ನಾಳೆ ಕೇರಳದ ಕನ್ನಡ ಪತ್ರಕರ್ತರ ಸಂಘಟನೆಯಿಂದ  ಬೆಳಗಲ್‌ಮಠ್ ವರಿಗೆ  ಕೇರಳದಲ್ಲಿ ದತ್ತಿ ಪ್ರಶಸ್ತಿ ಪ್ರಧಾನ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Tomorrow, the Kerala Kannada Journalists' Association will present a charitable award to Belagal Math in Kerala.




ನಾಳೆ  ಕೇರಳದ ಕನ್ನಡ ಪತ್ರಕರ್ತರ ಸಂಘಟನೆಯಿಂದ ಬೆಳಗಲ್‌ಮಠ್ ವರಿಗೆ  ಕೇರಳದಲ್ಲಿ ದತ್ತಿ ಪ್ರಶಸ್ತಿ ಪ್ರಧಾನ

ಜಾಹೀರಾತು

ಗಂಗಾವತಿ .ಮೇ.೧೫:ಕೇರಳ ರಾಜ್ಯದ ಕಾಸರಗೋಡಿನ ಕನ್ನಡ ಪತ್ರಕರ್ತರ ಒಕ್ಕೂಟ ನೀಡುವ ವಾರ್ಷಿಕ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ಇಲ್ಲಿನ ಹಿರಿಯ ಪತ್ರಕರ್ತ ವಿಶ್ವನಾಥ ಬೆಳಗಲ್‌ಮಠ ಅವರಿಗೆ ನಾಳೆ ಶನಿವಾರ (ಮೇ೧೬)ರಂದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.
ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆ ಮಾಡಿದವರನ್ನು ವೇದಿಕೆಯಲ್ಲಿ ದತ್ತಿನಿಧಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪತ್ರಿಕೋದ್ಯಮದಲ್ಲಿ ವಿಶ್ವನಾಥ ಬೆಳಗಲ್‌ಮಠ, ವಿಜಯಲಕ್ಷಿö್ಮ ಶಿಬರೂರು, ಬಿ.ಎಂ. ಹನೀಫ್, ಪ್ರಕಾಶ್ ಸುವರ್ಣ ಕಟಪಾಡಿ ಸೇರಿದಂತೆ ಅನೇಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಕಾಸರಗೋಡಿನ ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಸರ್ಕಾರದ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಗಳ ಜಂಟಿ ಪ್ರಾಯೋಜಕತ್ಬದಲ್ಲಿ ಶನಿವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.
ಕಾಸರಗೋಡು ಜಿಲ್ಲೆಯ ಕುಡಾಲ್ ಮೇರ್ಕಾಳ್ ಮಂಡಲದ ಸುಬ್ಬಯ್ಯನಕಟ್ಟೆ ಗ್ರಾಮದ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಬೆಳಗ್ಗೆ ೧೦ ಗಂಟೆಗೆ ಕನ್ನಡ ಸಂಸ್ಕೃತಿ ಉತ್ಸವ ಮತ್ತು ದತ್ತಿ ನಿಧಿ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಸರ್ಕಾರದ ಪರವಾಗಿ ಸಚಿವ ಭೋಸರಾಜು, ವಿಧಾನಸಭೆಯ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ರಾಜ್ಯ ಸದಸ್ಯ ಶಿವಾರೆಡ್ಡಿ ಖ್ಯಾಡೇದ್ ನವಲಿ, ಮಂಜೇಶ್ವರದ ಶಾಸಕ ಎ.ಕೆ.ಎಂ ಅಶ್ರಫ್ ಭಾಗಿಯಾಗಲಿದ್ದಾರೆ.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ,ವಿ. ಪ್ರಭಾಕರ, ಕಾನಿಪದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಕಾಸರಗೋಡಿನ ಎಡನೀರು ಮಠದ ಸಚ್ಚಿದಾನಂದ ಭಾರತೀಸ್ವಾಮೀಜಿ ಸಾನಿಧ್ಯವಹಿಸುವರು ಎಂದು ಕೆಯುಡಬ್ಲೂಜೆನ ಕಾಸರಗೋಡಿನ ಅಧ್ಯಕ್ಷ ಎ.ಆರ್. ಸುಬ್ಬಯನಕಟ್ಟೆ ತಿಳಿಸಿದ್ದಾರೆ.

Total Views: 0
Share This Article