-:ಲೇಖನ :-
ನಗ್ರಪ್ಪೋ ನಗ್ರೀ….. ನಗ್ರಪ್ಪೋ ನಗ್ರೀ..
- -:ಲೇಖನ :-
- ನಗ್ರಪ್ಪೋ ನಗ್ರೀ….. ನಗ್ರಪ್ಪೋ ನಗ್ರೀ..
- ‘ನಗೆ ನುಡಿಮುತ್ತುಗಳು’
- ತನ್ನೊಳಗೆ ನಗುವವನು – ಜ್ಞಾನಿ. ಮೈಮರೆತು ನಗುವವನು – ರಸಿಕ. ಗೆದ್ದರೂ ನಗದವನು – ಕರ್ಮಯೋಗಿ. ಇನ್ನೊಬ್ಬರಿಗಾಗಿ ನಗುವವನು – ಅಯೋಗ್ಯ. ನಗುತ್ತಲೇ ವಿಜಯ ಸಾಧಿಸುವವನು – ಬುದ್ಧಿವಂತ. ಇನ್ನೊಬ್ಬರನ್ನು ನಗಿಸುವವನು – ವಿದೂಷಕ. ಇನ್ನೊಬ್ಬರನ್ನು ನೋಡಿ ನಗುವವನು – ಖಳನಾಯಕ. ತಾನೇ ನಗುವವನು – ಹುಚ್ಚ. ಗೆಳತಿಯನ್ನು ನೆನೆದು ನಗುವವನು – ಪ್ರೇಮಿ.
ನಗು ದೇವರು ಕೊಟ್ಟ ವರ, ನಗುವಿನಿಂದ ಒತ್ತಡ ನಿವಾರಿಸಿಕೊಳ್ಳಬಹುದು. ನಗೆಯಿಂದ ವಾತಾವರಣ ತಿಳಿಯಾಗಿಸಬಹುದು. ನಗು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ…… ಹೀಗೆ ಅನೇಕ ಸಂಗತಿ ತಿಳಿದಿದ್ದರೂ ದೈನಂದಿನ ಬದುಕಿನಲ್ಲಿ ಜನರು ನಗುತ್ತಿಲ್ಲ, ನಗುವುದನ್ನೆ ಮರೆತಿದ್ದಾರೆ.

ನಗುವು ಸಾಮಾನ್ಯವಾಗಿ ದೈಹಿಕ ಪ್ರತಿಕ್ರಿಯೆ. ಮುಖದ ಲಕ್ಷಣದಿಂದ ನಗು ಹೊರಹೊಮ್ಮುತ್ತದೆ. ಮೇಲ್ನೋಟಕ್ಕೆ ನಗು ಒಂದೇ ರೀತಿ ಕಾಣಿಸುತ್ತದೆ. ಆದರೆ ಅವು ವಿವಿಧ ಭಾವನೆಗಳು ಮತ್ತು ಸಂದೇಶಗಳನ್ನು ನೀಡುತ್ತದೆ. ನಗುಗಳನ್ನು ಸಂತೋಷ ಮತ್ತು ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಗುವುದನ್ನು ಯಾರಿಗೆ ಯಾರೂ ಕಲಿಸುವ ಅಗತ್ಯವಿಲ್ಲ, ನಗು ಎಂಬುದು ಮೂಲ ಮಾನವನಿಂದ ಪ್ರಾರಂಭವಾಗಿ ಇಂದಿನ ವರೆಗೆ ಹರಿದು ಬಂದಿರುವ ಶಾರೀರಿಕ ತಂತ್ರ.
ನಗು ಎಂಬುದು ಕೇವಲ ತುಟಿಗಳ ಮೇಲಿನ ಹಾವಭಾವವಲ್ಲ. ನಗು ಮನಸ್ಸಿನ ಆನಂದದ ಅಭಿವ್ಯಕ್ತಿ. ಸವಿಯಾದ ಮತ್ತು ಹಿತವಾದ ಅನುಭವವೇ ನಗು. ನಗುವು ನೈಸರ್ಗಿಕ ಔಷಧಿಯಾಗಿದ್ದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅವಶ್ಯಕವಾಗಿದೆ. ಒತ್ತಡದ ಹಾರ್ಮೋನ್ ಗಳನ್ನು ಕಡಿಮೆಗೊಳಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಗುವಿನಿಂದ ರಕ್ತ ಸಂಚಾರ ಸುಧಾರಿಸಿ ಹೃದಯದ ಆರೋಗ್ಯ ವೃದ್ಧಿಸುತ್ತದೆ.
