Naganur Village Deity Jatra Mahotsav kicks off with great enthusiasm.
ಮೂಡಲಗಿ (ಬೆಳಗಾವಿ): ನಾಗನೂರ ಗ್ರಾಮದೇವತೆ ಜಾತ್ರಾ ಮಹೋತ್ಸವ ಸಂಭ್ರಮದಿಂದ ಚಾಲನೆ

ಮೂಡಲಗಿ (ಬೆಳಗಾವಿ): 10ವರ್ಷಗಳ ನಂತರ ಜರಗುತ್ತಿರುವ ಶ್ರೀ ದ್ಯಾಮವ್ವಾದೇವಿ ಜಾತ್ರಾ ಮಹೋತ್ಸವ ಹಿನ್ನಲೆ ಪ್ರಥಮ ದಿನದಂದು ಶ್ರೀ ದ್ಯಾಮವ್ವಾದೇವಿಯ ಮೂರ್ತಿಯ ಮೆರವಣಿಗೆ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಮಂಗಳವಾರದಂದು ಸಂಭ್ರಮದಿಂದ ಚಾಲನೆ ನೀಡಿದರು.
ತಾಲೂಕಿನ ನಾಗನೂರ ಪಟ್ಟಣದ ಮಹಾಲಿಂಗೇಶ್ವರ ದೇವಸ್ಥಾನದಿಂದ ದ್ಯಾಮವ್ವಾದೇವಿಯ ಮೂರ್ತಿ ಹಾಗೂ ಮಹಿಳೆಯರ ಕುಂಭಮೇಳದೊಂದಿಗೆ ಪಟ್ಟಣದ ಪ್ರಮುಖ ರಸ್ತೆ ಮಾರ್ಗವಾಗಿ ಸಂಚರಿಸಿ ದ್ಯಾಮವ್ವಾದೇವಿ ಮಂದಿರಕ್ಕೆ ಅಂತ್ಯಗೊಂಡಿತು. ನಂತರ ಹೋಮ ಹವನದೊಂದಿಗೆ ದ್ಯಾಮವ್ವಾದೇವಿಯ ಮೂರ್ತಿ ಪ್ರತಿಸ್ಥಾಪನೆ ಜರುಗಿತು.
ದ್ಯಾಮವ್ವಾದೇವಿ ಮಂದಿರದಲ್ಲಿ ಮೆರವಣಿಗೆಗೂ ಮೊದಲು ದ್ಯಾಮವ್ವಾದೇವಿ ಮೂರ್ತಿಗೆ ಹೂವುಗಳಿಂದ ಪುಷ್ಪಾರ್ಚನೆ ಮಾಡಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಗ್ರಾಮದ ಹಿರಿಯರು ಚಾಲನೆ ನೀಡಿದರು. ಮಹಿಳೆಯರ ಕುಂಭಮೇಳ ಮೆರವಣಿಗೆಯ ಮಾರ್ಗದುದ್ದಕ್ಕೂ ಯುವಕರು ವಾದ್ಯ ಮೇಳಗಳ ತಾಳಕ್ಕೆ ಹೆಜ್ಜೆ ಹಾಕುವ ಮೂಲಕ ದ್ಯಾಮವ್ವಾದೇವಿಯ ಮೂರ್ತಿ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದರು.
ನಾಗನೂರ ಸುತ್ತಮುತ್ತಲಿನ ಗ್ರಾಮದ ಮಹಿಳೆಯರು ಗ್ರಾಮದ ಪ್ರಮುಖ ದೇವಸ್ಥಾನಗಳಿಗೆ ನೈವ್ಯದೆ ನೀಡುವ ಮೂಲಕ ತಾಯಿಯ ಕೃಪೆಗೆ ಪಾತ್ರರಾದರು.
ಸ್ಲಗ : ನಾಗನೂರ ಗ್ರಾಮದೇವತೆಯ 12ವರ್ಷದ ಬಳಿಕ ಜಾತ್ರಾ ಮಹೋತ್ಸವ ಸಂಭ್ರಮದಿಂದ ಚಾಲನೆ


