ತಾಲಿಬಾನಿ, ಕನ್ನೇರಿ ಶ್ರೀ ಮತ್ತು ಲಿಂಗಾಯತ ಧರ್ಮ” ಪುಸ್ತಕ, ಬಿಡುಗಡೆ

H.Mallikarjun
H.Mallikarjun - Kalyanasiri
4 Min Read
ಜಾಹೀರಾತು
Taliban, Kanneri Sri and Lingayat Dharma" book released




ತಾಲಿಬಾನಿ, ಕನ್ನೇರಿ ಶ್ರೀ ಮತ್ತು ಲಿಂಗಾಯತ ಧರ್ಮ” ಪುಸ್ತಕ, ಬಿಡುಗಡೆ

ಜಾಹೀರಾತು

ಬೀದರ್:”ತಾಲಿಬಾನಿ, ಕನ್ನೇರಿ ಶ್ರೀ ಮತ್ತು ಲಿಂಗಾಯತ ಧರ್ಮ” ಪುಸ್ತಕ, ಲೇಖಕರು ಪೂಜ್ಯ ಶ್ರೀ ಜಗದ್ಗುರು, ಡಾ ಚೆನ್ನಬಸವಾನಂದ ಸ್ವಾಮೀಜಿ ಇಂದು ದಿನಾಂಕ 28/06/2026 ರಂದು ಬಸವ ಮಂಟಪ ಬೀದರನಲ್ಲಿ ಪೂಜ್ಯ ಡಾ ಸಿದ್ಧರಾಮ ಶರಣರು ಬೆಲ್ದಾಳ ಇವರ ಅಮೃತ ಹಸ್ತದಿಂದ ಬಿಡುಗಡೆ ಮಾಡಿದರು:

ಸುಮಾರು ಏಳೆಂಟು ತಿಂಗಳಿಂದ ಕನ್ನೇರಿ ಸ್ವಾಮೀಜಿ ಬಸವಾದಿ ಶರಣರ ತತ್ವ ಸಿದ್ದಾಂತ ಮತ್ತು ಲಿಂಗಾಯತ ಧರ್ಮದ ಮಠಾಧಿಪತಿಗಳ ಮೇಲೆ ನಿರಂತರ ಅಪಶಬ್ದಗಳ ನುಡಿಗಳಿಂದ ನಿಂದಿಸುವುದು, ಬಸವಣ್ಣನವರ ವಚನಗಳನ್ನು ಅರ್ಧಮರ್ದ ಹೇಳಿ ಅಪಾರ್ಥ ಮಾಡಿ, ಬಸವಣ್ಣ ಹೊಸ ವಿಚಾರಗಳು ಏನು ಹೇಳಿಲ್ಲ, ವೇದಾಗಮಗಳನ್ನು ಮನುಶಾಸ್ತ್ರ ಭಾಗವಾದ ಗೀತಾ ಉಪನಿಷದಲ್ಲಿ ಇದ್ದುದು ಹೇಳಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಬಸವ ತತ್ವ ಸಿದ್ದಾಂತ ಪ್ರಚಾರ ಮಾಡುತ್ತಿರುವ ಸ್ವಾಮಿಗಳ, ಮಠಾಧಿಪತಿಗಳ , ಪೂಜ್ಯರ, ಶರಣರ ಮತ್ತು ಬಸವಾಭಿಮಾನಿಗಳ ಬಗ್ಗೆ ಸೂ ಮ, ಬೋ ಮ, ಬೂ ಚಪ್ಪಲಿ ಹೊಡೆಯಿರಿ ಎಂದು ಕಾವಿಧಾರಿ ಆಗಿ ಬೈಯುತ್ತಿರುವುದು ಜಗಜಾಹೀರ ಆಗಿದೆ. ಬಸವಾದಿ ಶರಣರ ಅವಹೇಳನ ಮಾಡಲೆಂದೇ ” ಬಸವಾದಿ ಶಿವಶರಣರ ಹಿಂದೂ ಸಮಾವೇಶ” ಎಂದು ಹೆಸರಿಟ್ಟು ಸಮಾವೇಶ ಮಾಡಿ, ಸಮಾಜದಲ್ಲಿ ಪ್ರಕ್ಷುಬ್ಧ ವಾತವರಣ ನಿರ್ಮಾಣ ಮಾಡುತ್ತಿದ್ದಾರೆ.

