ಫುಟ್ ಬಾತ್ ತೆರವು ಕಾರ್ಯಾಚರಣೆ ಸ್ವಾಗತ ಹಾಗೂ ಒತ್ತುವರಿ ಕಟ್ಟಡಗಳ ತೆರವಿಗೆ –ಮ್ಯಾಗಳಮನಿ ಆಗ್ರಹ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Welcome to the foot bath clearance operation and demand for the clearance of encroached buildings -- Myagalamani




ಫುಟ್ ಬಾತ್ ತೆರವು ಕಾರ್ಯಾಚರಣೆ ಸ್ವಾಗತ ಹಾಗೂ ಒತ್ತುವರಿ ಕಟ್ಟಡಗಳ ತೆರವಿಗೆ –ಮ್ಯಾಗಳಮನಿ ಆಗ್ರಹ

ಜಾಹೀರಾತು

ಗಂಗಾವತಿ,3:ನಗರದಲ್ಲಿ ಸಾರ್ವಜನಿಕ ಫುಟ್ ಬಾತ್ ಒತ್ತುವರಿ ಮಾಡಿಕೊಂಡದ್ದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಹಾಗೂ ನಗರದ ಸೌಂದರ್ಯಕ್ಕಾಗಿ ನಗರಸಭೆಯ ಪೌರಾಯುಕ್ತ ಆರ್ ವಿರೂಪಾಕ್ಷ ಮೂರ್ತಿಯವರ ಕಾರ್ಯವನ್ನು ಸರ್ವಾ0ಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಮ್ಯಾಗಳಮನಿ ಸ್ವಾಗತಿಸಿದ್ದಾರೆ.ಹಾಗೂ ರಸ್ತೆ ಒತ್ತುವರಿ ಮಾಡಿದ ಕಟ್ಟಡಗಳ ತೆರವು ಗೊಳಿಸಲು ಆಗ್ರಹಿಸಿದ್ದಾರೆ.ನಮ್ಮ ಸಂಘವು ಕೂಡ ರಸ್ತೆ ಒತ್ತುವರಿ ತೆರವು ಗೊಳಿಸುವಂತೆ ಒತ್ತಾಯ ಮಾಡಲಾಗಿತ್ತು ಮತ್ತು ಸಿಟಿ ಮಾರ್ಕೆಟ್ ಪ್ರಾರಂಭ ಮಾಡಲು ಹಲವು ಬಾರಿ ಕೆಲವು ವರ್ಷಗಳಿಂದ ಮನವಿ ಸಲ್ಲಿಸಲಾಗಿತ್ತು. ತಡವಾಗಿಯಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದನ್ನು ಮ್ಯಾಗಳಮನಿ ಪ್ರಶ0ಸಿದ್ದಾರೆ.ಈ ಕಾರ್ಯಾಚರಣೆಯು ಕೇವಲ ಬೀದಿ ಬದಿ ವ್ಯಾಪಾರ ಮಾಡುವ ಬಡವರನ್ನು ಗುರಿಯಾಗಿಸಿ ಜೆಸಿಬಿ ಘರ್ಜನೆಯಾಗಬಾರದು.ಫುಟ್ ಬಾತ್ ಮೇಲಿರುವ ಮೆಟ್ಟಿಲು ಮತ್ತು ತಗಡು ತೆರವುಗೊಳಿಸಿದರೆ ಸಾಲದು. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡ ಮಾಲೀಕರ ಕಟ್ಟಡಗಳ ಮೇಲೆ ಪಕ್ಷ ಪಾತ ಮಾಡದೇ ಜೆಸಿಬಿ ಘರ್ಜನೆ ಮಾಡಿಸಿ ತೆರವುಗೊಳಿಸಿ ಒತ್ತುವರಿ ಮಾಡಿಕೊಂಡವರ ವಿರುದ್ದ ಸರ್ಕಾರಿ ಜಾಗ ಕಬಳಿಕೆ ಮಾಡಿದ ಆರೋಪದ ಆಧಾರದ ಮೇಲೆ ಅವರ ಕೇಸ್ ಹಾಕುವದರ ಮೂಲಕ ಇನ್ನೂ ಮುಂದೆಯೂ ಯಾರೂ ಸರ್ಕಾರಿ ಜಾಗ ಒತ್ತುವರಿ ಮಾಡಬಾರದು ಎಂಬ ಸಂದೇಶ ರವಾನೆಯಾಗುತ್ತದೆ.ಹಿಂದೆ ಯಾವ ಅಧಿಕಾರಿಗಳು ಮಾಡದೇ ಇರುವದನ್ನು ನಿರ್ಭಯವಾಗಿ ಸಾಧನೆ ಮಾಡಿದಾಗ ಮಾತ್ರ ಪೌರಾಯುಕ್ತರ ಕಾರ್ಯ ಸಾರ್ಥಕವಾಗುತ್ತದೆ. ನ್ಯಾಯಯುತವಾದ ಮತ್ತು ಅಭಿವೃದ್ಧಿ ಪರ ನಮ್ಮ ಸಂಘವು ಸಂಪೂರ್ಣ ಬೆಂಬಲ ನೀಡುತ್ತದೆ..ಆಗ ನಗರದ ಎಲ್ಲಾ ನಾಗರಿಕರು ಮೆಚ್ಚುವಂತಹದ್ದಾಗುತ್ತದೆ.
ನಮ್ಮ ಸಂಘವು ಕೂಡ ಅಧಿಕಾರಿಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಗುವದು. ಒಂದು ವೇಳೆ ಒತ್ತುವರಿ ಕಾರ್ಯವು ಕೇವಲ ಬಡವರ್ಗದ ವ್ಯಾಪಾರಿಗಳ ಮೇಲೆ ಬಲ ಪ್ರಯೋಗ ಮಾಡಿದರೆ ನಮ್ಮ ಸಂಘವು ಸುಮ್ಮನೆ ಕೂಡುವುದಿಲ್ಲ, ಹೋರಾಟವನ್ನು ಹಮ್ಮಿಕೊಳ್ಳಲಾಗುವದೆಂದು ಮ್ಯಾಗಳಮನಿ ಎಚ್ಚರಿಸಿದ್ದಾರೆ.ಪೌರಾಯುಕ್ತರು ಗಂಗಾವತಿಯನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಮತ್ತು ನಗರದ ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದಾರೆ. ಅದೇ ರೀತಿ ರಸ್ತೆ ಒತ್ತುವರಿ ಮಾಡುವ ಸಂಕಲ್ಪವನ್ನು ಪೌರಾಯುಕ್ತರು ಮಾಡಿದ್ದಾರೆ. ಯಾವುದೇ ಪ್ರಭಾವಿಗಳಿಗೆ ಮಣಿಯದೇ ಅವರು ಹಿಂದೆ ಸರಿಯುವುದಿಲ್ಲ ಎಂಬ ಭರವಸೆ ಇದೆ ಎಂದು ಮ್ಯಾಗಳಮನಿ ಪತ್ರಿಕಾ ಪ್ರಕಟಣೆಯ ಮೂಲಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Total Views: 0
Share This Article