ದಸಾಪ: ಜಿಲ್ಲಾಧ್ಯಕ್ಷರಾಗಿ ಸಾಹಿತಿ ಮೈಲಾರಪ್ಪ ಬೂದಿಹಾಳ ನೇಮಕ

H.Mallikarjun
H.Mallikarjun - Kalyanasiri
1 Min Read

Dasapa: Writer Mailarappa Budihala appointed as District President.

ದಸಾಪ: ಜಿಲ್ಲಾಧ್ಯಕ್ಷರಾಗಿ ಸಾಹಿತಿ ಮೈಲಾರಪ್ಪ ಬೂದಿಹಾಳ ನೇಮಕ

ಜಾಹೀರಾತು

ಗಂಗಾವತಿ: ದಲಿತ ಸಾಹಿತ್ಯ ಪರಿಷತ್ತು ಕೊಪ್ಪಳ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ, ಸಾಹಿತಿ ಮೈಲಾರಪ್ಪ ಬೂದಿಹಾಳ ನೇಮಕಗೊಂಡಿದ್ದಾರೆ ಎಂದು ರಾಜ್ಯ ಘಟಕದ ಅಧ್ಯಕ್ಷ ಡಾ ಅರ್ಜುನ ಗೋಳಸಂಗಿ ತಿಳಿಸಿದ್ದಾರೆ.
ಗುರುವಾರ ಹೇಳಿಕೆ ನೀಡಿರುವ ಅವರು, ದಸಾಪ ಕಲಬುರ್ಗಿ ವಿಭಾಗೀಯ ಸಂಯೋಜಕ ಎಚ್.ಎಫ್. ಮಸ್ಕಿ ಅವರ ಸೂಚನೆಯಂತೆ ಪರಿಷತ್ ನ ಕಾರ್ಯಚಟುವಟಿಕೆಗಳಲ್ಲಿ ಕ್ರಿಯಾಶೀಲತೆಯನ್ನು ಗುರುತಿಸಿ ಬಹುಮುಖ ಪ್ರತಿಭೆಯುಳ್ಳ ಗಂಗಾವತಿಯ ಸಾಹಿತಿ ಮೈಲಾರಪ್ಪ ಬೂದಿಹಾಳ ಅವರನ್ನು ಮುಂದಿನ ಮೂರು ವರ್ಷದ ಅವಧಿಗೆ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಇವರನ್ನು ಬದಲಾಯಿಸುವ ಇಲ್ಲವೇ ಮುಂದುವರೆಸುವ ಹಕ್ಕು ರಾಜ್ಯ ಕಾರ್ಯಕಾರಿ ಸಮಿತಿಗೆ ಇರುತ್ತದೆ. ತಾವು ಸ್ಥಳೀಯವಾಗಿ ಸಭೆ ಕರೆದು ತಮ್ಮ ಜಿಲ್ಲಾ ಕಾರ್ಯಕಾರಿ ಸಮಿತಿಯನ್ನು ಹಾಗೂ ತಾಲೂಕು ಅಧ್ಯಕ್ಷರನ್ನು ನೇಮಕ ಮಾಡಿಕೊಂಡು ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಪಟ್ಟಿಯನ್ನು ಅನುಮೋದನೆಗಾಗಿ ರಾಜ್ಯ ಸಮಿತಿಗೆ ಕಳುಹಿಸಿಕೊಡಬೇಕು. ದಲಿತ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರೀತಿಸುವ ಗೌರವಿಸುವ ಸಮಾನ ಮನಸ್ಕರನ್ನು ಸೇರಿಸಿಕೊಂಡು ಜಿಲ್ಲಾ ಸಾಹಿತ್ಯ ಪರಿಷತ್ತು ಕೊಪ್ಪಳ ಘಟಕವನ್ನು ಸಂಘಟಿಸಬೇಕೆಂದು ನೇಮಕಾತಿ ಆದೇಶ ಪತ್ರದಲ್ಲಿ ಸೂಚಿಸಿದ್ದಾರೆ.

Total Views: 0
Share This Article