
ಶ್ರೀ ಭಗವಂತ ಖೂಬಾ ಮಾಜಿ ಕೇಂದ್ರ ಸಚಿವರು ಲಿಂಗಾಯತ ಧರ್ಮದ ಪೂಜ್ಯ ಶ್ರೀ ಸತ್ಯಾದೇವಿ ಮಾತಾಜಿಯವರ ಬಗ್ಗೆ ಪತ್ರಿಕೆಯಲ್ಲಿ ಹಗುರವಾಗಿ ಮಾತಾಡಿದ್ದು ಖಂಡನೀಯ

It is condemnable that former Union Minister Shri Bhagwant Khuba spoke lightly in a newspaper about the revered Shri Satyadevi Mataji of the Lingayat religion.

ಬೀದರ್: ಭಗವಂತ ಖೂಬಾ ಅವರು ರಾಜಕೀಯ ವ್ಯಕ್ತಿ ಕಾವಿ ತೊಟ್ಟ ಪೂಜ್ಯರ ಬಗ್ಗೆ ಗೌರವ ಇರಬೇಕು, ಎಸ್ ಐ ಆರ್ ಕೇವಲ ರಾಜಕೀಯ ಪಕ್ಷಗಳಿಗೆ ರಾಜಕೀಯ ವ್ಯಕ್ತಿಗಳಿಗೆ ಅಲ್ಲ ಭಾರತದ ಎಲ್ಲ ಪ್ರಜೆಗಳ ಮತದಾನ ಮೂಲಭೂತ ಹಕ್ಕು ಆಗಿದೆ, ಕೂಲಿಕಾರ್ಮಿಕರು ಹಿಡಿದು ಶ್ರೀಮಂತರವರೆಗೆ ಎಲ್ಲರಿಗೂ ಮತದಾನದ ಹಕ್ಕು ಇದೆ ಅನ್ನೋದು ಕೇಂದ್ರ ಸಚಿವರಿಗೆ ಕನಿಷ್ಠ ಜ್ಞಾನ ಇಲ್ಲ. ಭಾರತ ದೇಶದಲ್ಲಿ ಎಲ್ಲಾ ಪ್ರಗತಿಪರರು ಎಸ್ ಐ ಆರ್ ಬಗ್ಗೆ ಹೋರಾಟ ಮಾಡುತ್ತಿದ್ದಾರೆ, ನಾವು ವರ್ಷದಿಂದ ಎಸ್ ಐ ಆರ್ ಬಗ್ಗೆ ಹೋರಾಟ ಮಾಡುತ್ತಿದ್ದೇವೆ, ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಲ್ಲರಿಗೂ ಗೊತ್ತಿದ್ದ ವಿಷಯ. ಎಸ್ ಐ ಆರ್ ಮುಖಾಂತರ ಮುಗ್ಧ ಜನರ ಮತಗಳನ್ನು ಮತ ಪಟ್ಟಿಯಿಂದ ಕಿತ್ತಿ ಹಾಕುತ್ತಿರುವುದು ಚುನಾವಣೆ ಮೇಲೆ ಪರಿಣಾಮವಾಗಿ ಪ್ರಜಾಪ್ರಭುತ್ವಕ್ಕೇ ಕುಂದು ಬರುತ್ತಿದೆ, ಇಂತಹ ಸಂದಿಗ್ಧ ಸಮಯದಲ್ಲಿ ಮುಗ್ಧ ಜನರ ಪರವಾಗಿ ಸಮಾಜದ ಮುಖಂಡರು ಹೋರಾಟ ಮಾಡಬೇಕಾಗುತ್ತದೆ, ಅದನ್ನೇ ಪೂಜ್ಯ ಶ್ರೀ ಸತ್ಯಾದೇವಿ ಮಾತಾಜಿಯವರು ಮಾಡಿದ್ದಾರೆ. ಅದನ್ನು ಖೂಬಾ ಅವರು ರಾಜಕೀಕರಣ ಮಾಡುವಂತಹ ಕ್ಷುಲಕ ಮಾತಾಡುತ್ತಿರುವುದು ಖಂಡನೀಯ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಿಂಗಾಯತ ಧರ್ಮದ ಸಮಾವೇಶ ನಡೆದಾಗ ಬೀದರ ಮತ್ತು ಕರ್ನಾಟಕ ರಾಜ್ಯದ ಸಾವಿರಾರು ಜನರು ಭಾಗವಹಿಸಿದರು, ಖೂಬಾವರಿಗೆ ಮತ ನೀಡಿ ಗೆಲ್ಲಿಸಿದ ಬೀದರ ಲಿಂಗಾಯತ ಸಮುದಾಯದವರಿಗೆ ಮಠಾಧೀಶರಿಗೆ ಸೌಜನ್ಯಕ್ಕಾಗಿ ಭೇಟಿ ಮಾಡುವದು ಕೂಡ ಮಾಡಿಲ್ಲ. ನಿಮ್ಮ ಮನಸ್ತಿತಿ ಲಿಂಗಾಯತ ವಿರೋಧ ಲಿಂಗಾಯತ ಮಠಾಧೀಶರ ವಿರುದ್ಧ ಇದ್ದದು ಸಮಾಜ ದಶಕದಿಂದ ಕಂಡಿದೆ. ಅದಕ್ಕೆ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತೈದು ವಯಸ್ಸು ಹರೆಯದ ಯುವಕನನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ನಿಮಗೆ ಪಾಠ ಕಲಿಸಿದರು ಇನ್ನೂ ನಿಮ್ಮ ಅಹಂಕಾರ ಸೊಕ್ಕು ಕಡಿಮೆ ಆಗಿಲ್ಲ. ಕಾವಿ ತೊಟ್ಟಿದ್ದ ಮಾತಾಜಿ ಬಗ್ಗೆ ಹಗುರವಾಗಿ ಮಾತಾಡಿದ್ದು ಖಂಡಿಸುತ್ತೇವೆ, ಇದು ನಿಮ್ಮ ಲಿಂಗಾಯತ ವಿರೋಧಿ ಮನಸ್ತಿತಿ ಆಗಿದೆ.
ಇದೆ ರೀತಿ ಲಿಂಗಾಯತ ಸಮುದಾಯದ ಮಠಾಧೀಶರ ಪೂಜ್ಯರ ಮಾತಾಜಿಗಳ ವಿರುದ್ಧ ಮಾತಾಡಿದರೆ ನಿಮ್ಮ ಮನೆ ಎದುರು ಪ್ರತಿಭಟನೆ ಮಾಡಲಾಗುವದು.
ಶ್ರೀ ಶ್ರೀಕಾಂತ ಸ್ವಾಮಿ, ಅಧ್ಯಕ್ಷರು , ಎಸ್ ಐ ಆರ್ ವಿರೋಧಿ ಜನಾಂದೋಲನ ಸಮಿತಿ ಮತ್ತು ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.
ಶ್ರೀ ಓಂಪ್ರಕಾಶ ರೊಟ್ಟಿ, ಅಧ್ಯಕ್ಷರು, ಬೀದರ
ಶ್ರೀ ಜಗದೀಶ್ವರ ಬಿರಾದಾರ, ಸಂಚಾಲಕರು ಎದ್ದೇಳು ಕರ್ನಾಟಕ, ಬೀದರ.
