ಗಂಗಾವತಿಯ ಪ್ರಜ್ವಲ ಯೋಗ ಕೇಂದ್ರದ ಕ್ರೀಡಾಪಟುಗಳಉತ್ತಮ ಸಾಧನೆ.

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Excellent performance by athletes from Prajwala Yoga Center in Gangavathi.




ಗಂಗಾವತಿಯ ಪ್ರಜ್ವಲ ಯೋಗ ಕೇಂದ್ರದ ಕ್ರೀಡಾಪಟುಗಳ
ಉತ್ತಮ ಸಾಧನೆ.

ಜಾಹೀರಾತು

ಗಂಗಾವತಿ: ಕೇಂದ್ರೀಯ ವಿದ್ಯಾಲಯ ಸಂಘಟನೆ ಬೆಂಗಳೂರು ಪ್ರಾದೇಶಿಕ ಕ್ರೀಡಾಕೂಟ 2026-27 ಯೋಗಾಸನ ಸ್ಪರ್ಧೆಯನ್ನು ಏಪ್ರಿಲ್-28, 29 ಮತ್ತು 30 ರಂದು ಬೆಂಗಳೂರಿನ ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯದಲ್ಲಿ ಆಯೋಜಿಸಿತ್ತು.
ಈ ಸ್ಪರ್ಧೆಯಲ್ಲಿ ಗಂಗಾವತಿ ಕೇಂದ್ರೀಯ ವಿದ್ಯಾಲಯ ಯೋಗ ಪಟುಗಳಾದ ಕೆ ಪ್ರಭಂಜನ್, ಎನ್. ಚೇತನ್ ಕೃಷ್ಣಾರೆಡ್ಡಿ, ಶ್ರೇಯ ಕುಲಕರ್ಣಿ, ನಿತಿಕಾ ಬಾಗುರ್ ಭಾಗವಹಿಸಿ ಉತ್ತಮ ಪ್ರತಿಭೆ ನೀಡಿದರು.
ಅಡರ್‌-14 ಬಾಲಕರ ವಿಭಾಗದಲ್ಲಿ ಎನ್‌. ಚೇತನ್ ಕೃಷ್ಣಾರೆಡ್ಡಿ ಭಾಗವಹಿಸಿ ಟ್ರೆಡಿಷನಲ್ ಯೋಗಾಸನ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು, ಆರ್ಟಿಸ್ಟಿಕ್ಸ್ ಸಿಂಗಲ್ ಮತ್ತು ರಿಥಮಿಕ ಸಿಂಗಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡನು.


ಅಂಡರ್‌-14 ಬಾಲಕಿಯರ ವಿಭಾಗದಲ್ಲಿ ಶ್ರೇಯಾ ಕೆ ಕುಲಕರ್ಣಿ ಟ್ರಡಿಷನಲ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಳು. ಕುಮಾರಿ ಬಿ. ನಿತಿಕ್‌, ರಿಥಮಿಕ್ ಸಿಂಗಲ್ ಮತ್ತು ಆರ್ಟಿಸ್ಟಿಕ್ಸ್ ಸಿಂಗಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಳು.
ಅಂಡರ್‌-17 ಬಾಲಕರ ವಿಭಾಗದಲ್ಲಿ ಕೆ. ಪ್ರಭಂಜನ್ ಟ್ರಡಿಷನಲ್ ಆರ್ಟಿಸ್ಟಿಕ್ಸ್ ಸಿಂಗಲ್‌ ಮತ್ತು ರಿಥಮಿಕ್ ಸಿಂಗಲ್ ಮೂರು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡನು.
ಈ ಯೋಗ ಪಟುಗಳನ್ನು ಪ್ರಗತಿ ಕ್ರೀಡಾ ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ರಜಾಕ್ ಟೈಲರ್, ನಿರ್ದೇಶಕರಾದ ಜಗನ್ನಾಥ ಆಲಂಪಲ್ಲಿ, ಪ್ರಜ್ವಲ ಯೋಗ ಕೇಂದ್ರದ ಅಧ್ಯಕ್ಷರು ಹಾಗೂ ತರಬೇತಿದಾರರಾದ ಭಾನುಪ್ರಸಾದ್ ಮತ್ತು ಪೋಷಕರು, ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಸಲ್ಲಿಸಿದರು.

Total Views: 0
Share This Article