
Dr. Ku. Anita Fakirappa Karajanagi. She was awarded a PhD.

ಡಾ.ಕು.ಅನಿತಾ ಫಕೀರಪ್ಪಾ ಕಾರಾಜನಗಿ. ಇವರಿಗೆ ಪಿ ಏಚ್ ಡಿ ಪ್ರದಾನ

ಅಕ್ಕನ ಅರಿವು,ವಚನ ಅಧ್ಯಯನ ವೇದಿಕೆ ಪುಣೆಯ ಸದಸ್ಯರು ಸಾಹಿತಿ ವಾಗ್ಮಿ
ಸಹಶಿಕ್ಷಕಿಯರು ಡಾ.ಕು.ಅನಿತಾ ಫಕೀರಪ್ಪಾ ಕಾರಾಜನಗಿ. ಜಿ.ಪ.ಪ್ರಾ.ಕನ್ನಡ ಶಾಲೆ ಮುಚ್ಚಂಡಿ ವಸ್ತಿ ಸೋನ್ಯಾಳ ತಾ- ಜತ್ತ; ಜಿ – ಸಾಂಗಲಿ ಇವರಿಗೆ ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಳಕರ ಸೊಲ್ಲಾಪುರ ವಿಶ್ವವಿದ್ಯಾಲಯ ಕನ್ನಡ ವಿಷಯದಲ್ಲಿ ಪಿ ಏಚ್ ಡಿ ಪ್ರದಾನ ಮಾಡಿದೆ.
ಇವರು ಡಾ. ಜಿ ಎಸ್ ಧಬಾಲೆ ಪ್ರಾಂಶುಪಾಲರು ಸಿ ಬಿ ಖೇಡಗಿ, ಬಸವೇಶ್ವರ ವಿಜ್ಞಾನ, ರಾಜಾ ವಿಜಯಸಿಂಹ ಕಾಮರ್ಸ & ರಾಜಾ ಜಯಸಿಂಗ ಆರ್ಟ್ಸ ಕಾಲೇಜ ಅಕ್ಕಲಕೋಟ ಜಿ: ಸೊಲ್ಲಾಪುರ ಇವರ ಮಾರ್ಗದರ್ಶನದ ಅಡಿಯಲ್ಲಿ ” ಇಂಚಗೇರಿ ಸಂಪ್ರದಾಯದ ಮಹಾದೇವರು – ಒಂದು ಅಧ್ಯಯನ ಈ ಮಹಾಪ್ರಬಂಧವನ್ನು ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಳಕರ ಸೊಲ್ಲಾಪುರ ವಿಶ್ವವಿದ್ಯಾಲಯಕ್ಕೆ ಸಾದರ ಪಡಿಸಿ Ph.D ಪದವಿಯನ್ನು ಪಡೆದಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಮತ್ತು ಕರ್ನಾಟಕದ ಸಾಹಿತ್ಯ, ಸಂಶೋಧನ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ.
ಇವರ ಅನೇಕ ಲೇಖನಗಳು Journal ಮತ್ತು ISSN, ISBN ಕೃತಿಗಳಲ್ಲಿ ಪ್ರಕಟವಾಗಿವೆ. ಗಡಿ ಕನ್ನಡ ಸಾಹಿತ್ಯ ಸಮ್ಮೇಲನ ಸಾಂಸ್ಕೃತಿಕ ಉತ್ಸವದ ಕವಿಗೋಷ್ಠಿ, ಉಪನ್ಯಾಸದಲ್ಲಿ ನಿರಂತರವಾಗಿ ಭಾಗವಹಿಸುತ್ತಾರೆ. ಇತ್ತಿಚೆಗೆ ಎಪ್ರೀಲ್ 2026 ರಲ್ಲಿ ಕನ್ನಡ ಸಾಮರಸ್ಯದ ನೆಲೆಗಳು – ಇಂಚಗೇರಿ ಮಠ ಪುಸ್ತಕದ ಲೇಖನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಹಯೋಗದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ಧಾಮಯ್ಯನವರು ಸತ್ಕರಿಸಿದ್ದಾರೆ.
ಡಾ ಅನಿತಾ ಕಾರಾಜನಗಿ ಒಬ್ಬ ಸರಳ ಸಜ್ಜನಿಕೆಯ ಸಾತ್ವಿಕ ಶಿಕ್ಷಕಿ. ಮುಂದಿನ ಶೈಕ್ಷಣಿಕ, ಸಾಹಿತ್ಯಿಕ, ಧಾರ್ಮಿಕ, ಆದ್ಯಾತ್ಕಿಕ, ಕ್ಷೇತ್ರದಲ್ಲಿ ಇವರು ಇನ್ನಷ್ಟು ಕಾರ್ಯ ಸಾಧನೆ ಮಾಡಲಿ ಎಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಅಧ್ಯಕ್ಷ ಡಾ ಶಶಿಕಾಂತ ಪಟ್ಟಣ ಸಮಸ್ತ ಲಿಂಗಾಯತ ವೆಲ್ಫೇರ್ ಟ್ರಸ್ಟ್ ಇದರ ಅಧ್ಯಕ್ಷ ಡಾ ಜಯಶ್ರೀ ಶಶಿಕಾಂತ ಪಟ್ಟಣ ಪ್ರೊ ಶಾರದಮ್ಮ ಪಾಟಿಲ ಡಾ ಸರಸ್ವತಿ ಪಾಟೀಲ ಗೌರಮ್ಮ ನಾಶಿ ಡಾ ಉಮಾಕಾಂತ ಶೆಟ್ಕರ್ ಮುಂತಾದ ಅನೇಕರು ಶುಭ ಹಾರೈಸಿದ್ದಾರೆ.
