ರೌಡಿ ನಿಗ್ರಹಕ್ಕೆ ಜಿಲ್ಲೆಗೊಂದು ಪಡೆ ಬದಲು ಕಾನೂನು ಬಾಹಿರ್ ಚಟುವಟಿಕೆಗಳ ನಿಗ್ರಹ ಪಡೆ ರಚಿಸುವಂತೆ ಮ್ಯಾಗಳಮನಿ ಒತ್ತಾಯ.

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Magalamani urges the formation of a force to suppress illegal activities instead of a force per district to suppress rowdies.

ರೌಡಿ ನಿಗ್ರಹಕ್ಕೆ ಜಿಲ್ಲೆಗೊಂದು ಪಡೆ ಬದಲು ಕಾನೂನು ಬಾಹಿರ್ ಚಟುವಟಿಕೆಗಳ ನಿಗ್ರಹ ಪಡೆ ರಚಿಸುವಂತೆ ಮ್ಯಾಗಳಮನಿ ಒತ್ತಾಯ.

ಜಾಹೀರಾತು

ಗಂಗಾವತಿ -6- ರೌಡಿ ನಿಗ್ರಹಕ್ಕೆ ಜಿಲ್ಲೆಗೊಂದು ಪಡೆ ರಚಿಸುವದಾಗಿ ಡಿ ಕೆ ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿ ಪಟ್ಟಕ್ಕೇರಿದ ತಕ್ಷಣ ಘೋಷಣೆ ಮಾಡಿದ್ದಾರೆ, ರೌಡಿಗಳ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಇದೇನು ಹೊಸ ವಿಷಯವಾಗಿರುವುದಿಲ್ಲ. ಎಂದು ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಮ್ಯಾಗಳಮನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಕ್ರಮ ಗಾಣಿಗರಿಕೆ,ಮರಳು, ಮಣ್ಣು, ದಂದೆಗಳು, ಇಸ್ಪೀಟ್ ಜೂಜಾಟ, ಮಟ್ಕಾ, ಗಾಂಜಾ ಅಫಿಮು, ಅಕ್ರಮ ಮಧ್ಯ ಮಾರಾಟ,ಇತ್ಯಾದಿ ಕಾನೂನು ಬಾಹಿರ್ ಚಟುವಟಿಕೆಕೆಗಳಿಂದ ರಾಜ್ಯದಲ್ಲಿ ರೌಡಿಗಳು ಸೃಷ್ಟಿಯಾಗುತ್ತಾರೆ. ದೊಡ್ಡ ದೊಡ್ಡ ದಂದೆಕೋರರು ತಮ್ಮ ಲಾಭಕ್ಕಾಗಿ ಬಡವರಿಗೆ ಹಣದ ಆಸೆ ತೋರಿಸಿ ಅವರನ್ನು ರೌಡಿಗಳನ್ನಾಗಿ ಸಾಕಿಕೊಂಡು ಬೆಳೆಸುತ್ತಿದ್ದಾರೆ.ಹಾಗಾಗಿ ಇಂತಹ ಚಟುವಟಿಕೆ ನಿಗ್ರಹಕ್ಕೆ ವಿವಿಧ ಅಧಿಕಾರಿಗಳು, ನೌಕರರನ್ನೊಳಗೊಂಡ ಪಡೆಯನ್ನು ಪ್ರತಿಯೊಂದು ತಾಲೂಕ ಮಟ್ಟದಲ್ಲಿ ರಚಿಸಬೇಕು. ಈ ಪಡೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಮಂತ್ರಿಗಳು ಸೇರಿದಂತೆ ಯಾವುದೇ ಜನಪ್ರತಿನಿದಿನಗಳ ಹಸ್ತಕ್ಷೇಪ ಮಾಡದಂತೆ ಈ ಅಧಿಕಾರ ನೀಡಬೇಕೆಂದು ಮುಖ್ಯಮಂತ್ರಿಗಳನ್ನು ಮ್ಯಾಗಳಮನಿ ಮಾಧ್ಯಮದ ಮೂಲಕ ಒತ್ತಾಯಿಸಿದ್ದಾರೆ.ಆಗ ಮಾತ್ರ ರೌಡಿಗಳ ನಿರ್ನಾಮ ಸಾಧ್ಯವಾಗುತ್ತದೆಂದು ಹೇಳಿದ್ದಾರೆ. ಮುಖ್ಯಮಂತ್ರಿಗಳು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಉಚಿತ ಪ್ರಯಾಣ ಮಾಡುವ ಘೋಷಣೆ ಮಾಡಿದ್ದಕ್ಕೆ ಸಂತಸದಹರ್ಷ ವ್ಯಕ್ತ ಪಡಿಸಿ. ಇದು ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಿದೆ. ಈ ತೀರ್ಮಾನ ಮಾಡಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಮ್ಯಾಗಳಮನಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Total Views: 0
Share This Article