ಇದು ಎಲ್ಲವನ್ನೂ ಮನಗಂಡು ಪೂಜ್ಯ ಡಾ ಚೆನ್ನಬಸವಾನಂದ ಸ್ವಾಮೀಜಿ ” ತಾಲಿಬಾನಿ, ಕನ್ನೇರಿ ಶ್ರೀ ಮತ್ತು ಲಿಂಗಾಯತ ಧರ್ಮ” ಎನ್ನುವ ಪುಸ್ತಕದ ಮುಖಾಂತರ ಕನ್ನೇರಿ ಸ್ವಾಮಿ ಯವರ ಎಲ್ಲಾ ಆಪಾದನೆಗಳಿಗೆ ವಚನಗಳ ಆಧಾರ ಮುಖಾಂತರ, ಭಾರತೀಯ ಸಂಸ್ಕೃತಿ ಮತ್ತು ದೇಶದ ಆಧ್ಯಾತ್ಮಿಕ ಇತಿಹಾಸ ಮುಖಾಂತರ ಉತ್ತರ ನೀಡಿದ್ದಾರೆ ಎಂದು ಪೂಜ್ಯ ಡಾ ಸಿದ್ಧರಾಮ ಶರಣರು ಬೆಲ್ದಾಳ ಪುಸ್ತಕ ಬಿಡುಗಡೆ ಮಾಡಿ ಮಾತಾಡಿದ್ದರು. ವಚನಗಳ ಆಧಾರದ ಮೇಲೆ ಬಸವಣ್ಣನವರೇ ಇಷ್ಟಲಿಂಗ ಸಂಶೋಧನೆ ಮಾಡಿದ್ದರು, ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಎಲ್ಲದಕ್ಕೂ ಬಸವಣ್ಣವರೇ ಮೂಲ ಎಂದು ಹೇಳಿದ್ದರು. ವಿಭೂತಿ ರುದ್ರಾಕ್ಷಿ ಇವೆಲ್ಲ ದ್ರಾವಿಡರ ಮೂಲ ಆದೀಯೋಗಿ ಶಿವನ ಶೈವ ಪಂಥದಿಂದ ಬಂದಿದ್ದು, ಹಿಂದೂ ಈಚೆಗೆ ಬಂದಿದೆ, ಇದಕ್ಕೂ ಬಸವಣ್ಣನವರಿಗೂ ಯಾವುದೇ ಸಂಬಂಧವಿಲ್ಲ. ಹಿಂದೂ ಎನ್ನುವ ಶಬ್ದ ಬಸವಾದಿ ಶರಣರ ಯಾವ ವಚನಗಳಲ್ಲಿ ಎಲ್ಲೂ ಸಿಗುವದಿಲ್ಲ. ವೇದಾಗಮಗಳು, ಪುರಾಣ, ಭಾಗವಾದ ಗೀತಾ, ಮನುಶಾಸ್ತ್ರ ಎಲ್ಲಿಯೂ ಹಿಂದೂ ಶಬ್ದವೇ ಇಲ್ಲ, ಅದು ಹೇಗೆ ಬಸವಾದಿ ಶರಣರು ಹಿಂದೂ ಆಗಲು ಸಾಧ್ಯ? ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಮುಖ್ಯ ಅತಿಥಿ ಶ್ರೀ ಶ್ರೀಕಾಂತ ಸ್ವಾಮಿ ಮಾತಾಡುತ್ತಾ ಬಸವ ತತ್ವ ಸಿದ್ದಾಂತದಲ್ಲಿ ಬೈಗೊಳಿಗೆ ನಿಂದನಗಳಿಗೆ ಆಸ್ಪದ ಇಲ್ಲ, ಮೃದು ವಚನಗಳು ಜಪoಗಗಳು ತಪಂಗಗಳು ಎಂದು ಬಸವಣ್ಣ ಹೇಳುತ್ತಾರೆ, ಆದರೆ ಕನ್ನೇರಿ ಸ್ವಾಮೀಜಿ ಬಾಯಿಯಿಂದ ಕೇವಲ ಬೈಗೋಳು ಬರುತ್ತವೆ. ಪೂಜ್ಯ ಡಾ ಚೆನ್ನಬಸವಾನಂದ ಸ್ವಾಮೀಜಿ ತಮ್ಮ ಪುಸ್ತಕದಲ್ಲಿ ಕನ್ನೇರಿ ಸ್ವಾಮೀಜಿ ತಾಲಿಬಾನಿ ಎಂದು ಬಸವಾಭಿಮಾನಿಗಳಿಗೆ ನಿಂದಿಸಿದ್ದಾರೆ, ತಾಲಿಬಾನಿ ಅಫ್ಘಾನಿಸ್ತಾನ ಹೋರಾಟ ಉಗ್ರ ಸಂಘಟನೆ, ಇದನ್ನು ಸೌಮ್ಯವಾಗಿರುವ ಬಸವ ತತ್ವಕ್ಕೆ ಹೋಲಿಸುವುದು ತಪ್ಪು. ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪನೆ ಮಾಡಿದ್ದು ಹನ್ನೆರಡನೆ ಶತಮಾನದಲ್ಲಿ ಹಿಂದೂ ಶಬ್ದ ಬೆಳಕಿಗೆ ಬಂದಿದ್ದು ಹದಿನಾಲ್ಕನೇ ಶತಮಾನದಲ್ಲಿ, ಅದರ ಭಾಗ ಹೇಗಾಗುತ್ತದೆ. ಬಸವಣ್ಣ ಸ್ವರ್ಗ ನರಕ, ಕರ್ಮಸಿದ್ಧಾಂತ ಪುನರ್ಜನ್ಮ ವೇದಗಮಗಳು ಗುಡಿ ಗೋಪುರ ಮಂದಿರ ಒಪ್ಪಿದ್ದಾರೆ ಎಂದು ಕನ್ನೇರಿ ಸ್ವಾಮೀಜಿ ಪ್ರತಿಪಾದಿಸಿ ಸಾಮಾಜದ ದಿಕ್ಕು ತಪ್ಪಿಸಿ ಬಸವಾಭಿಮಾನಿಗಳಿಗೆ ನೋವುಂಟು ಮಾಡುತ್ತಿದ್ದಾರೆ, ಇದರ ವಚನಗಳ ಆಧಾರ ಮುಖಾಂತರ ಈ ಪುಸ್ತಕದಲ್ಲೂ ಸ್ವಾಮಿಜಿ ಉತ್ತರ ನೀಡಿದ್ದಾರೆ. ಕನ್ನೇರಿ ಸ್ವಾಮೀಜಿ ಪ್ರತಿಯೊಂದು ಆಪಾದನೆಗೆ ಸ್ವಾಮೀಜಿಗಳು ವಚನಗಳ ಆಧಾರ ಮುಖಾಂತರ ತಿರುಗೇಟು ನೀಡಿದ್ದಾರೆ ಎಂದು ಶ್ರೀಕಾಂತ ಸ್ವಾಮಿ ಹೇಳಿದ್ದಾರೆ.