ನಗು ಒತ್ತಡ ನಿವಾರಿಸಿ ಮನಸ್ಸನ್ನು ಶಾಂತಗೊಳಿಸುತ್ತದೆ. ನಗುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನಗು ಜನರ ನಡುವಿನ ಸಂಬಂಧ ಗಟ್ಟಿ ಗೊಳಿಸುತ್ತದೆ. ನಗುವು ಜೀವನದ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ನೀಡುತ್ತದೆ. ನಗು ಎಂದರೆ ಮಲ್ಲಿಗೆಯ ಪರಿಮಳ ಇದ್ದಂತೆ. ಸೌಂದರ್ಯವನ್ನು ದುಪ್ಪಟ್ಟು ಮಾಡುವ ಆಭರಣವೇ ನಗು. ಕಹಿ ವಾತಾವರಣವನ್ನು ಸಿಹಿಯಾಗಿಸುವ ಅಧ್ಬುತ ಶಕ್ತಿ ನಗುವಿಗೆ ಇದೆ.
ಸುಂದರವಾದ ನಗು ನಮ್ಮನ್ನು ಹೊಸ ಕೆಲಸಗಳಿಗೆ ಆತ್ಮವಿಶ್ವಾಸದಿಂದ ಮುನ್ನುಗ್ಗುವಂತೆ ಮಾಡುತ್ತದೆ. ಕೆಲಸದ ಒತ್ತಡ, ಸಮಯದ ಅಭಾವ ಹಾಗೂ ಮತ್ತಿತರ ಕಾರಣಗಳಿಂದ ಜನರು ನಗುವುದನ್ನು ಮರೆತಿದ್ದಾರೆ. ಪ್ರಕೃತಿ ನೀಡಿದ ಚೈತನ್ಯಯುಕ್ತ ಸಹಜ ಕ್ರಿಯೆ ನಗು.
ಮನಸ್ಸಿಗೆ ಇಷ್ಟವಾದಾಗ, ಸಮಾಧಾನವಾದಾಗ ಇಲ್ಲವೇ ಮುಜುಗರವಾದಾಗ ನಗು ಮೂಡುತ್ತದೆ. ನಸುನಗು, ಶಿಷ್ಟಾಚಾರದ ನಗು, ಸಾಂಕ್ರಾಮಿಕ ನಗು, ತುಂಟ ನಗು, ಹೊಟ್ಟೆ ನಗು, ಮನಃಪೂರ್ವಕ ನಗು, ಸೌಜನ್ಯದ ನಗು, ಮುಗುಳ್ನಗು, ಕುಹಕು ನಗು, ವ್ಯಂಗ್ಯ ನಗು, ಅಟ್ಟಹಾಸ ನಗು, ನಾಚಿಕೆಯ ನಗು, ಹೂ ನಗು, ಬಿಂಕದ ನಗು……. ಹೀಗೆ ಅನೇಕ ರೀತಿಯಲ್ಲಿ ನಗುಗಳನ್ನು ಗುರುತಿಸಬಹುದು.
ನಗುವಿನ ಪ್ರಯೋಜನೆಗಳು :
ನಗುವಿನಿಂದ ಮನಸ್ಸಿನ ಖಿನ್ನತೆ, ಬೇಸರ ದೂರವಾಗುತ್ತದೆ. ಸುತ್ತಮುತ್ತಲಿನ ವಾತಾವರಣ, ಸ್ನೇಹಿತರು, ಬಂಧು ಬಾಂಧವರು, ಎಲ್ಲರ ಜೊತೆ ಖುಷಿಯಾದ ಸಂಬಂಧವನ್ನು ಹೊಂದಬಹುದು. ಕಷ್ಟಗಳನ್ನು ಸುಲಭವಾಗಿ ಎದುರಿಸಬಹುದು. ಹಲವಾರು ಕಾಯಿಲೆಗಳಿಗೆ ಉತ್ತಮ ಔಷಧಿ, ದೇಹಕ್ಕೆ ಆಮ್ಲಜನಕವನ್ನು ಪೂರೈಸುತ್ತದೆ. ದೈಹಿಕ ಆರೋಗ್ಯವಷ್ಟೇ ಅಲ್ಲದೇ ಜನರು ನಡುವಿನ ಬಾಂಧವ್ಯ ಗಟ್ಟಿಗೊಳಿಸಲು ಮತ್ತು ಸಾಮಾಜಿಕ ಸಾಮರಸ್ಯ ಕಾಪಾಡಿಕೊಳ್ಳಲು ಮುಖ್ಯ ಪಾತ್ರ ವಹಿಸುತ್ತದೆ. ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಕೋಪ ಮತ್ತು ಅಸಮಾಧಾನವನ್ನು ಹಗುರ ಗೊಳಿಸುತ್ತದೆ. ಹೃದಯದ ಆರೋಗ್ಯವನ್ನು ರಕ್ಷಿಸುತ್ತದೆ.
