ಶ್ರೀ ಕರಿಗೂಳಿ ರವರಿಗೆ ಬಳ್ಳಾರಿ ವಿ.ವಿ ಯಿಂದ ಪಿಹೆಚ್.ಡಿ ಪದವಿ ಪ್ರಕಟ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Shri Kariguli awarded PhD degree from Bellary University




ಶ್ರೀ ಕರಿಗೂಳಿ ರವರಿಗೆ ಬಳ್ಳಾರಿ ವಿ.ವಿ ಯಿಂದ ಪಿಹೆಚ್.ಡಿ ಪದವಿ ಪ್ರಕಟ

ಜಾಹೀರಾತು

ಗಂಗಾವತಿ: ತಾಲೂಕಿನ ಶ್ರೀರಾಮನಗರದ ಸಿ.ಎನ್.ಆರ್ ಸರ್ಕಾರಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್. ಕರಿಗೂಳಿ ಅವರಿಗೆ ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿಯನ್ನು ಪ್ರಕಟಿಸಿದೆ.
ಪ್ರೊ. ಎಸ್.‌ ಕರಿಗೂಳಿ ರವರು “ಆ್ಯನ್ ಎಂಪಿರಿಕಲ್ ಸ್ಟಡಿ ಆನ್ ಕ್ರಿಪ್ಪೋಕರೆನ್ಸಿ ವಿಥ್ ಸ್ಪೆಷಲ್ ರೆಫರೆನ್ಸ್ ಟು ಬಿಟ್ ಕಾಯಿನ್ ಆಂಡ್‌ ಈಥೇರಿಯಂ” ಎಂಬ ವಿಷಯದ

ಕುರಿತು, ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೊ. ಡಾ. ಸಿ.ಎಂ. ಜಿಲಾನ್ ಬಾಷಾ ವಿ, ರವರ ಮಾರ್ಗದರ್ಶಕರಾಗಿ ಇದೇ ಮೊದಲ ಬಾರಿಗೆ ಸಂಶೋಧನೆ ಮಾಡಿ ವಿಶ್ವವಿದ್ಯಾಲಯಕ್ಕೆ ಸಾದರಪಡಿಸಿದ ವರದಿಗಳನ್ನು ಅನುಲಕ್ಷಿಸಿ ಪ್ರೊ. ಎಸ್. ಕರಿಗೂಳಿ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಪ್ರದಾನ ಮಾಡಲು ವಿವಿ ಕುಲಪತಿಗಳು, ಸಿಂಡಿಕೇಟ್ ಸಭೆಯ ಪರವಾಗಿ ಒಪ್ಪಿಗೆ ನೀಡಿದ್ದಾರೆ. ಪ್ರೊ. ಎಸ್. ಕರಿಗೂಳಿ ಡಾಕ್ಟರ್ ಆಫ್ ಫಿಲಾಸಫಿ ಪದವಿ ಪಡೆಯಲು ಅರ್ಹರಿರುವವರೆಂದು ಘೋಷಿಸಲಾಗಿದೆ.
ಇವರಿಗೆ ಪಿಹೆಚ್.ಡಿ ಪದವಿಯನ್ನು ವಿಶ್ವವಿದ್ಯಾಲಯದ 2026ರ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುತ್ತದೆ. ಇವರಿಗೆ ತಾಲೂಕಿನ ಕುಟುಂಬ ವರ್ಗ, ಬಂಧು-ಬಳಗದವರು, ಉಪನ್ಯಾಸಕರ ಬಳಗ, ವಿದ್ಯಾರ್ಥಿಗಳ ಸಮೂಹ, ಸ್ನೇಹಿತರ ಬಳಗ ಹಾಗೂ ಎಲ್ಲಾ ಆತ್ಮಿಯರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.

Total Views: 1
Share This Article