Measures taken for the distribution of rations for the month of July in accordance with the rules.
ಜುಲೈ ಮಾಹೆಗೆ ನಿಯಮಾನುಸಾರ ಪಡಿತರ ವಿತರಣೆಗೆ ಕ್ರಮ

ಕೊಪ್ಪಳ ಜುಲೈ 09, (ಕರ್ನಾಟಕ ವಾರ್ತೆ): ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆ ಅಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿನ ನ್ಯಾಯಬೆಲೆ ಅಂಗಡಿಗಳ ಮೂಲಕ ಕಾರ್ಡುದಾರರಿಗೆ ಜುಲೈ-2026ರ ಮಾಹೆಗೆ ನಿಯಮಾನುಸಾರ ಪಡಿತರ ವಿತರಣೆ ಮಾಡಲಾಗುವುದು.
ಎಎವೈ ಪಡಿತರ ಚೀಟಿಯಲ್ಲಿ 1 ರಿಂದ 3 ಸದಸ್ಯರಿರುವ ಪಡಿತರಚೀಟಿಗೆ 14 ಕೆ.ಜಿ ಅಕ್ಕಿ, 21 ಕೆ.ಜಿ ಜೋಳ ಒಟ್ಟು 35 ಕೆ.ಜಿ ಆಹಾರಧಾನ್ಯ, 4 ಸದಸ್ಯರಿರುವ ಪಡಿತರ ಚೀಟಿಗೆ 19 ಕೆ.ಜಿ ಅಕ್ಕಿ, 21 ಕೆ.ಜಿ ಜೋಳ ಒಟ್ಟು 40 ಕೆ.ಜಿ ಆಹಾರಧಾನ್ಯ, 5 ಸದಸ್ಯರಿರುವ ಪಡಿತರ ಚೀಟಿಗೆ 29 ಕೆ.ಜಿ ಅಕ್ಕಿ, 21 ಕೆ.ಜಿ ಜೋಳ ಒಟ್ಟು 50 ಕೆ.ಜಿ ಆಹಾರಧಾನ್ಯ, 6 ಸದಸ್ಯರಿರುವ ಪಡಿತರ ಚೀಟಿಗೆ 39 ಕೆ.ಜಿ ಅಕ್ಕಿ 21 ಕೆ.ಜಿ ಜೋಳ ಒಟ್ಟು 60 ಕೆ.ಜಿ ಆಹಾರಧಾನ್ಯ, 7 ಸದಸ್ಯರಿರುವ ಪಡಿತರ ಚೀಟಿಗೆ 49 ಕೆ.ಜಿ ಅಕ್ಕಿ, 21 ಕೆ.ಜಿ ಜೋಳ ಒಟ್ಟು 70 ಕೆ.ಜಿ ಆಹಾರಧಾನ್ಯ ಹಾಗೂ 8 ಸದಸ್ಯರಿರುವ ಪಡಿತರ ಚೀಟಿಗೆ 59 ಕೆ.ಜಿ ಅಕ್ಕಿ, 21 ಕೆ.ಜಿ ಜೋಳ ಒಟ್ಟು 80 ಕೆ.ಜಿ ಆಹಾರಧಾನ್ಯ ವಿತರಣೆ ಮಾಡಲಾಗುವುದು.
9 ಮತ್ತು ಹೆಚ್ಚಿನ ಸದಸ್ಯರಿರುವ ಎಎವೈ ಪಡಿತರ ಚೀಟಿದಾರರಿಗೆ ಇದೇ ಅನುಪಾತದಲ್ಲಿ ಸದಸ್ಯರ ಅನುಗುಣವಾಗಿ ಪಡಿತರ ವಿತರಣೆ ಮಾಡಲಾಗುವುದು. ಕೇಂದ್ರ ಸರ್ಕಾರದ ಆದ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯನಿಗೆ 7 ಕೆ.ಜಿ ಅಕ್ಕಿ 3 ಕೆ.ಜಿ ಜೋಳ ರಂತೆ ಆಹಾರಧಾನ್ಯ ನೀಡಲಾಗುವುದು. ರಾಜ್ಯ ಸರ್ಕಾರದ ಆದ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯನಿಗೆ 10 ಕೆ.ಜಿ ಅಕ್ಕಿಯಂತೆ ಆಹಾರಧಾನ್ಯ ವಿತರಿಸಲಾಗುವುದು ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