ನಗು ಬದುಕಿನ ಸಂಜೀವಿನಿ, ನಗು ಬಾಳಿನ ಜೀವ ಸೆಲೆ, ಕಷ್ಟಗಳೇನೆ ಇದ್ದರೂ ಜೀವನದಲ್ಲಿ ನಗು ಎಂಬ ಬೆಳಕು ಸದಾ ಇರಬೇಕು. ನಗು ಪ್ರಾಮಾಣಿಕವಾಗಿ ಇರಬೇಕು, ಬೇರೆಯವರ ಮೊಗದಲ್ಲಿಯೂ ನಗು ಮೂಡಿಸುವಂತಿರಬೇಕು. ಜೀವನದ ನಗುವೇ ಮೂಲ ಮಂತ್ರ ಆಗಬೇಕು. ನಮ್ಮ ನಗುವಿನ ಮೂಲಕ ಸುತ್ತಲಿದ್ದವರನ್ನು ಬದಲಾಯಿಸಲು ಪ್ರಯತ್ನಿಸೋಣ. ಮುಖದ ಮೇಲಿನ ನಗುವೂಂದು ಸುಂದರ ಸಂಗತಿ. ಕಣ್ಣೀರಿನಿಂದಾಗಲಿ, ಕೋಪದಿಂದಾಗಲಿ ಅಳಿಸಿ ಹೋಗದಂತೆ ನೋಡಿಕೊಳ್ಳೋಣ.
‘ನಕ್ಕ ಸಾಯ್ರೋ, ನಕ್ಕು ಸಾಯ್ರಿ, ನಕ್ಕ ಸತ್ರ ನಕ್ಷತ್ರ ಅಕ್ಕೀರಿ’ ಎಂದು ದ.ರಾ.ಬೇಂದ್ರೆ ಅವರು ಸೊಗಸಾಗಿ ಹೇಳಿದ್ದಾರೆ.
ಇನ್ನಾದರೂ ನಗ್ರಪ್ಪೋ…. ನಗ್ರೀ, ನಗೋಕೆ ಯಾಕೆ ಚಿಂತಿ ಮಾಡ್ತೀರಿ. ಒತ್ತಡ, ಕೋಪ ಎಲ್ಲಾ ಬಿಟ್ಟಾಕಿ. ಹೃದಯ ತುಂಬಿ ನಕ್ಕು ಬಿಡ್ರೀ. ನಗುವುದೇ ಸ್ವರ್ಗ, ಅಳುವುದೇ ನರಕ.

-ಎಂ.ಪರಶುರಾಮ ಪ್ರಿಯ
ಪತ್ರಕರ್ತರು
ಗಂಗಾವತಿ – ಮುನಿರಾಬಾದ್

-ಎಂ.ಪರಶುರಾಮ ಪ್ರಿಯ
ಪತ್ರಕರ್ತರು
ಗಂಗಾವತಿ – ಮುನಿರಾಬಾದ್
‘ನಗೆ ನುಡಿಮುತ್ತುಗಳು’
ನಗುವೇ ಬಾಳು, ನಗುವೇ ಸ್ವರ್ಗ
ಕಷ್ಟದಲ್ಲಿಯೂ ನಕ್ಕು ಬಾಳಲು ಕಲಿಯಬೇಕು.
ನಗುವು ಮಿನುಗುದ ಮೋರೆ, ಹಾಳು ಕಹಿ ಸೋರೆ.
ನಗು ರೂಢಿಸಿಕೊಂಡರೆ ಕಾಯಿಲೆಗಳು ವಾಸಿ.
ನಗೆಯ ರಕ್ಷಾಕವಚ ಧರಿಸಿದವನಿಗೆ ತಾಯತ ಬೇಕಿಲ್ಲ.
ತಾನೇ ನಗುವುದು ಆತ್ಮಸ್ಥ, ಇನ್ನೊಬ್ಬರನ್ನು ನಗಿಸುವುದು ಪರಸ್ಥ.
