MLA M.R. Manjunath visited the Jeerigegadde Tribal Residential School and interacted with the children.
ಜೀರಿಗೆಗದ್ದೆ ಆದಿವಾಸಿ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆಯಲ್ಲಿ ಸಂವಾದ ನಡೆಸಿದ ಶಾಸಕ ಎಮ್ ಆರ್ ಮಂಜುನಾಥ್ ,

ವರದಿ:ಬಂಗಾರಪ್ಪ .ಸಿ.
ಹನೂರು : ತಾಲೂಕಿನ ಜೀರಿಗೆಗದ್ದೆ ಗ್ರಾಮದ ಸರ್ಕಾರಿ ಶ್ರೀ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗೆ ಶಾಸಕ ಎಂ.ಆರ್. ಮಂಜುನಾಥ್ ಅವರು ಭೇಟಿ ನೀಡಿ, ಮಕ್ಕಳೊಂದಿಗೆ ಪ್ರೀತಿಯಿಂದ ಸಂವಾದ ಮಾಡಿ ಕೇಲಹೊತ್ತು ಕಾಲ ಕಳೆದರು.
ನಂತರ ಮಾತನಾಡಿದ ಶಾಸಕರು
ಶಾಲೆಯ ಶೈಕ್ಷಣಿಕ ಪ್ರಗತಿ ಹಾಗೂ ಅಲ್ಲಿನ ಮೂಲಸೌಕರ್ಯಗಳನ್ನು ಪರಿಶೀಲಿಸುವ ಉದ್ದೇಶದಿಂದ ಭೇಟಿ ನೀಡಿದ್ದೇವೆ ಈ ಸಂತೋಷದ ಸಮಯದಲ್ಲಿ ಶಾಲಾ ಮಕ್ಕಳೊಂದಿಗೆ ನೇರ ಸಂವಾದ ನಡೆಸಿರುವುದು ನಮಗೆ ಸಂತೋಷ ತಂದಿದೆ ಎಂದರು.
ಅಲ್ಲದೆ
ವಿದ್ಯಾರ್ಥಿಗಳೊಂದಿಗೆ ಅವರ ದೈನಂದಿನ ಚಟುವಟಿಕೆಗಳು, ಶಿಕ್ಷಣದ ಗುಣಮಟ್ಟ ಹಾಗೂ ಶಾಲೆಯಲ್ಲಿ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.
ಕೇವಲ ಅಧಿಕೃತ ಭೇಟಿಗೆ ಸೀಮಿತವಾಗದೆ, ಶಾಸಕ ಎಂ.ಆರ್. ಮಂಜುನಾಥ್ ಅವರು ಮಕ್ಕಳೊಂದಿಗೆ ಆಪ್ತರಾಗಿ ಬೆರೆತರು. ಆದಿವಾಸಿ ಬುಡಕಟ್ಟು ಸಮುದಾಯದ ಮಕ್ಕಳ ವಿಶಿಷ್ಟ ಸಂಸ್ಕೃತಿ, ಅವರ ಆಚಾರ-ವಿಚಾರ, ಜೀವನ ಪದ್ಧತಿ ಹಾಗೂ ಅವರಲ್ಲಿರುವ ನೈಜ ಪ್ರತಿಭೆಯನ್ನು ಅರಿತು ಬೆರೆತರು, ಮಕ್ಕಳ ನಿರರ್ಗಳ ಮಾತು ಮತ್ತು ಉತ್ಸಾಹಕ್ಕೆ ಶಾಸಕರು ಮನಸೋತು ಮೆಚ್ಚುಗೆ ವ್ಯಕ್ತಪಡಿಸಿದರು.
ಆದಿವಾಸಿ ಮಕ್ಕಳಲ್ಲಿ ಅದ್ಭುತವಾದ ಪ್ರತಿಭೆಯಿದೆ. ಅವರ ಸಂಸ್ಕೃತಿ ಮತ್ತು ಆಚಾರ-ವಿಚಾರಗಳು ನಿಜಕ್ಕೂ ಶ್ಲಾಘನೀಯವಾದುದ್ದು , ಈ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಪ್ರೋತ್ಸಾಹ ನೀಡಿದರೆ ಸಮಾಜದ ಮುಖ್ಯವಾಹಿನಿಗೆ ಬಂದು ದೊಡ್ಡ ಸಾಧನೆ ಮಾಡಬಲ್ಲರು. ಇವರ ಪ್ರಗತಿಗೆ ನಮ್ಮ ಸರ್ಕಾರ ಮತ್ತು ವೈಯಕ್ತಿಕವಾಗಿ ನಾನು ಸದಾ ಸೇವೆ ಮಾಡಲು ಬದ್ಧನಾಗಿರುತ್ತೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿಕ್ಷಕರಾದ ವೆಂಕಟಾಚಲರವರು.ಮಂಜೇಶ್ ಗೌಡರು. ಮಾದೇವ್ . ಪುಟ್ಟವೀರನಾಯಕ .ನಿಂಗಶೇಟ್ಟಿ , ಸೇರಿದಂತೆ ಇನ್ನಿತರರು ಹಾಜರಿದ್ದರು.


