ಪಿಜಿ ಪಾಳ್ಯ ಸಫಾರಿಯಲ್ಲಿ‌ ಕರಿ ಚಿರತೆ ಬಳಿಕ ಬಿಳಿ ಜಿಂಕೆ ದರ್ಶನ.

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

After seeing a black leopard, a white deer was spotted at PG Palya Safari.




ಪಿಜಿ ಪಾಳ್ಯ ಸಫಾರಿಯಲ್ಲಿ‌ ಕರಿ ಚಿರತೆ ಬಳಿಕ ಬಿಳಿ ಜಿಂಕೆ ದರ್ಶನ.

ಜಾಹೀರಾತು


ವರದಿ: ಬಂಗಾರಪ್ಪ .ಸಿ.
ಹನೂರು : ಮಲೆ ಮಹದೇಶ್ವರ ವನ್ಯಜೀವಿಧಾಮದ ಸಫಾರಿಯಲ್ಲಿ‌ ಪ್ರಾಣಿಗಳು ದರ್ಶನ ನೀಡುತ್ತಿದ್ದು, ಸಫಾರಿಗರು ಸಂತೋಷ ಪಟ್ಟಿದ್ದಾರೆ ಎನ್ನಲಾಗಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಪಿ.ಜಿ. ಪಾಳ್ಯ ಸಫಾರಿಯಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಕರಿ ಚಿರತೆ ದರ್ಶನ ಕೊಟ್ಟಿತ್ತು. ಅದಾದ ಬಳಿಕ, ಸತತ ಎರಡು ದಿನ ಮತ್ತೆ ಬ್ಲ್ಯಾಕ್ ಫ್ಯಾಂಥರ್ ಕಂಡು ಪ್ರವಾಸಿಗರು ಪುಳಕಿತಗೊಂಡಿದ್ದರು.

ನಾಗರಹೊಳೆ ಸಫಾರಿಯಲ್ಲಿ ಮಾತ್ರ ಕರಿ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಕಳೆದ 4 ದಿನಗಳಿಂದ ಪಿ‌.ಜಿ. ಪಾಳ್ಯ ಸಫಾರಿಯಲ್ಲೂ ಕರಿ ಚಿರತೆ ದರ್ಶನ ನೀಡಿದ್ದರಿಂದ ಪ್ರವಾಸಿಗರು ಕಳೆದ ಮಂಗಳವಾರದಂದು ಕರಿ ಚಿರತೆ ಜೊತೆ ಮತ್ತೊಂದು ಚಿರತೆ ಚಿನ್ನಾಟ ಆಡುತ್ತಿದ್ದ ದೃಶ್ಯವನ್ನು ಸಫಾರಿಗರು ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದರು.

ಕರಿ ಚಿರತೆ ಬಳಿಕ ಬಿಳಿ ಜಿಂಕೆ ದರ್ಶನ: ಕರಿ ಚಿರತೆ ಬಳಿಕ ಶುಕ್ರವಾರದಂದು ಬಿಳಿ ಜಿಂಕೆ ಕಾಣಿಸಿಕೊಂಡಿದ್ದು, ಸಫಾರಿಗರು ರೋಮಾಂಚಿತರಾಗಿದ್ದಾರೆ. ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ಬಫರ್ ಜೋನ್ ವಲಯದ ವ್ಯಾಪ್ತಿಯಲ್ಲಿ ಸಫಾರಿಗೆ ತೆರಳಿದ್ದ ವೇಳೆ ಬಿಳಿ ಜಿಂಕೆ ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ. ವನ್ಯಜೀವಿ ಸಫಾರಿಯಲ್ಲಿ ಆನೆ, ಹುಲಿ, ಕಾಡೆಮ್ಮೆಗಳನ್ನು ಕಣ್ತುಂಬಿಕೊಳ್ಳುತ್ತಿದ್ದ ಸಫಾರಿಗರು ಈಗ ಕರಿ ಚಿರತೆ, ಬಿಳಿ ಜಿಂಕೆಯಂತ ಅಪರೂಪದ ಪ್ರಾಣಿಗಳನ್ನು ನೋಡಿದ ಪ್ರವಾಸಿಗರಿಗೆ ಸಂತೋಷವನ್ನೂಂಟು ಮಾಡಿದೆ ಎನ್ನಲಾಗಿದೆ.

Total Views: 0
Share This Article