ಗಂಗಾವತಿ ಕನಕಗಿರಿ ರಸ್ತೆಯ ಶ್ರೀ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಪೂಜೆ ನೆರವೇರಿಸಿ ಕಾರ್ಯಕ್ರಮ ಸರಳವಾಗಿ ನಡೆಸುವಂತೆ ಸಭೆಯಲ್ಲಿ  ತೀರ್ಮಾನ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
The meeting decided to conduct a simple program by performing puja at Sri Hemaraddi Mallamma Circle on Gangavathi Kanakagiri Road.

 

ಗಂಗಾವತಿ: ದಿ, 10-05-2026 ರಂದು ರವಿವಾರ ನಡೆಯುವ ಶಿವಶರಣೆ, ಮಹಾಸಾಧ್ವಿ ಶ್ರೀ ಹೇಮರಡ್ಡಿ ಮಲ್ಲಮ್ಮ ಜಯಂತಿಯ ಅಂಗವಾಗಿ ಇಂದು ಗಂಗಾವತಿ ತಹಸೀಲ್ದಾರ್ ಶ್ರೀಮತಿ ವಸಂತಕುಮಾರಿ ಯವರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯಲ್ಲಿ ಕನಕಗಿರಿ ರಸ್ತೆಯ ಶ್ರೀ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಪೂಜೆ ನೆರವೇರಿಸಿ ಕಾರ್ಯಕ್ರಮ ಸರಳವಾಗಿ ನಡೆಸುವಂತೆ ಸಭೆಯಲ್ಲಿ  ತೀರ್ಮಾನಿಸಲಾಯಿತು.

ಜಾಹೀರಾತು

,10-05-2026 ರವಿವಾರ ಬೆಳಿಗ್ಗೆ 9-00 ಗಂಟೆಗೆ ತಾಲೂಕು ಆಡಳಿತದ ವತಿಯಿಂದ ಜಯಂತಿ ಕಾರ್ಯಕ್ರಮ ನಡೆಯಲಿದೆ ಮತ್ತು 10 ಗಂಟೆಗೆ ಗಂಗಾವತಿ ಕನಕಗಿರಿ ರಸ್ತೆಯ ಶ್ರೀ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಪೂಜೆ ನೆರವೇರಿಸಿ ಕಾರ್ಯಕ್ರಮ ಸರಳವಾಗಿ ನಡೆಸುವಂತೆ ಸಭೆಯಲ್ಲಿ ಸಮಾಜದ ಮುಖಂಡರು ಸಲಹೆ ನೀಡಿದರು.

ಗ್ರೇಡ್ 2 ತಹಸೀಲ್ದಾರ್ ಶ್ರೀ ಮಹಾಂತಗೌಡ ಪಾಟೀಲ್ ಸಭೆಯಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದರು. ನಂತರ ಗಂಗಾವತಿ ನೂತನ ತಹಸೀಲ್ದಾರ್ ಆಗಿರುವ ಶ್ರೀಮತಿ U. ವಸಂತಕುಮಾರಿ ಅವರಿಗೆ ತಾಲೂಕು ರಡ್ಡಿ ಸಮಾಜ ಮತ್ತು ರಡ್ಡಿ ಯುವಜನ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಆರಾಧನಾ ಸಮಿತಿ ಸದಸ್ಯರಾದ ವಿಶ್ವನಾಥ ಮಾಲಿಪಾಟೀಲ್, ರಡ್ಡಿ ಯುವಜನ ಸಂಘದ ಅಧ್ಯಕ್ಷರಾದ ಉಮೇಶ್ ಸಿಂಗನಾಳ, ಖಜಾಂಚಿ ಲಿಂಗನಗೌಡ, ಸಂಚಾಲಕರಾದ ಯರಿಸ್ವಾಮಿಗೌಡ ತೋಟದ, ಸಹ ಕಾರ್ಯದರ್ಶಿ ಜೀವನ್ ಪಾಟೀಲ್, ವಿವಿಧ ಇಲಾಖೆಗಳ ಅಧಿಕಾರಿಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Total Views: 0
Share This Article