಕೊಪ್ಪಳ ಆಗಸ್ಟ್ 04, (ಕರ್ನಾಟಕ ವಾರ್ತೆ): ಸಚಿವರಾದ ಶಿವರಾಜ್ ಎಸ್.ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 6 ರಂದು ಸಂಜೆ 4 ಗಂಟೆಗೆ ಜಿಲ್ಲಾ ಪಂಚಾಯತ್‌ನ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ಏರ್ಪಡಿಸಲಾಗಿದೆ.
ಸಭೆಯಲ್ಲಿ ಋತುಮಾನದ ಪರಿಸ್ಥಿತಿಗಳು ಮತ್ತು ಹವಾಮಾನ ಮುನ್ಸೂಚನೆ, ಬೆಳೆ ಪರಿಸ್ಥಿತಿ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯ ಸ್ಥಿತಿಗತಿ, ಮೇವು ಲಭ್ಯತೆ, ಟಾಸ್ಕ್ ಫೋರ್ಸ ಸಮಿತಿಗಳ ಪ್ರಗತಿ, ವಿಬಿ-ಜಿ ರಾಮ್ ಜಿ ಯೋಜನೆ ಪ್ರಗತಿ ಕುರಿತು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನಿವೇಶನ ಹಂಚಿಕೆ ಬಗ್ಗೆ ಭೂ ಲಭ್ಯತೆ ಕುರಿತು, ಗೃಹ ಜ್ಯೋತಿ ಪರಿಶೀಲನೆ, ಗೃಹಲಕ್ಷ್ಮೀ ಮರಣ ಹೊಂದಿದ ಪ್ರಕರಣದ ಕುರಿತು ಪರೀಶಿಲನೆ, ಎಸ್.ಐ.ಆರ್ ನಲ್ಲಿ ಸಾಧಿಸಿದ ಪ್ರಗತಿ ವರದಿ ಕುರಿತು, ಜಾತಿ ಪ್ರಮಾಣ ಪತ್ರ ಹಂಚಿಕೆ ಕುರಿತು ಹಾಗೂ ಇತರೆ ವಿಷಯಗಳು ಬಗ್ಗೆ ಸಚಿವರು ಪ್ರಗತಿ ಪರಿಶೀಲನೆ ನಡೆಸುವರು.
ಆದ್ದರಿಂದ ಸಂಬAಧಿಸಿದ ಎಲ್ಲ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಖುದ್ದಾಗಿ ಸಭೆಗೆ ಹಾಜರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Total Views:
1

