
The stray cattle menace in Gangavathi Nagar is excessive, and the municipal council is grossly negligent
ಗಂಗಾವತಿ ನಗರದಲ್ಲಿ ಬಿಡಾಡಿ ದನಗಳ ಹಾವಳಿ ಮಿತಿಮೀರಿದ್ದು, ನಗರಸಭೆಯ ತೀವ್ರ ನಿರ್ಲಕ್ಷ್ಯ

ಗಂಗಾವತಿ ನಗರದಲ್ಲಿ ಬಿಡಾಡಿ ದನಗಳ ಹಾವಳಿ ಮಿತಿಮೀರಿದ್ದು, ನಗರಸಭೆಯ ತೀವ್ರ ನಿರ್ಲಕ್ಷ್ಯದಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಗಂಗಾವತಿ ನಗರದಲ್ಲಿ ಬಿಡಾಡಿ ದನಗಳ ಹಾವಳಿ ಮಿತಿಮೀರಿದ್ದು, ನಗರಸಭೆಯ ನಿರ್ಲಕ್ಷ್ಯದಿಂದ ಸಾರ್ವಜನಿಕರು ಸರಣಿ ಅಪಘಾತಗಳನ್ನು ಎದುರಿಸುತ್ತಿದ್ದಾರೆ. ಪ್ರಮುಖ ವೃತ್ತಗಳಲ್ಲಿ ಜಾನುವಾರುಗಳ ಅಡ್ಡಿಯಿಂದ ಸಂಚಾರಕ್ಕೆ ಅಡಚಣೆ ಮತ್ತು ಜೀವಹಾನಿಯ ಭೀತಿ ಉಂಟಾಗಿದ್ದು, ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. [

ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಈ ಕುರಿತು ಹಲವು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ದನಗಳು ಹಿಂಡು ಹಿಂಡಾಗಿ ರಸ್ತೆ ಮೇಲೆ ಬೀಡು ಬಿಡುತ್ತಿರುವುದರಿಂದ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸುತ್ತಿದೆ.

ನಗರದ ಸರಕಾರಿ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಹಿರಿಯ ನಾಗರಿಕರು ವಾಕಿಂಗ್ ಮಾಡುವದೆ ಕಷ್ಡವಾಗಿದೆ. ದನಗಳ ಸಗಣಿ ವಾಸನೆ ವಾಸನೆಇಂದ ವಾಕ್ ಮಾಡು ತೊಂದರೆ ಯಾಗುತ್ತಿದೆ (ದನಗಳು ಹುಲ್ಲುತಿನ್ನುತ್ತಿಲ್ಲ ಅನ್ನ ತಿನ್ನುವ ದರಿಂದ ವಾಸನೆ ಬರುತ್ತದೆ) ಅದರಲ್ಲೂ ಸರಕಾರಿ ಸರಕಾರಿ ಆಸ್ಪತ್ರೆ ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದನಗಳು ಜಮಾವಣೆಯಾಗುವುದರಿಂದ ರೋಗಿಗಳನ್ನು ತುರ್ತು ಚಿಕಿತ್ಸೆಗೆಂದು ಕರೆತರುವಾಗ ಇಲ್ಲಿನ ದನಗಳ ಹಿಂಡು ತಡೆಯೊಡ್ಡಿಬಿಡುತ್ತದೆ. ಕೆಲವೊಮ್ಮೆ ವಾಹನಗಳು ರಸ್ತೆಗೆ ಅಡ್ಡಲಾಗಿ ಮಲಗಿದ ದನಗಳ ಕಾಲುಗಳ ಮೇಲೆಯೇ ಹಾಯಿಸಿಕೊಂಡು ಹೋದ ಘಟನೆಗಳೂ ನಡೆದಿವೆ.
ದನಕರುಗಳ ಮಾಲಕರು ತಮ್ಮ ತಮ್ಮ ಹಸುಗಳನ್ನು ಹತೋಟಿಯಲ್ಲಿ ಇಡುತ್ತಿಲ್ಲ. ಪಟ್ಟಣದ ಪ್ರಮುಖ ರಸ್ತೆಗಳ ಮಧ್ಯದಲ್ಲಿ ನಿತ್ಯ ಬೀಡು ಬಿಡುತ್ತಿರುವ ಬಿಡಾಡಿ ದನಗಳ ತಡೆಗೆ ನಗರಸಭೆ ಕ್ರಮಕ್ಕೆ ಮುಂದಾಗದೆ ಜಾಣ ಕುರುಡು ಪ್ರದರ್ಶಿಸುತ್ತಿದೆ.
ಬೈಕ್, ಕಾರು, ಇತ್ಯಾದಿ ವಾಹನಗಳಲ್ಲಿ ಓಡಾಡುವ ಜನತೆ ಸೇರಿದಂತೆ ಪಾದಾಚಾರಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ಮೇಲೆ ಅಡ್ಡಗಟ್ಟಿ ನಿಂತ ದನಗಳ ಪರಿಣಾಮವಾಗಿಯೇ ಅಪಘಾತ ಸಂಭವಿಸಿದ ಘಟನೆಗಳು ಕೂಡ ಹಲವು ಕಡೆ ನಡೆದಿವೆ. ಇನ್ನಾದರೂ ಸ್ಥಳೀಯ ಆಡಳಿತಾಧಿಕಾರಿಗಳು, ಪೊಲೀಸ್ ಇಲಾಖೆ ದನಗಳ ಮಾಲಕರಿಗೆ ನೋಟಿಸ್ ಜಾರಿ ಮಾಡಿ ಬೀದಿ ದನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿ ಎಂಬುವುದು ಸಾರ್ವಜನಿಕರ ಆಗ್ರಹ.
ಪಟ್ಟಣದ ಪ್ರಮುಖ ರಸ್ತೆಗಳ ಮೇಲೆ ಬಿಡಾಡಿ ದನಗಳ ಹಾವಳಿ ಹೆಚ್ಚುತ್ತಿದೆ. ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು ದನಗಳ ಮಾಲಕರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮಾಲಕರನ್ನು ಗುರುತಿಸಿ ನೋಟಿಸ್ ನೀಡಬೇಕು ಮತ್ತು ದನಗಳನ್ನು ಗೋಶಾಲೆಗೆ ಸೇರಿಸಬೇಕು. ಎಂದು ಸಾರ್ವಜಕರು ಒತ್ತಾಯಿಸಿದರು.
