ಬಲ್ಡೋಟ ತೊಲಗಿಸಿ ವೇದಿಕೆಯಲ್ಲಿ ಪರಮಾಣು ಸ್ಥಾವರ ವಿರೋಧಿ ನಿರ್ಣಯ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು
Baldota gets rid of the platform and passes an anti-nuclear plant resolution

ಬಲ್ಡೋಟ ತೊಲಗಿಸಿ ವೇದಿಕೆಯಲ್ಲಿ ಪರಮಾಣು ಸ್ಥಾವರ ವಿರೋಧಿ ನಿರ್ಣಯ

ಜಾಹೀರಾತು

ಕೊಪ್ಪಳ: ನಗರಸಭೆ ಮುಂದೆ 181 ದಿನದಿಂದ ನಡೆದಿರುವ ಕಾರ್ಖಾನೆ ಮಾಲಿನ್ಯ ನಿಯಂತ್ರಿಸಿ, ಪರಿಸರ ಉಳಿಸಿ ಹೋರಾಟ ವೇದಿಕೆಯಲ್ಲಿ ತಾಲೂಕಿನ ಬಂಡೆಕುಮಟ ಹಳೆಕುಮಟ, ಕುಮಾರ ರಾಮನಕುಮಟ ಪ್ರದೇಶದ ಏಳು ಗುಡ್ಡಗಳ ಸಾಲಿನ ಜೀವ ವೈವಿದ್ಯ, ಪಾರಂಪರಿಕ ತಾಣ, ಕೋಟೆ ಕೊತ್ತಲು, ಪ್ರವಾಸಿಗರ ನೆಚ್ಚಿನ ತಾಣಗಳು, ಪೌರಾಣಿಕ ಪ್ರತೀತಿ ಇರುವ ದೇವಸ್ಥಾನ, ಭಕ್ತರ ನೆಲೆವೀಡು ಇದಾಗಿದೆ. ಇಂಥ ಪ್ರಸಿದ್ಧ ಸ್ಥಳದಲ್ಲಿ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ ಸರ್ಕಾರ ಜಾಗದ ಹುಡುಕಾಟದಲ್ಲಿ ತೊಡಗಿದ್ದು ಜಿಲ್ಲೆಯ ಜನರ ಆತಂಕ ಹೆಚ್ಚು ಮಾಡಿದೆ.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ಈ ಹಿಂದೆ ಅರಸಿನಕೇರಿ, ಚಿಕ್ಕಬೆಣಕಲ್ ಗ್ರಾಮದಲ್ಲಿ ಭೂಮಿ ಗುರುತಿಸಲು ಮುಂದಾದಾಗ ಆ ಗ್ರಾಮಗಳ ಜನರನ್ನು ಸಂದಿಸಿ ಹೋರಾಟ ಮಾಡಲು ನಿರ್ಣಯ ಮಾಡಲಾಗಿತ್ತು. ಅದರಂತೆ ಅರಸನಕೇರಿ, ಹೇಮಗುಡ್ಡದ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ರೈತರು, ಸಂಘಟನೆಗಳು, ಗ್ರಾಮಸ್ಥರು ಬೃಹತ್‌ ಪ್ರತಿಭಟನೆ ಮಾಡಿದ ಪರಿಣಾಮ ಅರಸಿನಕೇರಿ, ಚಿಕ್ಕಬೆಣಕಲ್ ಬಳಿ ಅಣುಸ್ಥಾವರ ನಿರ್ಮಾಣದ ಪ್ರಸ್ತಾವ ಕೈಬಿಡಲಾಗಿತ್ತು. ಇದೀಗ ಚಿಕ್ಕಬೆಣಕಲ್ ಗ್ರಾಮಕ್ಕೆ 2ಕಿ.ಮೀ. ದೂರದಲ್ಲಿರುವ ಬಂಡೆಕುಮಟ ಗ್ರಾಮದಲ್ಲಿ ಸ್ಥಳ ಹುಡುಕಾಟ ನಡೆಯುತ್ತಿರುವುದು ಸರಿಯಲ್ಲ ಎಂದು ಜಂಟಿ ಕ್ರಿಯಾ ವೇದಿಕೆಯಿಂದ ಖಂಡಿಸಲಾಯಿತು.
ಪಕ್ಕದಲ್ಲಿರುವ ತುಂಗಭದ್ರಾ ಜಲಾಶಯ ರೈತರ ಜೀವನಾಡಿಯಾಗಿದ್ದು, ಅಣೆಕಟ್ಟೆ ಅಪಾಯಕ್ಕೆ ಸಿಲುಕುತ್ತದೆ. ಇಲ್ಲಿಯೇ ಮೋರೆರ ಶಿಲಾ ಸಮಾಧಿಗಳು ಇರುವ ಬೆಟ್ಟ, ಕುಮ್ಮಟದುರ್ಗಾ, ಕುಮಾರರಾಮನ ಬೆಟ್ಟ, ಅಂಜನಾದ್ರಿ ಬೆಟ್ಟ ಹಾಗೂ ಕಾಯ್ದಿಟ್ಟ ಅರಣ್ಯ ಪ್ರದೇಶ, ತೋಳ ಸಂರಕ್ಷಣಾ ವಲಯವಿದೆ. ಇಲ್ಲಿ ಚಿರತೆ, ಕರಡಿ, ನವಿಲು, ಕಾಡುಹಂದಿ, ಜಿಂಕೆ, ಮೊಲ, ಸೇರಿ ವಿವಿಧ ಪ್ರಕಾರದ ಪ್ರಾಣಿ ಸಂಕುಲವಿದೆ. ಎಡದಂಡೆ ಕಾಲುವೆ ಪಕ್ಕದಲ್ಲಿದ್ದು ಇಲ್ಲಿ ಪರಮಾಣು ಸ್ಥಾವರ ನಿರ್ಮಿಸಿದರೆ ಇವೆಲ್ಲಾ ನಾಮಾವಶೇಷವಾಗಲಿವೆ. ಅಣುಸ್ಥಾವರದಿಂದ ಹೊರಬರುವ ವಿಕಿರಣಗಳು ಗಾಳಿಯಲ್ಲಿ ಸೇರಿ ಸುತ್ತಲ 40 ಕಿ. ಮೀ. ವ್ಯಾಪ್ತಿಯಲ್ಲಿ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ, ಎಲ್ಲಾ ತರದ ಜೀವಸಂಕುಲ ಪರಿಸರ ನಾಶವಾಗುವ ಕಾರಣದಿಂದ ಅಸ್ಥಿತ್ವ ಕಳೆದುಕೊಳ್ಳುವಂತಾಗುತ್ತದೆ.
ಇಂತಹದ್ದೆ ದುಷ್ಪರಿಣಾಮವನ್ನು ಕೊಪ್ಪಳ ನಗರಕ್ಕೆ ಹೊಃದಿಕೊಂಡು ಬೃಹತ್ ಬಂಡವಾಳ ಹೂಡಿಕೆ ಮಾಡಿ ಬಲ್ಡೋಟ ಕೊಪ್ಪಳ, ಭಾಗ್ಯನಗರದ ಒಂದೂವರೆ ಲಕ್ಷ ಜನರ ಜೀವ, ಆರೋಗ್ಯ ಕಸಿದುಕೊಳ್ಳಲು ಹೊರಟಿದ್ದು, ಇದನ್ನೂ ಸೇರಿಸಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ರೂಪಿಸಲು ವೇದಿಕೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಕಾರ್ಖಾನೆ ಬಾಧಿತ 22 ಹಳ್ಳಿಗಳು, ಅದರಲ್ಲಿ ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಕಾರ್ಖಾನೆಗಳನ್ನು ಸ್ಥಳಾಂತರ ಮಾಡಬೇಕು, ಬಲ್ಡೋಟ ಅತಿಕ್ರಮಣದಿಂದ ಬಸಾಪುರ ಕೆರೆ ಜಾನುವಾರು ನೀರು ಕುಡಿಯಲು ಮುಕ್ತಗೊಳಿಸಬೇಕು, ತುಂಗಭದ್ರಾ ನೀರು ವಿಷಗೊಳಿಸುವ ಕಾರ್ಖಾನೆಗಳನ್ನು ಮುಚ್ಚಬೇಕು, ಎಐಐಎಂಎಸ್, ಐಐಎಸ್ಸಿ ಸಂಸ್ಥೆಗಳ ಮೂಲಕ ಆರೋಗ್ಯ ಮತ್ತು ಪರಿಸರ ಹಾನಿ ಸಮೀಕ್ಷೆ ಮಾಡಬೇಕು ಎಂದು ಹೋರಾಟ ಮುಂದುವರೆಯುತ್ತಿದೆ.
ತಕ್ಷಣದಿಂದಲೆ ಮಾನವ ವಿನಾಶಕಾರಿಯಾದ, ಜೀವ ಸಂಕುಲ ವಿರೋಧಿಯಾದ ಪರಮಾಣು ಸ್ಥಾವರ ನಿರ್ಮಾಣ ಯೋಜನೆ ಕೈಬಿಡಬೆಕೆಂದು ಆಗ್ರಹಿಸಿ ಹೋರಾಡಲು ವೇದಿಕೆ ತೀರ್ಮಾನ ಕೈಗೊಂಡಿತು.
ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ರವಿ ಕಾಂತನವರ, ಪ್ರಕಾಶಕ ಡಿ.ಎಂ.ಬಡಿಗೇರ, ಶಿವಾನಂದಯ್ಯ ಬೀಳಗಿಮಠ, ಶರಣು ಶೆಟ್ಟರ್, ಶಂಭುಲಿಂಗಪ್ಪ ಹರಗೇರಿ, ಅಮರೇಶ ಕರಡಿ, ಶೇಖಪ್ಪ ಮೈನಹಳ್ಳಿ, ಮಹಾದೇವಪ್ಪ ಮಾವಿನಮಡು, ಗುಡದಪ್ಪ ಕರಿಗಾರ, ಯಮನೂರಪ್ಪ ಹಾಲಳ್ಳಿ, ನಾಗರಾಜ ಕುಷ್ಟಗಿ, ಮಹಿಳಾ ನಾಯಕಿ ಕಾವ್ಯ ಪ್ರಸನ್ನ ಗಡಾದ, ವಿಜಯಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ, ಕನಕಪ್ಪ ಪೂಜಾರ, ಬಸವರಾಜ ಹೂಗಾರ, ಪಾಂಡುರಂಗಪ್ಪ ಗೌಡ್ರು, ಗವಿಸಿದ್ದಪ್ಪ ಗೌಡ್ರು, ಬಸವರಾಜಪ್ಪ ಶೆಟ್ಟರ್, ರಾಮಲಿಂಗಯ್ಯ ಶಾಸ್ತ್ರಿ, ಭೀಮಪ್ಪ ಯಲಬುರ್ಗಾ, ಗಂಗಮ್ಮ ಕುರುಗೋಡ ಇತರರು ಇದ್ದರು.

Total Views: 1
Share This Article