Protest demanding to solve the problem of hostel outsourcing staff

ಗಂಗಾವತಿ, 20, ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾ ಸಮಿತಿ ನೇತೃತ್ವದಲ್ಲಿ ತಾಲೂಕ್ ಪಂಚಾಯತ್ ಆವರಣದ ಮುಂದೆ ಬುಧವಾರದಂದು ಹಾಸ್ಟೆಲ್ ಹೊರಗುತ್ತಿಗೆ ಸಿಬ್ಬಂದಿಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಹಾಗೂ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಬೃಹತ್ ಪ್ರತಿಭಟನೆ ನಡೆಸಿದರು,, ಈ ಸಂದರ್ಭದಲ್ಲಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರು ವಿವಿಧ ಘೋಷಣೆಗಳು ಕೂಗಿ ಪ್ರತಿಭಟಿಸಿದರು, ಸಂಘದ ಜಿಲ್ಲಾಧ್ಯಕ್ಷ ಗ್ಯಾನೇಶ್ ಕಡ ಗದ ಮಾತನಾಡಿ, ಹಾಸ್ಟೆಲ್ ಮತ್ತು ವಸತಿ ಶಾಲೆ ಗಳಿಗೆ ನೇರ ನೇಮಕಾತಿ ಮಾಡಬಾರದು ಹೊರ ಗುತ್ತಿಗೆ ಪದ್ಧತಿಯನ್ನು ಕೈಬಿಡಬೇಕು ಸಿ ಮತ್ತು ಡಿ ವರ್ಗದ ಹೊರಗುತ್ತಿಗೆ ನಿವೃತ್ತಿ ವರೆಗೆ ಸೇವಾ ಭದ್ರತೆ ಕೊಡಬೇಕು, ಇಲಾಖೆಯಿಂದ ನೇರವಾಗಿ ಮಾಸಿಕ ವೇತನವನ್ನು ಬ್ಯಾಂಕ್ ಖಾತೆಗೆ ಹಾಕುವುದು ಕಾರ್ಮಿಕ ಇಲಾಖೆಯ ನಿಯಮದಂತೆ ಕನಿಷ್ಠ ವೇತನ ಜಾರಿಗೊಳಿಸುವುದು, ಕಾನೂನು ಪ್ರಕಾರ ವಾರದ ರಜೆ ಹಬ್ಬಗಳ ರಜೆ ವೇತನದ ಚೀಟಿ ಇಎಸ್ಐ ಕಾರ್ಡ್ ಪಿ ಎಫ್ ಹಣ ತುಂಬಿದರ ಶ್ರೀ ಪಾವತಿ ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ಸಮಯದ ನಿಗದಿಪಡಿ ಸುವೇಕೆ, ದಿನಾಂಕ 27.12.2013ರ ಸುತ್ತೋಲೆಯ ಪ್ರಕಾರ ಸಿಬ್ಬಂದಿಗಳ ನೇಮಕ, ಇತರೆ ಪ್ರಮುಖ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ತಿಳಿಸಿದರು ಒಟ್ಟು ಪ್ರಮುಖ 19 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಜಿಲ್ಲಾ ಪಂಚಾಯತಿ ಸಿಇಒ ಅವರಿಗೆಮನವಿ ಪತ್ರ ಸಲ್ಲಿಸಿದರು, ಈ ಸಂದರ್ಭದಲ್ಲಿ ಕಾರ್ಯದರ್ಶಿ ದಾವಲ್ ಸಾಬ್, ಖಜಾಂಚಿ ಫಕೀರಪ್ಪ, ಉಪಾಧ್ಯಕ್ಷ ಮಹಮ್ಮದ್ ರಫಿ ಮುಖಂಡರುಗಳಾದ ಹನುಮಂತಪ್ಪ ಮುಕುಂಪಿ, ಶಾಂತಮ್ಮ ಪಾರ್ವತಿ ಶಿವಮ್ಮ, ಆನಂದ ರಮೇಶ ಸೋಮನಾಥ್ ಸೇರಿದಂತೆ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು
Kalyanasiri Kannada News Live 24×7 | News Karnataka
