
Give up bad habits and adopt a healthy life - Ananda Dev of Ole Matha

ದುಶ್ಚಟ ತ್ಯಜಿಸಿ ಆರೋಗ್ಯ ಜೀವನ ರೂಢಿಸಿ-ಓಲೆಮಠದ ಆನಂದ ದೇವರು

ಸಚೀನ ಆರ್ ಜಾಧವ
ಸಾವಳಗಿ: ಮನಷ್ಯ ಮನಸ್ಸು ಮಾಡಿದರೇ ಯಾವುದೂ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿ ಓಣಿ ಎಲ್ಲಿ ಸಂಚರಿಸಿ ದುಶ್ಚಟಗಳನ್ನು ಮಾಡಬಾರದು ಹಾಗೂ ಯಾರು ಮಧ್ಯಪಾನ ಮಾಡುತ್ತಿರುವವರು ನಮ್ಮ ಜೋಳಿಗೆಯಲ್ಲಿ ಮಧ್ಯಪಾನಗಳನ್ನು ಹಾಕಿ ಜೋಳಿಗೆಯಲ್ಲಿ ಹಾಕಿದ್ದಾರೆ.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಓಲೆಮಠದ ಆಶ್ರಯದಲ್ಲಿ ವ್ಯಸನಮುಕ್ತ ಗ್ರಾಮಗಳ ನಿರ್ಮಾಣದ ಸಂಕಲ್ಪದೊಂದಿಗೆ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಕುರಿತು ಜನಜಾಗೃತಿಯು ನಗರದಲ್ಲಿ ಸಂಚರಿಸಿ ದುಶ್ಚಟಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಜಾಗೃತಿ ಮೂಡಿಸಿದ್ದರು.
ನಂತರ ಓಲೆಮಠದ ಆನಂದ ದೇವರು ಮಾತನಾಡಿ ಗ್ರಾಮದಲ್ಲಿ ಜೋಳಿಗೆ ಹಿಡಿದು ಹೊರಟಾಗ ಅನೇಕರು ಬಂದು ಮದ್ಯದ ಬಾಟಲಿ, ತಂಬಾಕು, ಗುಟಕಾ ಚೀಟಿ, ಬೀಡಿ ಪಾಕೀಟು ತಂದು ಜೋಳಿಗೆಯಲ್ಲಿ ಹಾಕಿ, ಇನ್ನೂ ಮುಂದೆ ಯಾವುದೇ ದುಶ್ಚಟ ಮಾಡುವುದಿಲ್ಲವೆಂದು ರುದ್ರಾಕ್ಷಿ ಧರಿಸಿ ಪ್ರಮಾಣ ಮಾಡಿದ್ದಾರೆ. ಇದು ಅನೇಕರು ತೆಗೆದುಕೊಂಡ ಮಹತ್ವದ ನಿರ್ಧಾರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವಕರು, ರಾಜಕೀಯ ನಾಯಕರು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
