ದಿನಾಂಕ 20 ರಂದು ಔಷಧ ವ್ಯಾಪಾರಿಗಳ ಬಂದ್ ಇಲ್ಲ.

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

There will be no drug dealers' strike on the 20th.




ದಿನಾಂಕ 20 ರಂದು ಔಷಧ ವ್ಯಾಪಾರಿಗಳ ಬಂದ್ ಇಲ್ಲ.

ಜಾಹೀರಾತು


ಗಂಗಾವತಿ: ದಿನಾಂಕ 20 ರಂದು ದೇಶ್ಯಾಂದ್ಯಂತ ಕರೆ ನೀಡಲಾಗಿರುವ ಔಷಧ ವ್ಯಾಪಾರಿಗಳ ಬಂದ್ ಗೆ ನಮ್ಮ ಸಂಘದ ಬೆಂಬಲ ಇಲ್ಲ ಎಂದು ಕರ್ನಾಟಕ ರಾಜ್ಯ ರಿಜಿಸ್ಟರ್ಡ್ ಫ಼ಾರ್ಮಸಿಸ್ಟ ಅಸೋಸಿಯೇಷನ್ ಮತ್ತು ಫ಼ೆಡರೇಷನ್ ಆಫ಼್ ಕೆಮಿಸ್ಟ & ಡ್ರಗ್ಗಿಸ್ಟ ಆಫ಼್ ಕರ್ನಾಟಕದ ಬೆಂಬಲ ಇಲ್ಲ ಎಂದು ಅಧ್ಯಕ್ಷ ಅಶೋಕಸ್ವಾಮಿ ಹೇರೂರ ತಿಳಿಸಿದ್ದಾರೆ.

ಕಾಯ್ದೆ ಮತ್ತು ನಿಯಮಗಳ ತಿದ್ದುಪಡಿಗೆ ನಮ್ಮ ಸಂಘದ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ನ್ಯಾಯಾಲಯಗಳ ಮೂಲಕ ಹೋರಾಟ ನಡೆದಿದ್ದು ,ಈಗಾಗಲೇ ನಮ್ಮ ಪತ್ರವ್ಯವಹಾರಗಳಿಂದ ಹಲವು ನಿಯಮಗಳು ಬದಲಾಗಿದ್ದು ,ಇನ್ನೂ ಕೆಲವು ಮನವಿಗಳಿಗೆ ಸರಕಾರದ ಮನ್ನಣೆ ದೊರೆಯುವ ವಿಶ್ವಾಸ ಇರುವುದರಿಂದ ಬಂದ್ ಆಚರಿಸದಿರಲು ನಮ್ಮ ಔಷಧ ವ್ಯಾಪಾರಿಗಳಿಗೆ ಕರೆ ನೀಡಿದ್ದೇವೆ ಎಂದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಲವು ಸಂಘಗಳು ಸರಕಾರ ಮತ್ತು ಇಲಾಖೆಯ ಮೇಲೆ ಒತ್ತಡದ ತಂತ್ರ ಹೇರುವ ಮೂಲಕ ತಮ್ಮ ವಯಕ್ತಿಕ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ.ಇದರಿಂದ ನಮ್ಮ ಸಂಘದ ಸದಸ್ಯರು ಬಂದ್ ನಲ್ಲಿ ಭಾಗವಹಿಸಬಾರದು ಎಂದವರು ಕರೆ ನೀಡಿದ್ದಾರೆ.

ಇದುವರೆಗೂ ಕರೆದಿರುವ ಬಂದ್ ಗಳಿಂದ ಕಾನೂನಿನಲ್ಲಿ ಯಾವ ಬದಲಾವಣೆಗಳು ಆಗಿಲ್ಲ.ಹೀಗಾಗಿ ಬಂದ್ ಆಚರಿಸುವುದು ಅನವಶ್ಯಕ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.ಕರ್ನಾಟಕ ರಾಜ್ಯದ ಹಲವು ಕಡೆ ದಿನಾಂಕ 20ರಂದು ಎಂದಿನಂತೆ ಹಲವು ಔಷಧ ಅಂಗಡಿಗಳು ತೆರೆದಿರಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

Total Views: 0
Share This Article