
Wrestling, Kabaddi, Volleyball Games as part of Kanakagiri Festival-2026

ಕನಕಗಿರಿ ಉತ್ಸವ–2026 ಅಂಗವಾಗಿ ಕುಸ್ತಿ, ಕಬಡ್ಡಿ, ವಾಲಿಬಾಲ್ ಕ್ರೀಡಾಕೂಟ

ಕೊಪ್ಪಳ ಮೇ 12 (ಕರ್ನಾಟಕ ವಾರ್ತೆ): ಕನಕಗಿರಿ ಉತ್ಸವ–2026ರ ಅಂಗವಾಗಿ ಕನಕಗಿರಿಯಲ್ಲಿ ಮೇ 14 ಮತ್ತು 15 ರಂದು ಪುರುಷರ ಹಾಗೂ ಮಹಿಳೆಯರ ವಿಭಾಗದ ಕುಸ್ತಿ, ಕಬಡ್ಡಿ ಹಾಗೂ ವಾಲಿಬಾಲ್ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ.
ಕನಕಗಿರಿಯ ಕೆ.ಪಿ.ಎಸ್. ಶಾಲೆ ಮೈದಾನದಲ್ಲಿ ಮೇ 14 ರಂದು ಸಂಜೆ 3 ಗಂಟೆಗೆ ಕುಸ್ತಿ ಸ್ಪರ್ಧೆಗಳು, ಸಂಜೆ 6 ಗಂಟೆಗೆ ಕಬಡ್ಡಿ ಸ್ಪರ್ಧೆ ಹಾಗೂ ಮೇ 15 ರಂದು ಸಂಜೆ 6 ಗಂಟೆಗೆ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಕುಸ್ತಿ ಕ್ರೀಡೆಯಲ್ಲಿ ಇರಾನ್ ದೇಶದ ಫ್ರೀ ಸ್ಲ್ಟೈಲ್ ಪೈಲ್ವಾನ್ ಅಕ್ಮತ್ ಪ್ರಡೆಲ್ಲಾ ಹಾಗೂ ಸೀನಿಯರ್ ನ್ಯಾಷನಲ್ ಕುಸ್ತಿ ಚಾಂಪಿಯನ್‌ಷಿಪ್ ವಿಜೇತ ಬಸವರಾಜ್ ಪಾಟೀಲ್ ವಿಶೇಷ ಆಕರ್ಷಣೆಯಾಗಿದ್ದಾರೆ. ಕಬಡ್ಡಿ ಕ್ರೀಡೆಯಲ್ಲಿ ಪ್ರೋ-ಕಬಡ್ಡಿ ಲೀಗ್‌ನ ಬೆಂಗಳೂರು ಬುಲ್ಸ್ ಮತ್ತು ಯು.ಪಿ. ಯೋಧ ತಂಡಗಳಲ್ಲಿ ಮಿಂಚಿದ ವಿವಿಧ ಆಟಗಾರರು ಪಾಲ್ಗೊಳ್ಳಲಿದ್ದಾರೆ. ವಾಲಿಬಾಲ್ ಕ್ರೀಡೆಯಲ್ಲಿ ರಾಷ್ಟç ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರಿದ ವಾಲಿಬಾಲ್ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.
ಕುಸ್ತಿ ಕ್ರೀಡೆಗೆ ವಿಶ್ವನಾಥ ಮೊ.ಸಂ: 8660455969, ಹನುಮಂತ ಮರಿಯಮ್ಮನಹಳ್ಳಿ ಅವರನ್ನು, ಕಬಡ್ಡಿ ಕ್ರೀಡೆಗೆ ಶರಣು ಗಾಡಗೊಳ್ಳಿ ಮೊ.ನಂ.: 8861116673, ಶರಣು ಬಂಡಿಹಾಳ ಮೊ.ಸಂ.: 9591292420, ರೋಹಿಣಿ ಪರ್ವತೀಕರ್ ಮೊ.ಸಂ: 8217324522, ವಾಲಿಬಾಲ್ ಕ್ರೀಡೆಗೆ ವಾಲಿಬಾಲ್ ಅಸೋಷಿಯೇಶನ್ ಕಾರ್ಯದರ್ಶಿ ರಾಜು ಜವಳಿ ಮೊ.ಸಂ: 6360357108 ಹಾಗೂ ಸುರೇಶ ಮೊ.ಸಂ: 9901527333 ಇವರನ್ನು ಮೇಲ್ವಿಚಾರಕರನ್ನಾಗಿ ನಿಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
