
Civil Servants Recruitment Notice
ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಂದ ಮಹಾನಗರ ಪಾಲಿಕೆಗಳ ಪ್ರಗತಿ ಪರಿಶೀಲನೆ


ಪೌರ ಕಾರ್ಮಿಕರ ತ್ಚರಿತ ನೇಮಕಾತಿ ಸೂಚನೆ
ಬೆಂಗಳೂರು: ನಗರಾಭಿವೃದ್ಧಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಶುಕ್ರವಾರ ವಿಕಾಸಸೌಧದಲ್ಲಿ ರಾಜ್ಯದ 13 ನಗರ ಪಾಲಿಕೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಎಲ್ಲಾ ನಗರಗಳಲ್ಲಿ ಪೌರ ಕಾರ್ಮಿಕರ ಕೊರತೆ ಇದೆ. 2011ರ ಜನಗಣತಿ ಆಧಾರದ ಮೇಲೆ ಈಗ ಪೌರ ಕಾರ್ಮಿಕರ ನಿಯೋಜಿಸಲಾಗಿದೆ. ವಾಸ್ತವವಾಗಿ ಈಗಿರುವ ಅಂದಾಜು ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಸಚಿವರು ತಿಳಿಸಿದರು.
15ನೇ ಹಣಕಾಸು ಅನುದಾನದಲ್ಲಿ ಈ ವರೆಗೂ ಖರ್ಷಾಗದೆ ಉಳಿದಿರುವ ಅನುದಾನವನ್ನು ಖರ್ಚು ಮಾಡಿ, ನಗರದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು.
13 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 97 ಇಂದಿರಾ ಕ್ಯಾಂಟೀನ್ ಮಂಜೂರು ಆಗಿವೆ. ಅದರಲ್ಲಿ 93 ಚಾಲ್ತಿಯಲ್ಲಿ ಇವೆ, ಮಂಗಳೂರಿನಲ್ಲಿ 2, ಬೀದರ್‌ನಲ್ಲಿ 2 ಬಾಕಿ ಇವೆ. ಬೇಗ ಆರಂಭಿಸಬೇಕು. ಆಹಾರದ ಗುಣ ಮಟ್ಟದ ಬಗ್ಗೆ ಆಗಾಗ್ಗೆ ಪರಿಶೀಲಿಸಬೇಕು ಎಂದರು.
ಅಮೃತ್ ಯೋಜನೆ-2ರಲ್ಲಿ 42 ಕೆರೆಗಳ ಪುನಶ್ಚೇನಕ್ಕೆ 231 ಕೋಟಿ ಅನುದಾನ ಇದೆ. ಬೇಗ ಟೆಂಡರ್ ಕರೆದು ಅನುಷ್ಠಾನ ಮಾಡಬೇಕು.
ಬಿ ಖಾತಾ ದಿಂದ ಎ ಖಾತಾ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು. ಆಸ್ತಿ ತೆರಿಗೆ 463 ಕೋಟಿ ಬಾಕಿ ಇದೆ. ವಸೂಲಿ ಮಾಡಬೇಕು ಎಂದು ತಿಳಿಸಿದರು.
ನಗರ ಚಾಲೆಂಜ್ ಫಂಡ್ ನಿಧಿಯಲ್ಲಿ 4400 ಕೋಟಿ ರೂ. ಉಪಯೋಗಿಸಿಕೊಳ್ಳಲು ಅವಕಾಶ ಇದೆ. ರೂ. 3900 ಕೋಟಿಯಷ್ಟು ಪ್ರಸ್ತಾವನೆ ಬಂದಿದೆ. ಉಳಿಕೆ ಅನುದಾನಕ್ಕೆ ಯೋಜನಾ ವರದಿ ಸಲ್ಲಿಸಲು ತಿಳಿಸಿದರು.
ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ ಧಾರವಾಡದಲ್ಲಿ ವಿಶ್ವಬ್ಯಾಂಕ್ ಪ್ರಾಯೋಜಿತ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದ್ದು, ಎಲ್ ಅಂಡ್ ಟಿ ಕಂಪನಿ ಯೋಜನೆ ಅನುಷ್ಠಾನ ಮಾಡುತ್ತಿದೆ. ಮಹಾನಗರ ಪಾಲಿಕೆಗಳು ನಿಗಾವಹಿಸಬೇಕು, ಕಾಮಗಾರಿ ಬೇಗ ಮುಗಿಸಲು ಸಹಕಾರ ನೀಡಬೇಕು ಎಂದರು.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಬಿ ಬಿ ಕಾವೇರಿ, ಕೆಯುಡಬ್ಲ್ಯೂಎಸ್‌ಎಸ್‌ಬಿ ವ್ಯವಸ್ಥಾಪಕ ನಿರ್ದೇಶಕ ಡಾ. ಮಹೇಶ್, ಹಿರಿಯ ಐ.ಎ.ಎಸ್. ಅಧಿಕಾರಿ ಸೆಲ್ವಮಣಿ, ಪೌರಾಡಳಿತ ನಿರ್ದೇಶಕ ಪಿ.ಎನ್.ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.
