
Demand for smooth road connectivity to farmers' fields: Sharanabasappa Danakai

ರೈತರ ಹೊಲಗಳಿಗೆ ಸುಗಮ ರಸ್ತೆ ಸಂಪರ್ಕ ಕಲ್ಪಿಸಲು ಒತ್ತಾಯ : ಶರಣಬಸಪ್ಪ ದಾನಕೈ

ಯಲಬುರ್ಗಾ ತಾಲೂಕ ಅದ್ಯಕ್ಷ ಯಲಬುರ್ಗಾ: ಮಲಕಸಮುದ್ರ ಕೆರೆಯ ಹತ್ತಿರ ಇರುವ ಹಾಗು ಯಲಬುರ್ಗಾ ಸೀಮಾದ ರೈತರು ತಮ್ಮ ಹೊಲಗಳಿಗೆ ಹೋಗಿ ಬಿತ್ತನೆ ಮಾಡಬೇಕಾದರೆ ಕಷ್ಟ ಅನುಭವಿಸುತ್ತಿದ್ದಾರೆ ಆದ್ದರಿಂದ ರೈತರಿಗೆ ಸುಗಮ ರಸ್ತೆ ಸಂಪರ್ಕ ಕಲ್ಪಿಸಿ ಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ (ವಾಸುದೇವ ಬಣದ) ಯಲಬುರ್ಗಾ ತಾಲೂಕು ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಒತ್ತಾಯಿಸಿದ್ದಾರೆ.ಯಲಬುರ್ಗಾದ ಗಣೇಶ ದೇವಸ್ಥಾನದಿಂದ ಮಲಕಸಮುದ್ರ ಕೆರೆಯವರೆಗೆ ಇರುವ ರಸ್ತೆಯನ್ನು ಸರಿಪಡಿಸಬೇಕು ,
ಮಲಕ ಸಮುದ್ರ ಕೆರೆಯ ಪಕ್ಕದಲ್ಲಿರು ರಸ್ತೆಯಲ್ಲಿ ಹಾಪು ಹಾಗು ಮುಳ್ಳು ಕಂಠಿಗಳು ಬೆಳೆದು ದಾರಿ ಇಲ್ಲದೆ ರೈತರು ಪರದಾಡುತ್ತಿದ್ದಾರೆ, ಸರ್ವೆ ನಂವರ 255 ರ ಮುಂದಿನ ಹೊಲಗಳಿಗೆ ಹೋಗುವ ರೈತರಿಗೆ ದಾರಿಯಿಲ್ಲದೆ ರೈತರು ಜಗಳವಾಡುತ್ತಾ ಇದ್ದಾರೆ ,ಈ ಮಾರ್ಗವಾಗಿ ರಸ್ತೆ ಇರಲಾರದೆ ಬೆಸರಪಟ್ಟು 10 ವರ್ಷದಿಂದ ರೈತರು ಪಡ ಬಿದ್ದಿರುವ ತಮ್ಮ ಜಮೀನುಗಳಿಗೆ ಹೋಗಿ ಮುಳ್ಳು ಕಂಠಿ ಸ್ವಚ್ಚಗೋಳಿಸಿ ಬಿತ್ತನೆಗೆ ಹದಗೊಳಿಸಬೇಕಾದರೆ ಇಗ ಎರಡು ಎಕರೆ ಹೊಲಕ್ಕೆ ಒಂದು ಲಕ್ಷ ಅಧಿಕವಾಗಿ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಇದರಿಂದ ರೈತರ ಬದುಕು ಸಾಲದಲ್ಲಿ ಹುಟ್ಟಿ ಸಾಲದಲ್ಲಿ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಸುಗಮ ರಸ್ತೆ ಸಂಪರ್ಕ ಕಲ್ಲಿಸಲು ನಮ್ಮ ಹೊಲ ನಮ್ಮ ದಾರಿ ಯೋಜನೆಯನ್ನು ಜಾರಿಗೆ ತಂದಿದೆ,ಈ ಯೋಜನೆಯಡಿ ತೊಂದರೆಗೆ ಒಳಗಾದ ರೈತರ ಜಮೀನುಗಳಿಗೆ ಸುಗಮ ರಸ್ತೆ ಸಂಪರ್ಕ ಕಲ್ಪಿಸಲು ಮುಂದಾದರೆ , ಈ ಯೋಜನೆಯ ಸದುಪಯೋಗ ರೈತರಿಗೆ ದೊರೆತಾಗ ಮಾತ್ರ ಇಂತಹ ಯೋಜನೆಗಳಿಗೆ ಅರ್ಥಬರುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಯಲಬುರ್ಗಾ ತಾಲೂಕು ಅದ್ಯಕ್ಷ ಶರಣಬಸಪ್ಪ ದಾನಕೈ ಅವರು ಸಂಬಂಧಿಸಿದಿಸಿದ ಅಧಿಕಾರಿಗಳು ,ಜನಪ್ರತಿನಿಧಿಗಳಲ್ಲಿ ಒತ್ತಾಯಿಸಿದ್ದಾರೆ,ಒಂದು ವೇಳೆ ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಮಾನದಲ್ಲಿ ಬೀದಿಗಿಳಿದು ಹೊರಾಟ ಮಾಡಲಾಗುವದು ಎಂದು ತಿಳಿಸಿದ್ದಾರೆ.
