ಗುಡಿಗೊಂಡನಹಳ್ಳಿ ಸರ್ಕಾರಿ ಶಾಲೆಯ ಬಳಿ ಓವರ್ ಟ್ಯಾಂಕ್ ನಿರ್ಮಾಣ.ಶಾಲಾ ಮಕ್ಕಳ ಜೀವದ ಜೊತೆ ಚೆಲ್ಲಾಟ.

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Construction of an over tank near Gudigondanahalli Government School. Playing with the lives of school children.

ಗುಡಿಗೊಂಡನಹಳ್ಳಿ ಸರ್ಕಾರಿ ಶಾಲೆಯ ಬಳಿ ಓವರ್ ಟ್ಯಾಂಕ್ ನಿರ್ಮಾಣ.ಶಾಲಾ ಮಕ್ಕಳ ಜೀವದ ಜೊತೆ ಚೆಲ್ಲಾಟ.

ಜಾಹೀರಾತು


ತಿಪಟೂರು:ತಾಲ್ಲೂಕಿನ ಹೊನ್ನವಳ್ಳಿ ಹೊಬ್ಬಳಿಯ ಗುಡಿಗೊಂಡನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಅವರಣದ ಪಕ್ಕದಲ್ಲೆ ಜೆಜೆಎಂ ಓವರ್ ಟ್ಯಾಂಕ್ ನಿರ್ಮಾಣ ಗ್ರಾಮದ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ.

ಗುಡಿಗೊಂಡನಹಳ್ಳಿ ಗ್ರಾಮದ ಕಾಂತರಾಜ್ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಅವರು ನನ್ನ ತಾತ ಬಡವರ ವಿದ್ಯಾಭ್ಯಾಸಕ್ಕಾಗಿ ಹಾಗೂ ಮಕ್ಕಳ ಆಟದ ಮೈದಾನಕ್ಕಾಗಿ ದಾನವಾಗಿ ನೀಡಿದ್ದಾರೆ ಆದರೆ ಶಾಲೆಗೆ ನೀಡಿದ ಜಾಗದಲ್ಲಿ ಜೆಜೆಎಂ ಓವರ್ ಟ್ಯಾಂಕ್ ನಿರ್ಮಾಣ ಮಾಡುತ್ತಿದ್ದು ಇವರಗಳು ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಶಾಲೆಯ ಆವರಣ ತುಂಬಾ ಕಿರಿದಾಗಿದ್ದು ಇದರಲ್ಲಿ ಇನ್ನೂ ಗ್ರಂಥಾಲಯ ಲ್ಯಾಬ್ ಶೌಚಾಲಯ ಕಟ್ಟಡಗಳು ಮುಂದೆ ಕಟ್ಟಬೇಕಾಗುತ್ತದೆ ಆದರೆ ಸ್ಥಳೀಯ ಅಧಿಕಾರಿಗಳು
ಈ ಜಾಗದಲ್ಲಿ ಓವರ್ ಟ್ಯಾಂಕ್ ಕಟ್ಟಿ ಶಾಲಾ ಆವರಣ ಇಲ್ಲದಂತೆ ಮಾಡುತ್ತಿದ್ದಾರೆ ಮತ್ತು ಇಲ್ಲಿ ಟ್ಯಾಂಕ್ ನಿರ್ಮಾಣದ ಹಂತದಲ್ಲಿ ಮತ್ತು ನಂತರದ ದಿನಗಳಲ್ಲಿ ಶಾಲಾ ಮಕ್ಕಳಿಗೆ ಅಪಾಯ ಉಂಟಾಗುವ ಭೀತಿ ಇರುತ್ತದೆ ಅಥವಾ ಕಳಪೆ ನಿರ್ಮಾಣದ ಸಂದರ್ಭದಲ್ಲಿ ಟ್ಯಾಂಕ್ ಕುಸಿಯುವ ಆತಂಕ ಇರುತ್ತದೆ.ನಿರ್ಮಾಣದ ಕಾಮಗಾರಿ ನಡೆಯುವಾಗ ಬಾರಿ ಶಬ್ದ ಮತ್ತು ಧೂಳು ಮಕ್ಕಳ ಓದಿಗೆ ತೊಂದರೆ ಉಂಟಾಗಬಹುದು ಆದ್ದರಿಂದ ತಾಲ್ಲೂಕು ಆಡಳಿತ ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸಿ
ಮಕ್ಕಳ ಭವಿಷ್ಯದ ದೃಷ್ಟಿಯಿಂದ ಓವರ್ ಟ್ಯಾಂಕ್ ನಿರ್ಮಾಣವನ್ನು ತಕ್ಷಣ ನಿಲ್ಲಿಸಿ ಬೇರೆ ಕಡೆ ಸರ್ಕಾರಿ ಜಾಗದಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕೆಂದು ತಿಳಿಸಿದರು. ವರದಿ ಮಂಜು ಗುರುಗದಹಳ್ಳಿ

Total Views: 0
Share This Article