
Young woman missing: Request for assistance in finding her

ಯುವತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಮೇ 11 (ಕರ್ನಾಟಕ ವಾರ್ತೆ): ಗಂಗಾವತಿ ತಾಲ್ಲೂಕಿನ ಹೇರೂರ ಗ್ರಾಮದ ಸುಧಾ ಹುಸೇನಪ್ಪ ಕೆಂಚಪ್ಪನವರ ಎಂಬ 23 ವರ್ಷದ ಯುವತಿಯು 2025 ರ ಡಿಸೆಂಬರ್ 25 ರ ಬೆಳಿಗ್ಗೆಯಿಂದ ಕಾಣೆಯಾಗಿದ್ದು, ಇದುವರೆಗೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.352/2025 ಕಲಂ ಮಹಿಳೆ ಕಾಣೆ ಅಡಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಯುವತಿಯ ಚಹರೆ ವಿವರ: ಯುವತಿಯು 5 ಫೀಟ್ ಎತ್ತರವಿದ್ದು, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಪ್ಪು ಉದ್ದನೆ ಕೂದಲು ಇದ್ದು, ಜಡೆ ಹಾಕುತ್ತಾರೆ. ಕನ್ನಡ ಭಾಷೆಯನ್ನು ಮಾತ್ರ ಮಾತನಾಡುತ್ತಾರೆ. ಯುವತಿಯ ಎಡಗೈ ಮುಂಗೈನಲ್ಲಿ ಇಂಗ್ಲೀಷಿನಲ್ಲಿ `ರವಿ’ ಅಂತಾ ಹಚ್ಚೆ ಹಾಕಿಸಿಕೊಂಡಿರುತ್ತಾರೆ. ಕಾಣೆಯಾದಾಗ ಸಿಮೆಂಟ್ ಕಲರ್ ನೈಟ್ ಡ್ರೆಸ್ ಹಾಕಿಕೊಂಡಿದ್ದರು. ಈ ಚಹರೆಯ ಯುವತಿಯ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು: 08539-230222, ಪೊಲೀಸ್ ಉಪಾಧೀಕ್ಷಕರು: 08533-230853, ಆರಕ್ಷಕ ನಿರೀಕ್ಷಕರು, ಗಂಗಾವತಿ ಗ್ರಾಮೀಣ ಠಾಣೆ: 08533-230854, 9480803730 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.
