ವಿದ್ಯಾರ್ಥಿಒಕ್ಕೂಟಕ್ಕೆ  ಚುನಾವಣೆಯ ಮೂಲಕ ಆಯ್ಕೆ

H.Mallikarjun
H.Mallikarjun - Kalyanasiri
1 Min Read

Election to the student union

ವಿದ್ಯಾರ್ಥಿ ಒಕ್ಕೂಟಕ್ಕೆ ಚುನಾವಣೆಯ ಮೂಲಕ    ಯ್ಕೆ

ಜಾಹೀರಾತು

ಗಂಗಾವತಿ: ನಗರದ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಲ್ಮಠ ಶ್ರೀ ಚನ್ನಬಸವ ಸ್ವಾಮಿ ಮಹಿಳಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ 2026 -27 ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಒಕ್ಕೂಟಕ್ಕೆ ಚುನಾವಣೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಿತು.

ಕಾಲೇಜಿನ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಕಾಂ ಅಂತಿಮ ವರ್ಷದ ರೇಣುಕಾ ಮತ್ತು ಸಹ ಕಾರ್ಯದರ್ಶಿಯಾಗಿ ಬಿ.ಎ ಅಂತಿಮ ವರ್ಷದ ಫರೀನಾ,  .

ಮಹಿಳಾ ಅಧ್ಯಯನ ವೇದಿಕೆ ಕಾರ್ಯದರ್ಶಿಯಾಗಿ ಬಿ.ಎ ಅಂತಿಮ ವರ್ಗದ ನೌಶಿನ್, ವ್ಯಕ್ತಿತ್ವ ವಿಕಸನ ವೇದಿಕೆ ಕಾರ್ಯದರ್ಶಿಯಾಗಿ ಬಿ.ಕಾಂ ಅಂತಿಮ ವರ್ಗದ ರಂಜಿತ, ಲಲಿತ ಕಲಾವೇದಿಕೆ ಕಾರ್ಯದರ್ಶಿಯಾಗಿ ಬಿ.ಎ ಅಂತಿಮ ವರ್ಗದ ಗಾಯತ್ರಿ , ಕ್ರೀಡೆ -ಯೋಗ ವೇದಿಕೆ ಕಾರ್ಯದರ್ಶಿಯಾಗಿ ಅಖಿಲಾ  ಬಹುಮತಗಳ ಮೂಲಕ  ಆಯ್ಕೆಯಾದರು.

ಮತ್ತು ವಿವಿಧ ತರಗತಿ ಪ್ರತಿನಿಧಿಗಳ ಆಯ್ಕೆ ನಡೆಯಿತು. ಬಿ.ಎ ಪ್ರಥಮ ವರ್ಗಕ್ಕೆ ಭೀಮಮ್ಮ, ಪ್ರೇಮ, ಭೂಮಿಕ ,ಅಖಿಲ ದ್ವಿತೀಯ ವರ್ಗಕ್ಕೆ ಸಮ್ರೀನ್, ಅನುರಾಧ, ಪವಿತ್ರ ,ಅನಿಫ್ ಬಾನು, ಬಿ.ಕಾಂ ಪ್ರಥಮ ವರ್ಗಕ್ಕೆ ಪವಿತ್ರ, ಸುಪ್ರಿಯ, ದಿವ್ಯಶ್ರೀ ,ಶಹೀದ್ ಮತ್ತು ಬಿ.ಕಾಂ ದ್ವಿತೀಯ ವರ್ಗಕ್ಕೆ ಅಂಬಿಕಾ, ಶಶಿಕಲಾ, ಮುಸ್ಕಾನ್ ಮತ್ತು ಟಿ. ರಶ್ಮಿ ಚುನಾಯಿತರಾದರು. ಮಹಾವಿದ್ಯಾಲಯದ ಉಪನ್ಯಾಸಕ ಸಿಬ್ಬಂದಿ ವರ್ಗ ಚುನಾವಣಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದರು.

ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ್, ಉಪ ಪ್ರಾಚಾರ್ಯ ಡಾ. ಕೆ. ಎಂ. ಬಸವರಾಜ್, ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷರಾದ ಡಾ.ಜರೀನಾ ಚುನಾವಣಾ ಅಧಿಕಾರಿಗಳಾಗಿ ಮಾರ್ಗದರ್ಶನ ಮಾಡಿದರು.

Total Views: 0
Share This Article