ಮೌನ ಮತ್ತು ನಗು ಮನಸ್ಸಿನ ಎರಡು ಮುತ್ತುಗಳು. ನಗುವೇ ಉತ್ತಮ ಜೀವನಶೈಲಿಯ ಗುಟ್ಟು.
ಕಷ್ಟದಲ್ಲಿಯೂ ನಕ್ಕು ಬಾಳಲು ಕಲಿಯಬೇಕು.
ನಗುವು ಮಿನುಗುದ ಮೋರೆ, ಹಾಳು ಕಹಿ ಸೋರೆ.
ನಗು ರೂಢಿಸಿಕೊಂಡರೆ ಕಾಯಿಲೆಗಳು ವಾಸಿ.
ನಗೆಯ ರಕ್ಷಾಕವಚ ಧರಿಸಿದವನಿಗೆ ತಾಯತ ಬೇಕಿಲ್ಲ.
ತಾನೇ ನಗುವುದು ಆತ್ಮಸ್ಥ, ಇನ್ನೊಬ್ಬರನ್ನು ನಗಿಸುವುದು ಪರಸ್ಥ.
ಮೌನ ಮತ್ತು ನಗು ಮನಸ್ಸಿನ ಎರಡು ಮುತ್ತುಗಳು. ನಗುವೇ ಉತ್ತಮ ಜೀವನಶೈಲಿಯ ಗುಟ್ಟು.
‘ನಗುವಿನ ರಹಸ್ಯಗಳು’
ತನ್ನೊಳಗೆ ನಗುವವನು – ಜ್ಞಾನಿ.
ಮೈಮರೆತು ನಗುವವನು – ರಸಿಕ.
ಗೆದ್ದರೂ ನಗದವನು – ಕರ್ಮಯೋಗಿ.
ಇನ್ನೊಬ್ಬರಿಗಾಗಿ ನಗುವವನು – ಅಯೋಗ್ಯ.
ನಗುತ್ತಲೇ ವಿಜಯ ಸಾಧಿಸುವವನು – ಬುದ್ಧಿವಂತ.
ಇನ್ನೊಬ್ಬರನ್ನು ನಗಿಸುವವನು – ವಿದೂಷಕ.
ಇನ್ನೊಬ್ಬರನ್ನು ನೋಡಿ ನಗುವವನು – ಖಳನಾಯಕ.
ತಾನೇ ನಗುವವನು – ಹುಚ್ಚ.
ಗೆಳತಿಯನ್ನು ನೆನೆದು ನಗುವವನು – ಪ್ರೇಮಿ.
ಮೈಮರೆತು ನಗುವವನು – ರಸಿಕ.
ಗೆದ್ದರೂ ನಗದವನು – ಕರ್ಮಯೋಗಿ.
ಇನ್ನೊಬ್ಬರಿಗಾಗಿ ನಗುವವನು – ಅಯೋಗ್ಯ.
ನಗುತ್ತಲೇ ವಿಜಯ ಸಾಧಿಸುವವನು – ಬುದ್ಧಿವಂತ.
ಇನ್ನೊಬ್ಬರನ್ನು ನಗಿಸುವವನು – ವಿದೂಷಕ.
ಇನ್ನೊಬ್ಬರನ್ನು ನೋಡಿ ನಗುವವನು – ಖಳನಾಯಕ.
ತಾನೇ ನಗುವವನು – ಹುಚ್ಚ.
ಗೆಳತಿಯನ್ನು ನೆನೆದು ನಗುವವನು – ಪ್ರೇಮಿ.
‘ನಗುವಿನ ಕುರಿತು ಗಣ್ಯರ ಮಾತುಗಳು’
ನಗುವಿಲ್ಲದ ದಿನವು ವ್ಯರ್ಥವಾದ ದಿನ. ಒತ್ತಡ ಕಡಿಮೆ ಮಾಡಲು ಅತ್ಯುತ್ತಮ ಮದ್ದು ನಗು – ಚಾರ್ಲಿ ಚಾಪ್ಲಿನ್
ನಗುವು ಕೃತಕವಾಗಿರಬಾರದು, ನಗು ಹೃದಯದಿಂದ ಬರಬೇಕು – ಕುವೆಂಪು
ನಗು ಮನಸ್ಸಿನಿಂದ ಬರಬೇಕು, ಆಗಲೇ ನಗು ಬಾಳಿನ ಸಂಜೀವಿನಿ – ದ.ರಾ.ಬೇಂದ್ರೆ