ಆಶಿವಚನ ನೀಡಿದ್ದ ಪೂಜ್ಯ ಶ್ರೀ ಸತ್ಯಾದೇವಿ ಮಾತಾಜಿ ” ತಾಲಿಬಾನಿ, ಕನ್ನೇರಿ ಶ್ರೀ ಮತ್ತು ಲಿಂಗಾಯತ ಧರ್ಮ” ಕಿರು ಪುಸ್ತಕ ಎಲ್ಲರಿಗೂ ಸರಳ ಭಾಷೆಯಲ್ಲಿ ಸಂಕ್ಷಿಪ್ತವಾಗಿ ತಿಳಿಸಿ ಹೇಳುವ ಪುಸ್ತಕ ಕನ್ನೇರಿ ಸ್ವಾಮೀಜಿಯವರಿಂದ ಕಲುಷಿತಗೊಂಡ ಸಮಾಜ ತಿಳಿಗೊಳಲ್ಲೂ ಸಹಾಯ ಆಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಮಾರಿ ದಿವ್ಯ ಗೌಡ ನಾಗೂರ ಎಂ ಔರಾದ ತಾಲೂಕ ಹತ್ತನೇ ತರಗತಿಯಲ್ಲಿ 99.44% ಅಂಕ ಪಡೆದು ರಾಜ್ಯಕೆ ಐದನೇ ರಾಂಕ್ ಗಳಿಸಿದಕ್ಕೆ ಸನ್ಮಾನ ಮಾಡಿದರು.

ಪುಸ್ತಕದ ಲೇಖಕರು ಪೂಜ್ಯ ಜಗದ್ಗುರು ಡಾ ಚೆನ್ನಬಸವಾನಂದ ಸ್ವಾಮೀಜಿ ಪುಸ್ತಕ ಬಿಡುಗಡೆ ಮಾಡಿದ ಹಾಗೂ ಮುನ್ನುಡಿ ಬರೆದ ರಾಜ್ಯದ ಖ್ಯಾತ ಸಾಹಿತಿ ಡಾ ಸಿದ್ಧರಾಮ ಶರಣರು ಬೆಲ್ದಾಳ ಅವರಿಗೂ ಹಾಗೂ ಹಿನ್ನುಡಿ ಬರೆದ ಶ್ರೀ ಶ್ರೀಕಾಂತ ಸ್ವಾಮಿ ಯವರಿಗೂ ಧನ್ಯವಾದ ಸಲ್ಲಿಸಿದ್ದರು . ಕಾರ್ಯಕ್ರಮದಲ್ಲಿ ಅಶೋಕ ಕುಮಾರ್ ನಗುರೆ, ಶಿವರಾಜ್ ಪಾಟೀಲ್ ಅತಿವಾಳ, ಶಿವಶರಣಪ್ಪ ಪಾಟೀಲ್ ಹಾರೂರಗೇರಿ, ಕಾಶೀನಾಥ ಪಾಟೀಲ್, ಗುರುನಾಥ ನಿಡಗುಂದೆ, ದಿವ್ಯ ಅವರ ತoದೆ ಮಲ್ಲಪ್ಪ ಗೌಡ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಶ್ರೀ ಶ್ರೀಕಾಂತ ಸ್ವಾಮಿ ಬೀದರ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.

Total Views: 2
Share This Article